You are currently viewing LOCAL NEWS : “ಕುಷ್ಟಗಿ | ನ್ಯಾಯದ ಹರಿಕಾರ ಪೈಗಂಬ‌ರ್ ಮುಹಮ್ಮದ್‌ ಸೀರತ್‌ ಅಭಿಯಾನ  | ಅನ್ಯಾಯ , ದಬ್ಬಾಳಿಕೆ ಹೆಚ್ಚುತ್ತಿರುವದು ಕಳವಳಕಾರಿ  ಸಂಗತಿ  – ಬಷೀರಾ ಸಾಹೇಬಾ”  

LOCAL NEWS : “ಕುಷ್ಟಗಿ | ನ್ಯಾಯದ ಹರಿಕಾರ ಪೈಗಂಬ‌ರ್ ಮುಹಮ್ಮದ್‌ ಸೀರತ್‌ ಅಭಿಯಾನ  | ಅನ್ಯಾಯ , ದಬ್ಬಾಳಿಕೆ ಹೆಚ್ಚುತ್ತಿರುವದು ಕಳವಳಕಾರಿ  ಸಂಗತಿ  – ಬಷೀರಾ ಸಾಹೇಬಾ”  

” ಕುಷ್ಟಗಿ |  ನ್ಯಾಯದ ಹರಿಕಾರ ಪೈಗಂಬ‌ರ್ ಮುಹಮ್ಮದ್‌ ಸೀರತ್‌ ಅಭಿಯಾನ  | ಅನ್ಯಾಯ , ದಬ್ಬಾಳಿಕೆ ಹೆಚ್ಚುತ್ತಿರುವದು ಕಳವಳಕಾರಿ  ಸಂಗತಿ  – ಬಷೀರಾ ಸಾಹೇಬಾ ಅಭಿಮತ”  

ಪ್ರಜಾ ವೀಕ್ಷಣೆ ಡೆಸ್ಕ್‌ ನ್ಯೂಸ್‌ : 

ಕುಷ್ಟಗಿ : ತಾಲ್ಲೂಕಿನ ತಾವರಗೇರಾ ಪಟ್ಟಣದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ರಾಜ್ಯದಾದ್ಯಂತ “ನ್ಯಾಯದ ಹರಿಕಾರ ಪೈಗಂಬ‌ರ್ ಮುಹಮ್ಮದ್‌(ಸ) “ಎಂಬ ಧ್ಯೇಯವಾಕ್ಯದಡಿ ಸೆ. 03 ರಿಂದ 14 ವರೆಗೆ ಸೀರತ್‌ ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನದ ಪ್ರಯುಕ್ತ ಸ್ಥಳಿಯ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ವತಿಯಿಂದ ಪಟ್ಟಣದ ಮಜೀದೆ ಅಕ್ಸಾದಲ್ಲಿ ಸೀರತ್ ನಲ್ಲಿ ಸೋಮವಾರ  ಕಾರ್ಯಕ್ರಮ ನಡೆಯಿತು.

 ಈ ಕಾರ್ಯಕ್ರಮದಲ್ಲಿ ಸಿಂಧನೂರ ನ  ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಮಹಿಳಾ ಘಟಕದ ಸಂಚಾಲಕಿ ಬಷೀರಾ ಸಾಹೇಬಾ  ಅವರು  ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿ,  ಪ್ರವಾದಿ ಅವರು ಗಂಡು-ಹೆಣ್ಣು ಎನ್ನುವ ಭೇದ ತೊಡೆದು ಹಾಕಿದರು. ಯಾರಿಗಾದರೂ ಮೂವರು ಹೆಣ್ಣುಮಕ್ಕಳಿದ್ದರೆ, ಅವರ ಪಾಲನೆ-ಪೋಷಣೆ ಮಾಡಿದರೆ ಅವನು ಪ್ರವಾದಿಯವರ ಜತೆ ಸ್ವರ್ಗದಲ್ಲಿರುವನು . ಸಮಾಜದಲ್ಲಿ ಅತ್ಯಂತ ಬಡವ, ಆಗರ್ಭ ಶ್ರೀಮಂತರ ವರೆಗೆ ಎಲ್ಲಾ ವರ್ಗದ ಜನರ ಪಾಲಿನ ದೊಡ್ಡ ಭರವಸೆ ಏನೆಂದರೆ, ನ್ಯಾಯ ನ್ಯಾಯ ವಿತರಿಸುವ ವ್ಯವಸ್ಥೆಯೊಂದು ಸಾಮಾಜಿಕವಾಗಿ ಅಸ್ತಿತ್ವದಲ್ಲಿದೆ. ಇಲ್ಲದೆ ಇದ್ದರೆ ಸಮಾಜದಲ್ಲಿ ಅರಾಜಕತೆ  ನಡೆಯುವದು ಶತಸಿದ್ದ ಎಂದು ತಿಳಿಸಿದ್ದರು.

ಹೀಗಾಗಿ  ಪವಿತ್ರ ಕುರ್‌ಆನ್, ಸೇರಿದಂತೆ ಹಲವಾರು ಗ್ರಂಥಗಳಲ್ಲಿ ಅನೇಕಾರು ವಚನಗಳಿವೆ. ಸಮಾಜ ಎಂಬುದು ಕುಟುಂಬಗಳ ಒoದು ಗoಟು. ಕುಟುಂಬಗಳಲ್ಲಿ ಅತೀ ಹೆಚ್ಚು ಗೌರವ ಮತ್ತು ಆದರಕ್ಕೆ ಒಳಗಾಗುವದು ಹೆತ್ತವರು. ಮಗ ಅಥವಾ ಮಗಳು ಯಾವುದೇ ಬೆಲೆ ತೆತ್ತಾದರೂ ತಂದೆ ಮತ್ತು ತಾಯಿಯ ರಕ್ಷಣೆಗೆ ನಿಲ್ಲುತ್ತಾರೆ. ನಾವು ಮಾತೃ ದೇವೋಭವ ಪಿತೃದೇವೋಭವ ಎಂಬಷ್ಟರ ಮಟ್ಟಿಗೆ ಸಮಾಜದಲ್ಲಿ ಹೆತ್ತವರನ್ನು ಗೌರವಿಸುತ್ತೇವೆ. ಇಸ್ಲಾಮ್ ಅಂತೂ ಹೆತ್ತವರೇ ನಿಮ್ಮ ಸ್ವರ್ಗ, ಹೆತ್ತವರೆ ನಿಮ್ಮ ನರಕ ಎಂದು ಹೇಳಿದೆ ಎಂದರು.

  ಮುಖ್ಯ ಅತಿಥಿಯಾಗಿ  ರುಕೈಯಾ ಮಾತನಾಡಿ, ಪ್ರವಾದಿ ಮುಹಮ್ಮದ್ (ಸ) ರವರು ಅರೆಬಿಕ್ ಕ್ಯಾಲೆಂಡರ್ ಪ್ರಕಾರ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಜನಿಸಿದವರು. ಅವರ ಸಾರ್ವಕಾಲಿಕ ಬೋಧನೆಗಳನ್ನು ಜನತೆಗೆ ತಿಳಿಯಪಡಿಸಲು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ವತಿಯಿಂದ “ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ)” ಶೀರ್ಷಿಕೆಯಡಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾದಿ ಮುಹಮ್ಮದ್ (ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸಬೇಕಿದೆ. ಸಮಾಜದಲ್ಲಿ ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಕೂಡ ಈ ಅಭಿಯಾನದ ಉದ್ದೇಶವಾಗಿದೆ ಎಂದರು.

 ಈ ಸಂದರ್ಭದಲ್ಲಿ ಸ್ಥಳಿಯ ಸಂಚಾಲಕಿ  ನಾಸೀರಾ ಹಣಗಿ  , ಶಿಕ್ಷಕಿ ಸುಮಯ್ಯಾತರನ್ನುಮ್ ಮತ್ತು ಸಂಘಟನೆಯ ಸದಸ್ಯರಾದ ಶೈನಾಜ್ ಸ್ವಾಗತಿಸಿದರು, ಶಗುಫ್ತಾ ನಿರೂಪಿಸಿದರು. ಫರ್ಜಾನ ಮನಿಯಾದ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘಟನೇಯ ಕಾರ್ಯಕರ್ತರು ಮಹಿಳೆಯರು ಭಾಗವಸಿದ್ದರು.

Leave a Reply

error: Content is protected !!