LOCAL NEWS : ಅವಳಿ ತಾಲೂಕಿಗೆ B.Sc ನರ್ಸಿಂಗ್ ಕಾಲೇಜು, ಕಾರ್ಮಿಕ ವಸತಿ ಶಾಲೆ, ಪಿ.ಯು.ಸಿ. ವಸತಿ ಕಾಲೇಜ ಮಂಜೂರು ಮಾಡಿ ಸರ್ಕಾರದಿಂದ ಆದೇಶ..!!
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ-ಕುಕನೂರು ಅವಳಿ ತಾಲೂಕಿಗೆ ಮತ್ತೆ ಒಂದು B.Sc ನರ್ಸಿಂಗ್ ಕಾಲೇಜು, ಕಾರ್ಮಿಕ ವಸತಿ ಶಾಲೆ, ಪಿ.ಯು.ಸಿ. ವಸತಿ ಕಾಲೇಜ ಮಂಜೂರು ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಮಾಡಸಿದ್ದಾರೆ ಎನ್ನಲಾಗಿದೆ.
ಯಲಬುರ್ಗಾ ಪಟ್ಟಣಕ್ಕೆ B.Sc ನರ್ಸಿಂಗ್ ಕಾಲೇಜು ಮಂಜೂರಾಗಿ ಆದೇಶ ಮಾಡಲಾಗಿದ್ದು, ಇದಕ್ಕೆ 10 ಎಕರೆ ಜಾಗವನ್ನು ಈಗಾಗಲೇ ಯಲಬುರ್ಗಾದ ಪಿ.ಜಿ. ಸೆಂಟರ್ ಪಕ್ಕದಲ್ಲಿ ಕಾಯ್ದಿರಿಸಲಾಗಿದೆ. (ಸರ್ಕಾರದ ಆದೇಶ ಸಂಖ್ಯೆ -ಎಂಇಡಿ 327 ಎಂಪಿಎಸ್ 2025) ಕಾರ್ಮಿಕ ವಸತಿ ಶಾಲೆ ಸುಮಾರು 37.00 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಹಾಗೂ ಭಾನಾಪೂರ-ಕುಕನೂರು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಳಬಾಳ ಸೀಮಾದ ಹಿರೇಹಳ್ಳ ಹತ್ತಿರದ (BSCPL ಹತ್ತಿರ) 10 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. (ಸರ್ಕಾರದ ಆದೇಶ ಸಂಖ್ಯೆ 190 2025)
ತಾಲೂಕಿನ ತಾಳಕೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪಿ.ಯು.ಸಿ. ವಸತಿ ಕಾಲೇಜನ್ನಾಗಿ ಉನ್ನತೀಕರಣಗೊಳಿಸಿ ಆದೇಶಿಸಲಾಗಿದೆ. (ಸರ್ಕಾರದ ಆದೇಶ ಸಂಖ್ಯೆ -ಸಕಇ 104 ಎಂಡಿಎಸ್ 2025) ಈ ಎಲ್ಲಾ ಯೋಜನೆಗಳು 2025-26ನೇ ಸಾಲಿನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅಧಿಕೃತ ಮಾಹಿತಿ ಇದೆ.