ಕುಕನೂರ : ಗುರು ಶಿಷ್ಯರ ಭಾಂಧವ್ಯವನ್ನು ಜಗತ್ತಿನ ಪವಿತ್ರ ಸಂಬಂಧವೆಂದು ಕರೆಯುತ್ತಾರೆ. ಅದರಂತೆ ಗುರುವಿನ ಬಗ್ಗೆ ಒಂದು ಉಲ್ಲೇಖವಿದೆ.
ಗುರುರ್ ಬ್ರಹ್ಮ, ಗುರು ವಿಷ್ಣುಃ
ಗುರುರ್ ದೇವೋ ಮಹೇಶ್ವರಃ
ಗುರುರ್ ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರವೇ ನಮಃ
ಎನ್ನುವ ಹಾಗೆ ಗುರು-ಶಿಷ್ಯ ಪರಂಪರೆಯು ಭಾರತದಲ್ಲಿ ಶತಮಾನಗಳಿಂದಲೂ ಅಸ್ತಿತ್ವದಲ್ಲಿದೆ. ಗುರುವನ್ನು ವಿದ್ಯಾರ್ಥಿಗಳು ದೇವರಂತೆ ಪೂಜಿಸುತ್ತಾರೆ. ವಿದ್ಯಾರ್ಥಿಯು ತಾನು ಕಲಿಯುತ್ತಿರುವ ಕಲೆ ಅಥವಾ ಕೌಶಲ್ಯದಲ್ಲಿ ಪರಿಪೂರ್ಣತೆಯನ್ನು ಪಡೆಯುವವರೆಗೆ ಗುರುವಿನ ಗುಲಾಮನಾಗಿಯೇ ಬದುಕಿ ಬಳಿಕ, ಅದೇ ಗುರುವಿನಿಂದ ಸ್ವಾವಲಂಬಿಯಾಗಿ ಬದುಕಿವ ಪಾಠ ಕಲಿಸುತ್ತಾನೆ. ಅಂತಹ ಗುರು ತಾನು ಕಲಿಸಿದ ಪಾಠ ಶಾಲೆಯನ್ನು ಬಿಟ್ಟು ಬೇರೆ ಕಡೆಗೆ ವರ್ಗಾವಣೆಯಾದಾಗ ಗುರು ಹಾಗೂ ಶಿಷ್ಯಂದಿರಿಗೆ ಎಷ್ಟೊಂದು ನೋವು ಆಗುತ್ತೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೂರು ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿದ್ದ ಈರಣ್ಣ ಮೆಣಸಿಕಾಯಿ ಎಂಬವರು ಸರ್ಕಾರದ ನಿಯಮದಂತೆ ಬೇರೆ ಕಡೆಗೆ ವರ್ಗಾವಣೆಯಾಗಿದ್ದಾರೆ. ಈ ವಿಷಯ ತಿಳಿದ ಆ ಶಾಲೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಬೇರೆ ಕಡೆಗೆ ಬಿಟ್ಟುಕೊಡದೆ. ತುಂಬಾ ನೋವಿನಿಂದ ಈರಣ್ಣ ಮಾಸ್ಟರ್‌ನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಎಂತವರಿಗಾದರು ಕಣ್ಣೀರು ತರಿಸುವಂತಿದೆ. ಪ್ರಸ್ತತವಾಗಿ ಈರಣ್ಣ ಮೆಣಸಿಕಾಯಿ ಮುಖ್ಯ ಶಿಕ್ಷಕರು ಕಲ್ಲೂರು ಗ್ರಾಮದ ಶಾಲೆಯಿಂದ ಕುಕನೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜೂರುಗೆ ಮುಖ್ಯ ಶಿಕ್ಷಕರಾಗಿ ವರ್ಗಾವಣೆಯಾಗಿದ್ದಾರೆ.