ಮುದಗಲ್ಲ :- ನೀಲಕಂಠೇಶ್ವರ ಜಾತ್ರಾ ಮಹೋತ್ಸವ ,ರಥೋತ್ಸವ ದಿ: 12 ರಂದು ..
ಮುದಗಲ್ : ಇದೇ ದಿನಾಂಕ 12 ರಂದು ಸೋಮವಾರ ಪೇಟೆಯ ಶ್ರೀ ನೀಲಕಂಠೇಶ್ವರ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಜರುಗುತ್ತವೆ ಎಂದು ದೇವಸ್ಥಾನ ಕಮಿಟಿಯ ಕಾಯ೯ದಶೀ೯ ಡಾ. ವೀರಭದ್ರಪ್ಪ ಕೊಳ್ಳಿ ಗುರುವಾರ ತಿಳಿದರು.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿನಾಂಕ. 12 ರಂದು ಉದಯಕಾಲದಲ್ಲಿ
ಶ್ರೀ ನೀಲಕಂಠೇಶ್ವರ ದೇವರ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆ ಸೇರಿದಂತೆ ಲಕ್ಷ ಬಿಲ್ವಾರ್ಚನೆ ಮಾಡಲಾಗುತ್ತದೆ.
1008 ಜಗದ್ಗುರು ನಾಲ್ವಡಿ ಶ್ರೀ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಕುರುಹಿರಿನ ಶೆಟ್ಟಿ ಪೀಠಾಧೀಶ್ವರ ನೀಲಕಂಠ ಮಠ ಗದಗ-ಬೆಟಗೇರಿ ಇವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಿಂದ ಮಹಿಳೆಯರು ಹೊತ್ತ ಕುಂಭ ಕಳಸ ಹಾಗೂ ಪಲ್ಲಕ್ಕಿ ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳಗಳೊಂದಿಗೆ ಪ್ರಮುಖ ಬೀದಿಗಳ ಮೂಲಕ ಶ್ರೀ ನೀಲಕಂಠೇಶ್ವರ ದೇವಸ್ಥಾನ ತಲುಪುವುದು. ಮಧ್ಯಾಹ್ನ ಭಕ್ತರಿಗಾಗಿ ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿರುವುದು. ಸಾಯಂಕಾಲ 5:30ಕ್ಕೆ ರಥೋತ್ಸವ ಜರುಗುತ್ತದೆ.
ಮತ್ತು ದಿ. 14ರಂದು ಸೋಮವಾರ ಸಾಯಂಕಾಲ ಹುಚ್ಚಯ್ಯ ಎಳೆಯಲಾಗುವದು ಸರ್ವ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿರುಪಾಕ್ಷಪ್ಪ ಆದಪ್ಪ ಜೀಡಿ, ಜಗದೀಶ ಬಸಪ್ಪ ಜೀಡಿ, ರವಿ ಸಂಗಪ್ಪ ಜೀಡಿ, ಶಂಕ್ರಪ್ಪ ಜೀಡಿ, ಬಸವರಾಜ ಎಳು ಬಾವಿ, ರಾಚಪ್ಪ ಗಬ್ಬುರ್ ಸೇರಿದಂತೆ ಉಪಸ್ಥಿತರಿದ್ದರು