ಮುದಗಲ್ಲ ವರದಿ..
ಮೇ 18 ರಿಂದ ಸುಕ್ಷೇತ್ರ ಅಂಕಲಿಮಠ(ತೆಲೆಕಟ್ಟು)
ಶ್ರೀ ಸದ್ಗುರು ನಿರುಪಾಧೀಶ್ವರರ ಜಾತ್ರಾ ಮಹೋತ್ಸವ …
ಮುದಗಲ್ : ಸಮೀಪದ ಅಂಕಲಿಮಠ (ತಲೆಕಟ್ಟ) ಶ್ರೀ ಸದ್ಗುರು ನಿರುಪಾದೇಶ್ವರ ಜಾತ್ರಾ ಮಹೋತ್ಸವ ಮೇ.18 ರಿಂದ 20ರ ವರೆಗೆ ವಿಜೃಂಭಣೆಯಿಂದ 3 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗುತ್ತವೆ ಎಂದು ಪರಮ ಪೂಜ್ಯ ಅಂಕಲಿಮಠ ಶ್ರೀ ಫಕೀರಸ್ವಾಮಿ ಗಳು ಸೋಮವಾರ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷ ಕೂಡ ಅಂಕಲಿ ಮಠದ ಜಾತ್ರಾ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳ್ಳಿಸ ಬೇಕು.
ಮೇ.18ರಿಂದ 20ರ ವರೆಗೆ ವಿವಿಧ ಧಾರ್ಮಿಕ ಆಚರಣೆಯಂತೆ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತವೆ.
ಮೇ. 18ರ ವಿವಾರ ಬೆಳಗ್ಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ವಟುಗಳಿಗೆ ಅಯ್ಯಾಚಾರ 19 ರಂದು ಸೋಮವಾರ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶಿವಭಜನೆ ಪ್ರಾರಂಭ, ರಕ್ತದಾನ ಶಿಬಿರ ಜರಗುವುದು. ಸಂಜೆ 4 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ.
ದಿ.20ರಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶಿವಭಜನಾ ಸಮಾಪ್ತಿಯಾಗುತ್ತದೆ ಮತ್ತು ಸಕಲ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಉಚ್ಚಯ್ಯ ಜರುಗುತ್ತದೆ. ಮಹಾಪ್ರಸಾದ ಪೂಜೆ ನಡೆಯುವುದು. ನಂತರ ಬೆಳ್ಳಗೆ 11 ಘಂಟೆಗೆ ಧರ್ಮಸಭೆ ಮತ್ತು ಸಾಮೂಹಿಕ ವಿವಾಹಗಳು ಜರುಗುತ್ತವೆ.
ಸಾಯಂಕಾಲ 5 ಘಂಟೆಗೆ ರಥೋತ್ಸವವು ಕಾರ್ಯಕ್ರಮ ಸಕಲ ಕಲಾ ವಾದ್ಯ ವೈಭವಗಳೊಂದಿಗೆ ಜರುಗುತ್ತದೆ ಎಂದು ತಿಳಿಸಿದರು.
ಸದ್ಗುರು ನಿರುಪಾದೇಶ್ವರ ಶ್ರೀ ಪ್ರಶಸ್ತಿ ಪಡೆಯುವ ಗಣ್ಯರ ಹೆಸರುಗಳ ಬಗ್ಗೆ ಮಾಹಿತಿ ..
1) ಸಂಜಯ ಕುಮಾರ್ ಹಂಚಾಟೆ
ಬೆಂಗಳೂರು ಹೈಕೋರ್ಟ್
ನ್ಯಾಯಾಧೀಶರಾದ
2)ಶ್ರೀ ಋಷಿ ಸಾಹಿತ್ಯ ಸಂಗೀತ ಮತ್ತು ನಿಮಾ೯ಪಕರು ಬೆಂಗಳೂರು
3)ಡಾ!! ಶರಣಬಸವ ಮಾಸ್ಟರ್ ತಾಲೂಕಿನ ವೈಧ್ಯಾಧಿಕಾರಿ ಮಾನವಿ
4)ವಿರೇಶ ದೊಡ್ಡಮನಿ DSP ಬೆಳಗಾವಿ
5 ) ಶ್ರೀ ವೆಂಕಟ ರಮಾಂಜನೇಯ ಸ್ವಾಮಿ ದಾವಣಗೆರೆ ಕೃಷಿ ಕ್ಷೇತ್ರ. ನಿರುಪಾದೇಶ್ವರ ಶ್ರೀ ಪ್ರಶಸ್ತಿ ಪಡೆಯುವ ಗಣ್ಯರ ಬಗ್ಗೆ
ಈ ಸಂದರ್ಭದಲ್ಲಿ ಶ್ರೀ ಫಕೀರಸ್ವಾಮಿ ಅವರು ಮಾಹಿತಿ ನೀಡಿದರು
ಈ ವೇಳೆ ತುರಡಗಿ ನಾಗನಗೌಡ, ರಿಯಾಜ್ ಪಾಷಾ, ಹಾಗೂ ಪರಮ ಪೂಜ್ಯ ಅಂಕಲಿಶ್ರೀ ಶಿಷ್ಯರು ಉಪಸ್ಥಿತರಿದ್ದರು.