ಮುದಗಲ್ಲ :- ದೇವಿ ಪುರಾಣವೆಂದರೆ ಸೃಷ್ಟಿ ಮಾಡಿದ ಜಗಜ್ಜನನಿಯ ಸ್ಮರಣೆ: ಸಿದ್ದಯ್ಯ ಸ್ವಾಮಿ ಸಾಲಿಮಠ…

ಮುದಗಲ್ಲ ವರದಿ..

ದೇವಿ ಪುರಾಣವೆಂದರೆ ಸೃಷ್ಟಿ ಮಾಡಿದ ಜಗಜ್ಜನನಿಯ
ಸ್ಮರಣೆ: ಸಿದ್ದಯ್ಯ ಸ್ವಾಮಿ ಸಾಲಿಮಠ…

ವರದಿ:-ಮಂಜುನಾಥ ಕುಂಬಾರ

ಮುದಗಲ್ಲ:-  ಪಟ್ಟಣದ ಸಾಲಿಮಠದಲ್ಲಿ ನವರಾತ್ರಿ ಉತ್ಸವದಂಗವಾಗಿ ಹಮ್ಮಿಕೊಂಡ ಶ್ರೀಶಾಂಭವಿ ಮಾತೆಯ
ದೇವಿ ಪುರಾಣ ಪ್ರವಚನವು ಸಾಲಿಮಠದ ಸಿದ್ದಯ್ಯ ಸ್ವಾಮಿ ಸಾನಿಧ್ಯದಲ್ಲಿ ವಿಜಯ ದಶಮಿ ಪ್ರಯುಕ್ತ 9 ದಿನಗಳ ವರೆಗೂ ಪ್ರತಿ ದಿನ ಸಂಜೆ 7 ರಿಂದ 9:30 ಗಂಟೆ ವರಗೆ ನಡೆಯುವ ಶಾಂಭವಿ ಮಾತೆಯ ಪುರಾಣ ಪಠಣ ಶನಿವಾರ ಮಾತೆಯ ಶ್ರದ್ಧಾ ಭಕ್ತಿ ಯಿಂದ ವೇದ ಘೋಷಗಳೊಂದಿಗೆ ಆರಂಭವಾಯಿತು.

ಮಾತೆಯ ದೇವಿ ಪುರಾಣ ಪ್ರವಚನವು ಸಾಲಿಮಠದ ಸಿದ್ದಯ್ಯ ಸ್ವಾಮಿ ಆಶೀರ್ವಚನ ನೀಡಿದರು. “ದೇವಿ ಪುರಾಣ ಎಂದರೆ ಈ ಸೃಷ್ಟಿಯನ್ನು ಮಾಡಿರುವ ಜಗಜ್ಜನನಿಯನ್ನು ಸ್ಮರಣೆ ಮಾಡಿಕೊಳ್ಳುವುದು. ಸೃಷ್ಟಿಯ ಚೈತನ್ಯವಾಗಿರುವಂತ ದೇವಿಯನ್ನು ಸ್ಮರಣೆ ಮಾಡುವುದರ ಮೂಲಕ ದೇಹವನ್ನು ವಿಮರ್ಶೆ ಮಾಡಿಕೊಳ್ಳುವುದಾಗಿದೆ.

ಮನುಷ್ಯನಲ್ಲಿ ಅಸುರಿ ಗುಣಗಳು ದೂರವಾಗಿ ಉತ್ತಮ ಗುಣಗಳು ರೂಢಿಯಾಗಬೇಕು. ದೇವಿ ಪುರಾಣ ಎಂದರೆ ನಮ್ಮದೇ ದೇಹದ ಪುರಾಣವಾಗಿದೆ. ಜೀವನ
ಸಂತೋಷಮಯವಾಗಬೇಕೆಂದರೆ ಪುಣ್ಯಕಥೆಗಳನ್ನು ಕೇಳಿ,
ಸಂತರ ದರ್ಶನ ಮಾಡಬೇಕು”ಮನುಷ್ಯನಲ್ಲಿಯ ಅರಿಷಡ್ವರ್ಗ
ಗಳನ್ನು ತ್ಯಜಿಸುವ ತತ್ವ ಬೋಧನೆ ಗಳನ್ನು ಒಳಗೊಂಡ ದೇವಿ ಪುರಾಣವು ದೇಹದ ಪುರಾಣವಾಗಿದೆ

ಕಾಮ, ಕ್ರೋದ, ಲೋಭ, ಮದ, ಮತ್ಸರಗಳೆಂಬ ಅಜ್ಞಾನ ಅಳಿಸಿ ಸುಜ್ಞಾನದ ಬೆಳಕನ್ನು ಜೀವನದಲ್ಲಿಅಳವಡಿಸಿಕೊಳ್ಳುವುದೇ ದೇವಿ ಪುರಾಣದ ಸಾರವಾಗಿದೆ. ದೇವಿ ಪುರಾಣದಲ್ಲಿರಕ್ತ ಬೀಜಾಸುರರೆಂಬ ರಾಕ್ಷಸರೇ ಮನುಷ್ಯನಲ್ಲಿಯ ಅವಗುಣಗಳ ಪಾತ್ರಧಾರಿಗಳಾಗಿದ್ದಾರೆ. ದೇವಿಯು ಅವರನ್ನು ತನ್ನ ಶಕ್ತಿಯಿಂದ ದ್ವಂಸ ಮಾಡಿ ಜಗತ್ತಿಗೆ ಬೆಳಕು ನೀಡಿ ವಿಜಯದಶಮಿ ಆಚರಿಸಿದಳು. ಈ ನಿಟ್ಟಿನಲ್ಲಿನಮ್ಮ ನಾಡಿನ ಶಿವ ಶರಣರು ಜ್ಞಾನ ಧರಿಸಿಕೊಂಡು ಮಹಾತ್ಮರಾಗಿದ್ದಾರೆ

ಅದರಂತೆ ಈರಪ್ಪ ಹಡಪದ ಅವರು ಆಧುನಿಕ ಯುಗ, ವಿಜ್ಞಾನ ತಂತ್ರಜ್ಞಾನ ಎಷ್ಟೇ ಪ್ರಗತಿ ಸಾಧನೆ ಆಗಿದ್ದರೂ ಸಹ ನಾವಿಂದು ಭಾರತೀಯ ಸಂಸತಿ, ಸಂಸ್ಕಾರ,ಪರಂಪರೆಯನ್ನು ಪರಿಪಾಲಿಸ ಲೇಬೇಕಿದೆ. ಹಿರಿಯರು,ದಾರ್ಶನಿಕರು, ಅನುಭಾವಿಗಳು ತಮ್ಮ ಅನುಭವ ಮತ್ತು ವಿಜ್ಞಾನದ ಆಧಾರದ ಮೇಲೆ ಸಂಪ್ರದಾಯ, ಆಚಾರ ವಿಚಾರಗಳನ್ನು ಮಾಡಿದ್ದಾರೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಪಾವನಗೊಳ್ಳುತ್ತದೆ ಎಂದರು.ಶ್ರದ್ಧೆಯಿಂದ ಪುರಾಣ ಆಲಿಸಬೇಕೆಂದು ಹೇಳಿದರು

ಈ ಸಂದರ್ಭದಲ್ಲಿ ಶಾಂಭವಿ ಸದ್ಭಕ್ತ ಮಂಡಳಿ,ಹಾಗೂ ಭಕ್ತರಿದ್ದರು ಉಪಸ್ಥಿತ ರಿದ್ದರು.

Leave a Reply

error: Content is protected !!