ಶಿರಹಟ್ಟಿ : ನರೇಗಾ ಯೋಜನೆಯು ಗ್ರಾಮೀಣ ಭಾಗದಲ್ಲಿನ ಜನರು ಕೂಲಿ ಆರಸಿ ದೊಡ್ಡದೊಡ್ಡ ನಗರಪ್ರದೇಶಗಳಿಗೆ ಒಲಸೆ ಹೋಗುವುದನ್ನು ತಡೆ ಹಿಡಿಯುವ ಯೋಜನೆ ಯಾಗಿದೆ ಎಂದು ತಾ.ಪ ಕಾರ್ಯನಿರ್ವಾಹಕ ಅಧಿಕಾರಿಯಾದ ರಾಮಣ್ಣ ದೊಡ್ಡಮನಿ ಹೇಳಿದರು.
ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಂದಕ ಬದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿ ಸ್ಥಳ ಪರಿಶೀಲನೆ ಮಾಡಿ ಕೂಲಿಕಾರರೊಂದಿಗೆ ಮಾತನಾಡಿ ಕೂಲಿಕಾರರಿಗೆ ಕೆಲಸದ ಪ್ರಮಾಣ, ಕೂಲಿ ಮೊತ್ತ, ಎನ್ಎಂ ಎಂ ಎನ್ ಹಾಜರಾತಿ ಕುರಿತು ಮಾಹಿತಿ ನೀಡಿ ಕಂದಕಗಳ ಅಳತೆ ಪ್ರಮಾಣ ಪರಿಶೀಲನೆ ಮಾಡಿದರು. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರಂತರ ಮಹಿಳೆಯರಿಗೆ ಮತ್ತು ಪುರುಷರಿಗೆ ತಾರತಮ್ಯವಿಲ್ಲದೆ ವೇತನವನ್ನು ನೀಡುವ ಮೂಲಕವಾಗಿ ಕೆಲಸವನ್ನು ಕೊಡಲಾಗುತ್ತಿದೆ. ನರೇಗಾ ಯೋಜನೆಯು ಗ್ರಾಮೀಣ ಭಾಗದಲ್ಲಿನ ಜನರು ಕೂಲಿ ಅರಸಿ ದೊಡ್ಡದೊಡ್ಡ ನಗರಪ್ರದೇಶಗಳಿಗೆ ಒಲಸೆ ಹೋಗುವುದನ್ನು ಹಿಡಿಯುವ ಯೋಜನೆಯಾಗಿದೆ ಇದರ ಸದುಪಯೋಗವನ್ನು ಪಡೆದಿಕೊಳ್ಳಿ ಎಂದರು.
ಜಾಬ್ ಕಾರ್ಡ್ ಇಲ್ಲದೆ ಇರುವ ಕೂಲಿ ಕಾರ್ಮಿಕರು ತಕ್ಷಣವೇ ದಾಖಲಾತಿಗಳನ್ನು ನೀಡಿ ಹೊಸ ಜಾಬ್ ಕಾರ್ಡ್ಗಳನ್ನು ಪಡೆದುಕೊಂಡು ಯೋಜನೆಯ ಲಾಭವನ್ನು ಪಡೆಯಿರಿ ಎಂದು ಸಲಹೆ ನೀಡಿದರು. ಇದೇ ಸಂರ್ಧಭದಲ್ಲಿ ಬೇಸಿಗೆಯ ಬಿಸಿಲು ಹೆಚ್ಚಾಗಿರುವುದರಿಂದ ಫಲಾನುಭವಿಗಳು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ನಮ್ಮ ದೇಹದ ಆರೋಗ್ಯವು ಬಹು ಮುಖ್ಯವಾಗಿದ್ದು ಹೆಚ್ಚು ನೀರು ಕುಡಿಯಿರಿ ನೀರನ್ನು ಕುದಿಸಿ ಆರಿಸಿ ಕುಡಿಯಿರಿ. ಈ ವೇಳೆ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ, ಸುರೇಶ, ತಾಂತ್ರಿಕ ಸಂಯೋಜಕಿ ವಿಜಯಲಕ್ಷ್ಮಿ, ಐ.ಇ.ಸಿ ಸಂಯೋಜಕ, ವಿರೇಶ, ನರೇಗಾ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳು, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಹಾಜರಿದ್ದರು.