LOCAL BREAKING : ಸಮಸ್ಯೆ ಹೇಳಿದ ಮಹಿಳೆಯರ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ!!

You are currently viewing LOCAL BREAKING : ಸಮಸ್ಯೆ ಹೇಳಿದ ಮಹಿಳೆಯರ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ!!

ಸಮಸ್ಯೆಯನ್ನು ಹೇಳಿದ ಮಹಿಳೆಯರ ಮೇಲೆ ದರ್ಪ ತೋರಿದ ಶಾಸಕ ಡಾ ಚಂದ್ರು ಲಮಾಣಿ

ಲಕ್ಷ್ಮೇಶ್ವರ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ 17ನೇ ವಾರ್ಡಿನಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು ಇಲ್ಲದೆ ನಿವಾಸಿಗಳು ತಮ್ಮ ಅಳಲನ್ನು ಹೇಳಿಕೊಳ್ಳಲು ಬಂದರೆ, ಅವರ ಮೇಲೆ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ ಚಂದ್ರು ಲಮಾಣಿ ಅವರು ಏರು ಧ್ವನಿಯಲ್ಲಿ ದರ್ಪ ತೋರಿದ್ದಾರೆ.

ನೀವು ಮೊದಲು ಸೈಟ್ ತೆಗೆದುಕೊಳ್ಳುವಾಗ ವಿಚಾರ ಮಾಡಬೇಕಿತ್ತು ಎಂದು ಸಾರ್ವಜನಿಕರಿಗೆ ಶಾಸಕರು ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದರಿಂದ ಗೊತ್ತಾಗುತ್ತದೆ ಶಾಸಕರು ತಾವು ಚುನಾಯಿತ ಪ್ರತಿನಿಧಿಯಾಗಿ ಜನಸೇವೆಯ ಮಾಡಬೇಕಾದ ಶಾಸಕರು ತಮ್ಮ ಸಹನೆಯನ್ನು ಕಳೆದುಕೊಂಡು ಮಾತನಾಡುತ್ತಿದ್ದಾರೆ.

ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಹಾರದ ಮಾರ್ಗ ಹುಡುಕುವ ಜನಪ್ರತಿನಿಧಿಗಳೇ, ಈ ರೀತಿಯಾಗಿ ಸಾರ್ವಜನಿಕರ ಮೇಲೆ ದರ್ಪ ತೋರಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಶಾಸಕರ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.

ಹಾಗೂ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಅದನ್ನೇ ಏಕೆ ಮಾಡುತ್ತಿದ್ದೀಯಾ ಡಿಲೀಟ್ ಮಾಡು ಅದನ್ನು ಎಂದು ಏರಿ ಧ್ವನಿಯಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲಾಗಿದೆ.

 ವರದಿ: ವೀರೇಶ್ ಗುಗರಿ

Leave a Reply

error: Content is protected !!