You are currently viewing LOCAL NEWS : ಕುಕನೂರು |ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ 112 ಪೊಲೀಸ್ ಎಮರ್ಜೆನ್ಸಿ ಸೇವೆ ಕುರಿತು ಜಾಗೃತಿ”

LOCAL NEWS : ಕುಕನೂರು |ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ 112 ಪೊಲೀಸ್ ಎಮರ್ಜೆನ್ಸಿ ಸೇವೆ ಕುರಿತು ಜಾಗೃತಿ”

LOCAL NEWS : ಕುಕನೂರು |ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ 112 ಪೊಲೀಸ್ ಎಮರ್ಜೆನ್ಸಿ ಸೇವೆ ಕುರಿತು ಜಾಗೃತಿ”

ಪ್ರಜಾವೀಕ್ಷಣೆ ಸುದ್ದಿ:-

ಕುಕನೂರ : ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರೈತರು ಹಾಗೂ ವ್ಯಾಪಾರಸ್ಥರಿಗೆ 112 ಪೊಲೀಸ್ ಎಮರ್ಜೆನ್ಸಿ ಸೇವೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಯಲಬುರ್ಗಾ ಪೊಲೀಸ್ ಠಾಣೆಯ ಮಾರುತಿ ಎ. (ಹೆಡ್ ಕಾನ್ಸ್ಟೇಬಲ್) ಮಾತನಾಡಿ, ಸಾರ್ವಜನಿಕ ಸುರಕ್ಷತೆಯಲ್ಲಿ 112 ತುರ್ತು ಸೇವೆಯ ಮಹತ್ವವನ್ನು ವಿವರಿಸಿದರು.

ಅಗ್ನಿ ಅವಘಡ, ಕಳ್ಳತನ, ಅಪಘಾತ, ಗಲಾಟೆ ಸೇರಿದಂತೆ ಯಾವುದೇ ತರಹದ ತುರ್ತು ಪರಿಸ್ಥಿತಿ ಸಂಭವಿಸಿದಲ್ಲಿ ವಿಳಂಬ ಮಾಡದೇ 112ಕ್ಕೆ ಕರೆ ಮಾಡಿ ಪೊಲೀಸ್ ಸಹಾಯ ಪಡೆಯಬೇಕೆಂದು ಅವರು ಸಲಹೆ ನೀಡಿದರು.

112 ಸೇವೆಯ ಮೂಲಕ ತಕ್ಷಣ ಸ್ಪಂದನೆ ಲಭ್ಯವಾಗುತ್ತದೆ ಎಂಬುದನ್ನು ಅವರು ರೈತರಿಗೆ ಮನವರಿಕೆ ಮಾಡಿದರು.

ಇದೇ ಸಂದರ್ಭದಲ್ಲಿ ಅಕ್ರಮ ಗೋ ಸಾಗಾಣಿಕೆ, ಅಸ್ಪೃಶ್ಯತೆ, ಕೋಮು ಗಲಭೆ, ಮಾದಕ ದ್ರವ್ಯಗಳಾದ ಡ್ರಗ್ಸ್ ಹಾಗೂ ಆಫೀಮು ಮಾರಾಟ–ಸೇವನೆ, ಓಸಿ–ಇಸ್ಪೀಟ್ ಜೂಜಾಟ, ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ಸಾಗಣೆ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣ 112ಕ್ಕೆ ಕರೆ ಮಾಡುವಂತೆ ತಿಳಿಸಲಾಯಿತು.

ಇತ್ತೀಚೆಗೆ 5G ಸೇವೆ ಆರಂಭವಾಗಿದೆ ಎಂದು ಹೇಳಿ, ಸಿಮ್ ಅನ್ನು 4Gನಿಂದ 5Gಗೆ ಅಪ್‌ಡೇಟ್ ಮಾಡುವುದಾಗಿ ಕರೆ ಮಾಡಿ ಮೊಬೈಲ್‌ಗೆ ಬರುವ OTP ಕೇಳುವ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಯಾವುದೇ ಕಾರಣಕ್ಕೂ OTP ನೀಡಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಯಿತು.

ಅಲ್ಲದೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ 112 ಕೊಪ್ಪಳ ಪುಟವನ್ನು ಫಾಲೋ ಮಾಡಿ, ಲೈಕ್ ಹಾಗೂ ಶೇರ್ ಮಾಡುವಂತೆ ಸಲಹೆ ನೀಡಲಾಯಿತು.

ಯಲಬುರ್ಗಾ–ಕುಕನೂರ ERSS 112 ಪೊಲೀಸ್ ಸಿಬ್ಬಂದಿ ಮಾರುತಿ ಅವರ ನೇತೃತ್ವದಲ್ಲಿ ಈ ಜಾಗೃತಿ ಕಾರ್ಯ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಣಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಲೇಬಗೇರಿ, ಪಾಲಕ್ಷಪ್ಪ ಬೆಣಕಲ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದು, ಜಾಗೃತಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ : ಭೀಮಾಶಂಕರ ಪಾಣೇಗಾಂವ, ಕುಕನೂರು.

Prajavikshane

Chandru R Bhanapaur

Leave a Reply

error: Content is protected !!