ಕೊಪ್ಪಳ : ಕುಷ್ಟಗಿ ಪಟ್ಟಣದಲ್ಲಿ ವಾಸವಿರುವ ಧಾರವಾಡ ಮೂಲದ 27 ವರ್ಷದ ಮಧುರಾ ತಂದೆ ವೆಂಕಟನರಸಿಂಹಚಾರ್ಯ ಜೋಶಿ ಎಂಬ ಯುವತಿ 2025ರ ಆಗಸ್ಟ್ 15 ರಿಂದ ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:193/2025, ಕಲಂ 00ಎಂಪಿ ಭಾರತೀಯ ನ್ಯಾಯ ಸಂಹಿತೆ 2023 ಮಹಿಳೆ ಕಾಣೆ ರೀತ್ಯ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ:
ಕಾಣೆಯಾದ ಮಹಿಳೆಯು 4.10 ಅಡಿ ಎತ್ತರ, ದುಂಡು ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಕೇಸರಿ ಬಣ್ಣದ ಚೂಡಿದಾರ ಧರಿಸಿದ್ದರು. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ ಎಂದು ತಿಳಿದು ಬಂದಿದೆ.
ಮೇಲ್ಕಂಡ ಚಹರೆಯ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಕುಷ್ಟಗಿ ಪೊಲೀಸ್ ಠಾಣೆ ಸಿ.ಪಿ.ಐ ದೂ.ಸಂ: 9480803732, ಕುಷ್ಟಗಿ ಪೊಲೀಸ್ ಠಾಣೆ ಪಿ.ಎಸ್.ಐ ದೂ.ಸಂ: 9480803757, ಗಂಗಾವತಿ ಡಿ.ಎಸ್.ಪಿ ದೂ.ಸಂ: 9480803721 ಹಾಗೂ ಕೊಪ್ಪಳ ಎಸ್‌ಪಿ ಕಚೇರಿ ಸಂಖ್ಯೆ: 08539-230111 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಕುಷ್ಟಗಿ ಪೊಲೀಸ್ ಠಾಣೆಯ ಪ್ರಕಟಣೆ ಕೋರಿದೆ.