LOCAL NEWS : ಪಟ್ಟಣದ ಗವಿಸಿದ್ದೇಶ್ವರ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮ
ಪ್ರಜಾ ವೀಕ್ಷಣೆ ಸುದ್ದಿ :
ಕುಕುನೂರು : ಪಟ್ಟಣದ ಗವಿಸಿದ್ದೇಶ್ವರ ಶಾಲೆಯಲ್ಲಿ ಇಂದು ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮವನ್ನು ಅರೋಗ್ಯ ಇಲಾಖೆಯ ಸಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕುರಿತು ಮಾತನಾಡಿದ ಕಾರ್ಯಕ್ರಮದ ಸಂಯೋಜಕಿ ಶೋಭಾ ಗಜಕೋಶ ಅವರು, ‘ಈ ಜಂತುಹುಳ ಬರಲು ಕಾರಣ ಕಲುಷಿತ ಆಹಾರ ಸೇವನೆ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದರಿಂದ ಜಂತುಹುಳು ಸಮಸ್ಯೆ ಕಾಡುತ್ತದೆ ಇದರಿಂದಾಗಿ ಮಕ್ಕಳಲ್ಲಿ ಪೋಷಕಾಂಶ ಕೊರತೆ ಉಂಟಾಗುತ್ತದೆ ಎಂದರು.
ಈ ಜಂತುಹುಳ ಮಾತ್ರೆಯನ್ನು ಒಂದುವರೆ ವರ್ಷದಿಂದ 19ರ ನಡುವಿನ ವಯಸ್ಸಿನ ಎಲ್ಲಾ ಶಾಲಾ ಮಕ್ಕಳಿಗೆ ವರ್ಷದಲ್ಲಿ ಎರಡು ಸಲ ಜಂತು ಹುಳು ನಿವಾರಣೆ ಮಾತ್ರೆಯನ್ನು ನೀಡಲಾಗುತ್ತದೆ. ಈ ಮಾತ್ರೆಯನ್ನು ಕೊಡುವುದರಿಂದ ಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆ ಹೊಟ್ಟೆಯಲ್ಲಿನ ಜಂತುಹುಳ ನಿವಾರಣೆ ಮಾಡಬಹುದಾಗಿದೆ. ಹಾಗೆ ಮಕ್ಕಳಲ್ಲಿ ರಕ್ತಹೀನತೆ ಕೊರತೆಯನ್ನು ಸಹ ತಡೆಗಟ್ಟಬಹುದು ಎಂದರು.
ಇದೆ ವೇಳೆಯಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಜಂತುಹುಳುವಿನ ಮಾತ್ರೆಯನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ಬಂಡಿವಡ್ಡರ್, ಸಹ ಶಿಕ್ಷಕಾರದ ರಾಜಕುಮಾರ ರಾಥೋಡ್, ಶರಣಪ್ಪ , ಎಸ್ ಜೆ. ಪಾಟೀಲ್, ಆಶಾ ಕಾರ್ಯಕರ್ತೆ ಶಕೀಲಾ ಹಾಗೂ ಶಾಲೆಯ ಮಕ್ಕಳು ಇದ್ದರು.