LOCAL NEWS : ನಾಳೆ ಪಟ್ಟಣದಲ್ಲಿ ಅಯೋಧ್ಯೆ ರಾಮಮಂದಿರ ಮಾದರಿ ಪ್ರದರ್ಶನ ಕಾರ್ಯಕ್ರಮ

You are currently viewing LOCAL NEWS : ನಾಳೆ ಪಟ್ಟಣದಲ್ಲಿ ಅಯೋಧ್ಯೆ ರಾಮಮಂದಿರ ಮಾದರಿ ಪ್ರದರ್ಶನ ಕಾರ್ಯಕ್ರಮ

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ನಾಳೆ ಪಟ್ಟಣದಲ್ಲಿ ಅಯೋಧ್ಯೆ ರಾಮಮಂದಿರ ಮಾದರಿ ಪ್ರದರ್ಶನ ಕಾರ್ಯಕ್ರಮ

ಮುದಗಲ್ಲ :- ಸ್ಥಳೀಯ ಆರ್ಯವೈಶ್ಯ ಸಮಾಜದ ನಗರೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಪಟ್ಟಣದ ವಾಸವಿ ಕಲ್ಯಾಣ ಮಂಟಪ, ನಗರೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆ ರಾಮ ಮಂದಿರ ಮತ್ತು ಬಾಲರಾಮನ ಮಾದರಿ ಪ್ರದರ್ಶನ ದಿನಾಂಕ :-2-06 -2025 ಸೋಮವಾರ ದಿಂದ ದಿನಾಂಕ :/08-06-2025 ರವಿವಾರದವರೆಗೆ ಪತ್ರಿದಿನ ಸಾಯಂಕಾಲ ಸಂಜೆ :- 05:30 ರಿಂದ ರಾತ್ರಿ :- 8:- 30 ರವರೆಗೆ ಪ್ರದರ್ಶನವು ಭಕ್ತರಿಗೆ ಲಭ್ಯವಿದೆ. ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯುತ್ತದೆ.ಎಲ್ಲರಿಗೂ ಅಯೋಧ್ಯೆಗೆ ತೆರಳಿ ಶ್ರೀರಾಮ ಮಂದರಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇವರು ಎಲ್ಲೆಡೆ ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮೂರು ಮಹಡಿಯನ್ನು ನಿರ್ಮಿಸಲಾಗಿದ್ದು, ನೆಲಮಹಡಿಯಲ್ಲಿ ಬಾಲರಾಮನ ಭಾವಚಿತ್ರ ಇರಿಸಲಾಗಿದೆ. ಸಂಚಾರಿ ಮಂದಿರವಾಗಿದ್ದರಿoದ ಅದನ್ನು ಬಿಡಿಸಿಟ್ಟು ಪುನಃ ಜೋಡಿಸುವ ವ್ಯವಸ್ಥೆ ಮಾಡಲಾಗಿದೆ. ಸುಮಾರು 80 ಕೆ.ಜಿ ತೂಕವಿದ್ದು ಇದಕ್ಕೆ ಲೈಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದು, ಅಯೋಧ್ಯೆಯ ಶ್ರೀರಾಮ ಮಂದಿರ ಹೋಲಿಕೆ ಆಗುತ್ತಿದೆ.

ಐತಿಹಾಸಿಕ ಮುದಗಲ್ಲ ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ 08 ದಿನಗಳವರೆಗೆ ಈ ಉಚಿತ ಪ್ರದರ್ಶನ ನಡೆಯಲಿದೆ. ಇದನ್ನು ಥರ್ಮಾಕೋಲ್, ಟೂತ್ ಪೀಕ್, ಅರ್ಕಾಲಿಕ್ ವಾಟರ್ ಪೇಂಟ್, ಗುಂಡುಸೂಜಿ ಹಾಗೂ ಫೆವಿಕಾಲ್ ಬಳಸಿ ತಯಾರಿಸಿದ್ದು, ವಿನಯ್ ರಾಮ ಅವರು ಸಿದ್ದಪಡಿಸಿದ್ದಾರೆ. ಇವರು ಮೂಲತಃ ತುಮಕೂರಿನ ಗುಬ್ಬಿ ತಾಲ್ಲೂಕಿನವರು.

ಮಂದಿರವನ್ನು ತಯಾರಿಸಿದ ವಿನಯ ರಾಮ್ ಅವರು ಮುದಗಲ್ಲ ಪತ್ರಿಕೆ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಶ್ರೀರಾಮನ ಆದರ್ಶ, ಚಿಂತನೆಯನ್ನು ಜನಸಾಮಾನ್ಯರಿಗೆ ತಲುಪಿಸುವಂತಹ ಕಾರ್ಯವನ್ನು ಕೈಗೊಂಡಿದ್ದು ನಿರಂತರ ಪ್ರಯಾಣ ಬೆಳೆಸುತ್ತಿದ್ದೇವೆ. ಉಚಿತವಾಗಿ 108 ಕಡೆ ಪ್ರದರ್ಶನವನ್ನು ನೀಡುವ ಸಂಕಲ್ಪವನ್ನು ಕೈಗೊಂಡಿದ್ದು, ಮೈಸೂರಿನ ನೋಟು ಮುದ್ರಣ ಸಂಸ್ಥೆಯಲ್ಲಿ, ಶೃಂಗೇರಿಯ ಮಠದಲ್ಲಿ, ಮಂತ್ರಾಲಯದಲ್ಲಿ, ಹೀಗೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪ್ರದರ್ಶನಗೊಂಡಿದ್ದು, ಈಗ ಮುದಗಲ್ಲ ಪಟ್ಟಣದ ಶ್ರೀ ನಗರೇಶ್ವರ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಪ್ರದರ್ಶನವಾಗಿದೆ ಪ್ರದಶ೯ನ ಸಮಯ ದಿನಾಂಕ :-2-06 -2025 ಸೋಮವಾರದಿಂದ ದಿನಾಂಕ :/08-06-2025 ರವಿವಾರದವರೆಗೆ ಪತ್ರಿದಿನ ಸಾಯಂಕಾಲ ಸಂಜೆ :- 05:30 ರಿಂದ ರಾತ್ರಿ :- 8:- 30 ರವರೆಗೆ ಪ್ರದರ್ಶನವಾಗಿದೆ ಈಗ ಮುದಗಲ್ಲ ಪಟ್ಟಣದಲ್ಲಿ 82 ನೇ ಪ್ರದರ್ಶನವಾಗಲಿದೆ.

ರಾಜ್ಯದಾದ್ಯಂತ 108 ಸ್ಥಳಗಳಲ್ಲಿ ಅಯೋಧ್ಯೆ ರಾಮ ಮಂದಿರ ಮಾದರಿ ಪ್ರದರ್ಶನ ಮಾಡಲು ಸಂಕಲ್ಪಿಸಿದ್ದರು. ಈಗಾಗಲೇ ರಾಜ್ಯದ 82 ಕಡೆ 14 ಜಿಲ್ಲೆಗಳಲ್ಲಿ 34 ವಿವಿಧ ಮಠಮಾನ್ಯಗಳು ಸೇರಿದಂತೆ 81 ಸ್ಥಳಗಳಲ್ಲಿ ಪ್ರದರ್ಶನ ಮಾಡಿದ್ದೇವೆ
ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಬದ್ರಿ ನಾರಾಯಣ ಸೂರಪೂರ, ಉಪಾಧ್ಯಕ್ಷರಾದ ವಸಂತ ಸೂರಪೂರ,ಬದ್ರಿ ನಾರಾಯಣ ತವರಗೇರಾ , ಶ್ರಿ ನಾಗರೇಶ್ವರ ದೇವಸ್ಥಾನ ಶ್ರೀ ವಾಸವಿ ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು…

ವರದಿ:- ಮಂಜುನಾಥ ಕುಂಬಾರ.

Leave a Reply

error: Content is protected !!