ಕುಕನೂರು: ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಆಟ ಹಾಡು ನೃತ್ಯ ಚಿತ್ರಕಲೆ ಸಂಗೀತ ಅಭಿನಯ ಮಾನವೀಯ ಮೌಲ್ಯಗಳು ತುಂಬಾ ಅವಶ್ಯ. ಈ ನಾಡಿನ ನೆಲ ಜಲ ಭಾಷೆ ಹಾಗೂ ಪರಿಸರದ ಬಗ್ಗೆ ಮಕ್ಕಳಲ್ಲಿ ಕಾಳಜಿಯನ್ನು ಮೂಡಿಸಲು ಬೇಸಿಗೆ ಶಿಬಿರ ಅವಶ್ಯಕವಾಗಿದೆ ಎಂದು ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ನ ತಾಲೂಕ ಅಧ್ಯಕ್ಷ ಹನಮಂತಪ್ಪ ಉಪ್ಪಾರ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಯಲಬುರ್ಗಾ ಹಾಗೂ ಗುರುದೇವ ಕೋಚಿಂಗ್ ಕ್ಲಾಸಸ್ ಮಂಗಳೂರು ಇವರಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಆಟ ಹಾಡು ನೃತ್ಯ ಚಿತ್ರಕಲೆ ಸಂಗೀತ ಅಭಿನಯ ಮಾನವೀಯ ಮೌಲ್ಯಗಳು ತುಂಬಾ ಅವಶ್ಯ. ಈ ನಾಡಿನ ನೆಲ ಜಲ ಭಾಷೆ ಹಾಗೂ ಪರಿಸರದ ಬಗ್ಗೆ ಮಕ್ಕಳಲ್ಲಿ ಕಾಳಜಿಯನ್ನು ಮೂಡಿಸುವುದು ಈ ಒಂದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಜೊತೆಗೆ ಛಲ ಮತ್ತು ಕಠಿಣ ಪರಿಶ್ರಮದಿಂದ ಸತತ ಅಧ್ಯಯನ ಮಾಡಿ ಗುರುಗಳ ಮಾರ್ಗದರ್ಶನವನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬಹುದು ಎಂದು ಸಾಧಿಸಿ ತೋರಿಸಿದ ಈ ವಿದ್ಯಾರ್ಥಿಗಳು ಮುಂದಿನ ನಮ್ಮ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ವಿಧ್ಯಾರ್ಥಿಗೆ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾಸಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್‌ಸಾಬ ಕಾಲಿಮಿರ್ಚಿ ವಹಿಸಿಕೊಂಡಿದ್ದರು, ಹಾಗೂ ಪ್ರಮುಖರಾದ ಶರಣಪ್ಪ ಉಮಚಗಿ, ಈರಣ್ಣ ದಿಂಡೂರು, ಅಶೋಕ ಗಾಣಿಗೇರ. ಕಲ್ಲಪ್ಪ ಕಳಕೇರಿ, ವೀರೇಶ್ ಮ್ಯಾಗಳೇಶಿ, ದೊಡ್ಡಬಸಪ್ಪ ಬಳೂಟಿಗಿ ಹಾಗೂ ಇತರರಿದ್ದರು.