ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ : ಜೈ ಭೀಮ್ ಯುವ ಘರ್ಜನೆ ‌ಸೇನೆ ಸಿದ್ಧತೆ..

ಮುದಗಲ್ಲ ವರದಿ..

ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ : ಜೈ ಭೀಮ್ ಯುವ ಘರ್ಜನೆ ‌ಸೇನೆ ಸಿದ್ಧತೆ..

ಮುದಗಲ್ಲ :- ಜೈ ಭೀಮ್ ಯುವ ಘರ್ಜನೆ ‌ಸೇನೆ ವತಿಯಿಂದ ಡಾ.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು 14 -4-2025 ರಂದು ಸಂಭ್ರಮ ಸಡಗರ ದಿಂದ ಆಚರಿಸಲು ನಿರ್ಧರಿಸಲಾಗಿದೆ.

ಜೈ ಭೀಮ್ ಯುವ ಘರ್ಜನೆ ‌ಸೇನೆ
ಗೌರವಾಧ್ಯಕ್ಷರು ಗುಂಡಪ್ಪ ಗಂಗಾವತಿ ಹಾಗೂ ಅಧ್ಯಕ್ಷರಾದ ಪೂರ್ಣಾನಂದ ಅವರು ಮುದಗಲ್ಲ ಪತ್ರಿಕೆ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

14 ಮುದಗಲ್ಲ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದ್ದು ಕಾರ್ಯಕ್ರಮದ ಸಿದ್ಧತೆಗಳು ಬರದಿಂದ ಸಾಗಿವೆ ಎಂದು ತಿಳಿಸಿದರು

14 ರಂದು ಸಿದ್ದಾಥ೯ ಓಣಿ (ನಗರದಲ್ಲಿ) ಮನೆ, ಮನೆಗಳಲ್ಲೂ ಹಬ್ಬದ ವಾತಾವರಣ ಮನೆ ಮಾಡಲಿದೆ. ಸಮುದಾಯದ ಸಾಕಷ್ಟು ಯುವಕರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಜಯಂತೋತ್ಸವದ ಅಂಗವಾಗಿ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ( statue) ಮೆರವಣಿಗೆ ಹಾಗೂ ಮದ್ಯಾಹ್ನ ಊಟದ ವ್ಯವಸ್ಥೆ ಹಾಗೂ ಬಹಿರಂಗ ಸಭೆ ಸಮಾರಂಭ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ದಯವಿಟ್ಟು ಊರಿನ ಎಲ್ಲ ಸಂಘಟನೆಗಾರರು ಊರಿನ ರಾಜಕೀಯ ಮುಖಂಡರು ಹಾಗೂ ಸಾವ೯ಜನಿಕರು ಭಾಗವಹಿಸಿ ಬೇಕು ಗೌರವಾಧ್ಯಕ್ಷರು ಹಾಗೂ ಪುರಸಭೆ ಸದಸ್ಯ ರಾದ ಗುಂಡಪ್ಪ ಗಂಗಾವತಿ ಕಾಯ೯ಕ್ರಮ ಬಗ್ಗೆ ಮಾಹಿತಿ ನೀಡಿದರು

ಈ ಸಂದರ್ಭದಲ್ಲಿ ಗಣೇಶ ಛಲವಾದಿ , ರಂಗನಾಥ್ , ರವಿ ಕಟ್ಟಿಮನಿ,ಇತರರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!