ಕುಡಿಯುವ ನೀರು ಹಾಗು ಮುದಗಲ್ಲ ತಾಲೂಕಿಗಾಗಿ ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆಗೆ ಚಾಲನೆ…

ಮುದಗಲ್ಲ ವರದಿ..

ಕುಡಿಯುವ ನೀರಿಗಾಗಿ, ತಾಲೂಕ ಕೇಂದ್ರವೆಂದು ಘೂಷೀಸಬೇಕು
ಮನವಿ ಸಲ್ಲಿಸಲು ಹಟ್ಟಿ ಪಟ್ಟಣಕ್ಕೆ ಪಾದಯಾತ್ರೆಗೆ ಚಾಲನೆ..

ಮುದಗಲ್ : ಹಟ್ಟಿ ಪಟ್ಟಣದಲ್ಲಿ ಸಿ.ಎಂ ಸಿದ್ಧರಾಮಯ್ಯನವರಿಗೆ ಮುದಗಲ್ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ಕರವೇ ಸ್ವಾಭಿಮಾನ ಸೇನೆ ಮುದಗಲ್ ಘಟಕ ಹಾಗೂ ಎಂ.ಗಂಗಣ್ಣ ಅಭಿಮಾನಿ ಬಳಗ ಮಂಗಳವಾರ ಪಾದಯಾತ್ರೆ ಬೆಳೆಸಿದರು.

ಪಾದಯಾತ್ರೆಗೆ ಸಿದ್ದಯ್ಯ ಸಾಲಿಮಠ ಚಾಲನೆ ನೀಡಿದರು. ಸ್ಥಳಿಯ ಕರವೇ ಅಧ್ಯಕ್ಷ ಎಸ್. ಎ ನಹೀಂ ಮಾತನಾಡಿ ವಿವಿಧ ಕಾಮಾರಿಗಳ ಉದ್ಗಾಟನೆಯಲ್ಲಿ ಪಾಲ್ಗೊಳ್ಳುವ ರಾಜ್ಯದ ಮುಖ್ಯ ಮಂತ್ರಿ ಸಿ.ಎಂ ಸಿದ್ದರಾಮಯ್ಯ ಇಂದು ಹಟ್ಟಿ ಪಟ್ಟಣಕ್ಕೆ ಆಗಮಿಸುವ ನಿಮಿತ್ಯ ಪಟ್ಟಣಕ್ಕೆ ಮೂಲಭೂತ ಸೌಕರ್ಯದ ಕುಡಿಯುವ ನೀರು 15ದಿನಕ್ಕೊಮ್ಮೆ ಪೂರೈಕೆಯಾಗುತ್ತಿರುವುದನ್ನು ತಪ್ಪಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೆನೆಗುದಿಗೆ ಬಿದ್ದರುವ ಬಹುದಿನದ ಬೇಡಿಕೆಯಾಗಿರುವ 24/7 ಸಮರ್ಪಕ ನೀರಿನ ಪೂರೈಕೆ ಕಾರ್ಯ ಅತೀ ಶೀಘ್ರವೇ ಕಲ್ಪಿಸಬೇಕು, ಪಟ್ಟಣವನ್ನು ತಾಲೂಕ ಕೇಂದ್ರವೆಂದು ಘೂಷೀಸಬೇಕು ಮತ್ತು ಮುದಗಲ್ ಕೋಟೆ ಉತ್ಸವ ಮಾಡಬೇಕು ಎಂದು ಕರವೇ ಹಾಗೂ ಎಂ.ಗಂಗಣ್ಣ ಬಳಗ ಆಗ್ರಹಿಸಿ ಹಟ್ಟಿ ಪಟ್ಟಣದಲ್ಲಿ ಮನವಿ ಸಲ್ಲಿಸಲು ಹೋಗುತ್ತಿದ್ದೇವೆ ಎಂದು ಮಾತನಾಡಿದರು.

ಪಾದಯಾತ್ರೆಯಲ್ಲಿ ಸಂಘಟನೆಯವರು ಹಾಗೂ ಅಭಿಮಾನಿ ಬಳಗ ಸೇರಿದಂತೆ ಇತರರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!