ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ:- ಜಿಲ್ಲಾಧಿಕಾರಿಗೆ ಮನವಿ..

ರಾಯಚೂರು ವರದಿ..

ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ:- ಜಿಲ್ಲಾಧಿಕಾರಿಗೆ ಮನವಿ..

ರಾಯಚೂರು:- ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಹಾಗೂ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸುಳ್ಳು ಪ್ರಚಾರವನ್ನು ತಡೆಗಟ್ಟುವಂತೆ
ಜಿಲ್ಲಾಧಿಕಾರಿಗಳಿಗೆ ಮಂಗಳವಾರ ದಂದು
ಭಕ್ತವೃಂದದವರು ಮನವಿ ಸಲ್ಲಿಸಿದ್ದಾರೆ.

ಭಕ್ತರ ಪ್ರಕಾರ, ಗಿರೀಶ್‌ ಮಟ್ಟಣ್ಣವರ್ ಮಹೇಶ್ ಶೆಟ್ಟಿ ತಿಮರೋಡಿ, ಸಮೀರ್ ಎಂ.ಡಿ., ಸಂತೋಷ್ ಶೆಟ್ಟಿ, ಜಯಂತ ಟಿ,
ಅಜಯ್ ಅಂಚನ್ ಮತ್ತು ಅವರ ಸಹಚರರು ದೇವಾಲಯ ಹಾಗೂ ಪೂಜ್ಯನೀಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ
ಕುಟುಂಬದವರ ವಿರುದ್ಧ ಕೀಳಮಟ್ಟದ ಭಾಷೆ ಬಳಸಿ, ತಿದ್ದುಪಡಿ ಮಾಡಲಾದ ವೀಡಿಯೋ ತುಣುಕುಗಳನ್ನು ಹರಿಬಿಡುತ್ತಿದ್ದಾರೆ.

ಯಾವುದೇ ದಾಖಲೆಗಳಿಲ್ಲದೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಕೋಟ್ಯಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ
ವಿಭಜನೆ ಉಂಟಾಗುವ ಹಾಗೂ ಮುಂದಿನ ದಿನಗಳಲ್ಲಿ ಶಾಂತಿಭಂಗ ಸಂಭವಿಸುವ ಸಾಧ್ಯತೆ ಇದೆ ಎಂದು ಭಕ್ತರು ಎಚ್ಚರಿಸಿದ್ದಾರೆ.ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣದ ತನಿಖೆ ನಡೆಸುತ್ತಿರುವುದನ್ನು ಭಕ್ತರು
ಸ್ವಾಗತಿಸಿದರೂ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ತ್ವರಿತಗೊಳಿಸುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ. ಭಕ್ತರು, ಆರೋಪಿಗಳಿಂದ ಹರಿಯುತ್ತಿರುವ ಸುಳ್ಳು ಪ್ರಚಾರದ ಹಿಂದೆ ಯಾರು ಇದ್ದಾರೆ? ಅವರಿಗೆ ಹಣಕಾಸು ನೆರವು ಎಲ್ಲಿಂದ
ಬರುತ್ತಿದೆ? ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟವರನ್ನು ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆ
ಬಹಿರಂಗಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅಪಪ್ರಚಾರ ನಡೆಯದಂತೆ ಕ್ರಮ ಕೈಗೊಳ್ಳುವಂತೆ ಭಕ್ತರು ಮನವಿ ಸಲ್ಲಿಸಿದರು. ಕ್ಷೇತ್ರದ ಗೌರವಕ್ಕೆ ಧಕ್ಕೆ ಬಾರದಂತೆ ನಾವು ಸದಾ ರಕ್ಷಣೆಗೆ ಸಿದ್ಧರಿದ್ದೇವೆ ಎಂದು ಭಕ್ತವೃಂದವು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಡಾ‌. ಶಶಿಕಲಾ ಬೊವಿ ಸಿದ್ದಯ್ಯ ಸ್ವಾಮಿ ಮೇಗಳಪೇಟೆ ತೋಟಮ್ಮ ಅಂಗಡಿ ಜವರಿಶೆಟ್ ಗಂಗಮ್ಮ ಈರಮ್ಮ ಗ್ಯಾನನ್ ಗೌಡ ನಾಗಲಾಪೂರ ಅನೇಕ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!