ಮುದಗಲ್ಲ ವರದಿ..
ರಾಚೋಟೇಶ್ವರ ಶ್ರೀಗಳ ಸಮಾಧಿ ಯೋಗ ಅನುಷ್ಠಾನ ಅಂತ್ಯ..
ಮುದಗಲ್ಲ :- ಮಾನವ ಕುಲಕ್ಕೆ ಒಳಿತು ಆಗಬೇಕು.ವಿಶೇಷವಾಗಿ ರೈತ ಸಮುದಾಯಆರ್ಥಿಕವಾಗಿ,
ಸಾಮಾಜಿಕವಾಗಿ ಮುಂದು ವರಿಯಲು ಉತ್ತಮ ಬೆಳೆಬೆಳೆದು ಸಬಲರಾಗಬೇಕು. ಇಂತಹ ಸದುದ್ದೇಶ ಸೇರಿದಂತೆಲೋಕ ಕಲ್ಯಾಣಾರ್ಥವಾಗಿ | ರಾಚೋಟೇಶ್ವರ ಶಿವಾಚಾರ್ಯರು ಸ್ವಾಮೀಜಿ 11 ದಿನಗಳ ಸಿದ್ಧಿ ಸಮಾಧಿಯೋಗದ ಸ್ಥಿತಿಯಲ್ಲಿ ಗುಹೆಯಲ್ಲಿ ಕುಳಿತಿದ್ದಾರೆ.
ಮೌನಾನುಷ್ಠಾನ ಕುಳಿತಿದ್ದು,ಯಾರೊಂದಿಗೂ ಮಾತನಾಡುವುದಿಲ್ಲ. ಆಹಾರ ಸೇವನೆಮಾಡದೇ ನಿರಾಹಾರಿಗಳಾಗಿ ಶಿವನ ಜ್ಞಾನದಲ್ಲಿ ಅನುಷ್ಠಾನ ಕುಳಿತಿದ್ದಾರೆ. ವಿಶೇಷವೆಂದರೆ ಶ್ರೀಗಳು ಕುಳಿತಿರುವ ಅನುಷ್ಠಾನದ ಗುಹೆಯ ಒಳಗೆ ಪ್ರವೇಶ ಮಾಡುವ ಮಾರ್ಗವನ್ನು ಸಿಮೆಂಟ್ ಮತ್ತು ಇಟ್ಟಿಗೆಯಿಂದ ಮುಚ್ಚಿಗಾಳಿ-ಬೆಳಕು ಆಡದಂತೆ ಬಂದೋಬಸ್ತ್ ಮಾಡಲಾಗಿದೆ.
ಕಿಕ್ಕಿರಿದು ತುಂಬಿರುವ ಭಕ್ತ ಸಮೂಹ. ಶ್ರೀಗಳಿಂದ ಗದ್ದುಗೆ ಗುಡಿಯ ಮಹದ್ವಾರಕ್ಕೆ ಪೂಜೆ. ಸಮಾಧಿ ಯೋಗದಲ್ಲಿದ್ದ ಸ್ವಾಮೀಜಿಗೆ ಜಯ ಘೋಷಗಳೊಂದಿಗೆ ಭಕ್ತರಿಂದ ಸ್ವಾಗತ. ಇದು ಕಂಡು ಬಂದಿದ್ದು ಲಿಂಗಸೂರು ತಾಲೂಕಿನ ಐತಿಹಾಸಿಕ ಮುದಗಲ್ಲ ಪಟ್ಟಣದ ಶ್ರೀ ರಾಮಲಿಂಗಶ್ವರ ಕಿಲ್ಲಾ ದೇವಸ್ಥಾನದಲ್ಲಿ
11 ದಿನಗಳ ಕಾಲ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಲೋಕ ಕಲ್ಯಾಣಕ್ಕಾಗಿ ಸಮಾಧಿಯೋಗ ಅನುಷ್ಠಾನಕ್ಕೆ ಕುಳಿತಿದ್ದರು. ಅನ್ನ, ನೀರು, ಗಾಳಿ, ಬೆಳಕು ಇಲ್ಲದೇ ಶ್ರೀ ಗವಿಯಪ್ಪ ಎಂಬ ಶರಣರ ಸಮಾಧಿ ಮೇಲೆ ನಿರ್ಮಿಸಿರೋ ಗದ್ದುಗೆ ಗುಡಿಯಲ್ಲಿ ಸಮಾಧಿ ಯೋಗ ಆರಂಭಿಸಿದ್ದರು.
ಈ ಅನುಷ್ಠಾನಕ್ಕೆ ತನ್ನದೆ ಆದ ಇತಿಹಾಸ, ಧಾರ್ಮಿಕ ಹಿನ್ನೆಲೆಯಿದೆ. ಮೌನಾನುಷ್ಠಾನದ ಕೊನೆಯ ದಿನ ಭಕ್ತರು ಬಾಗಿಲು ಒಡೆದು ಸ್ವಾಮೀಜಿಗಳನ್ನು ಬರಮಾಡಿಕೊಳ್ಳಲಿದ್ದಾರೆ.
ಇದೊಂದು ತಪಸ್ಸಾಗಿದ್ದು,ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮಆಗುವುದಿಲ್ಲ ಡಾ.ರಾಚೋಟೇಶ್ವರರ ಸ್ವಾಮೀಜಿಗಳ ಅನುಷ್ಠಾನದ ದರ್ಶನ ಪಡೆಯಲು ನೂರಾರು ಭಕ್ತರು ಪ್ರತಿದಿನ ಆಗಮಿಸುತ್ತಿದ್ದಾರೆ. ಪ್ರತಿದಿನವೂ ಬರುವ ಭಕ್ತರು ಗುಹೆಯ ಮುಂಭಾಗದಲ್ಲಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಮರಳುತ್ತಿದ್ದಾರೆ.
ಸಾಧಕರು ಯೋಗ ಸಾಧನೆಯ ಮೂಲಕ ಸಮಾಧಿ ಸ್ಥಿತಿಯನ್ನುತಲುಪ ಬಹುದಾಗಿದೆ. ಪ್ರಾಣಾಯಾಮದ ಕೊನೆಯ ಹಂತವು ಸ್ಥಿತಿಯಾಗಿದೆ. ಸಹಜ ಮನುಷ್ಯನ ಉಸಿರಾಟವು ಒಂದು ನಿಮಿಷಕ್ಕೆ 18 ಬಾರಿ ಆದರೆ, ಅನುಲೋಮ-ವಿಲೋಮದಲ್ಲಿ ಒಂದು ನಿಮಿಷದಲ್ಲಿ 4 ರಿಂದ 5 ಸಲ ಉಸಿರಾಡಬಹುದು.ಕುಂಭಯುಕ್ತ ಪ್ರಾಣಾಯಾಮದಲ್ಲಿ ಸಾಧಕರು 1ನಿಮಿಷಕ್ಕೆ ಒಂದೇ ಸಲ ಉಸಿರಾಟವನ್ನು ನಡೆಸುತ್ತಾರೆ. ಕುಂಭಯುಕ್ತ ಪ್ರಾಣಾಯಾಮವೇ ಸಮಾಧಿ ಸ್ಥಿತಿಯಲ್ಲಿ ಸಾಧಕರು ಇರುವಂತೆ ನೋಡಿಕೊಂಡು ಅನುಷ್ಠಾನ ಕುಳಿತು ಕೊಳ್ಳ ಬಹುದಾಗಿದೆ
ರಾಚೋಟೇಶ್ವರ ಸ್ವಾಮೀಜಿ ಹಿನ್ನೆಲೆ:-
ರಾಚೋಟೇಶ್ವರ ಸ್ವಾಮೀಜಿ, ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಬೊಮ್ಮನಾಳ ಗ್ರಾಮದವರು. ಸದ್ಯ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಪಿಎಚ್ಡಿ ಮಾಡ್ತಿದ್ದಾರೆ. ಅಲ್ಲದೇ ಗದಗ ತಾಲೂಕಿನ ಅಂತೂರು-ಬೆಂತೂರು ಗ್ರಾಮದಲ್ಲಿರೋ ಬೂದೀಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿದ್ದಾರೆ.
ರಾಚೋಟೇಶ್ವರ ಶ್ರೀಗಳು ಕಳೆದ 15 ವರ್ಷಗಳಿಂದ ದ್ರವ ಪದಾರ್ಥ, ನೆನಸಿದ ಆಹಾರ ಪದಾರ್ಥ ಹಾಗೂ ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದಾರಂತೆ. ಹೀಗೆ ಕಳೆದ 25 ವರ್ಷಗಳಿಂದ ಕಠಿಣ ವೃತ ಆಚರಿಸುತ್ತಿದ್ದಾರಂತೆ
ಈ ಸಂದರ್ಭದಲ್ಲಿ ಶ್ರೀ ರಾಮಲಿಂಗಶ್ವರ ದೇವಸ್ಥಾನ ಸೇವ ಸಮಿತಿ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.