ಪ್ರಜಾ ವೀಕ್ಷಣೆಯ ಸೂಕ್ಷ್ಮ ನೋಟ :-
SPECIAL STORY : ಕುಕನೂರು ನ್ಯಾಯಾಲಯದ ಮುಂಭಾಗ ಮಳೆ ನೀರಿಗೆ “ಮಿನಿ ಕೆರೆ” ನಿರ್ಮಾಣ..! : ಕೋರ್ಟ್‌ಗೆ ಬರುವ ಜನರಿಗೆ ರಸ್ತೆ ಇಲ್ಲದೇ ಪರದಾಟ..!!
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಕುಕನೂರು ತಾಲ್ಲೂಕಿನ ಸಂಚಾರಿ ನ್ಯಾಯಾಲಯ (ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಕುಕುನೂರು)ವು ಮಂಗಳವಾರ ಹಾಗೂ ಬುಧವಾರ ವಾರದಲ್ಲಿ ಎರಡು ದಿನ ಕಾರ್ಯ ನಿರ್ವಹಿಸುತ್ತಿದ್ದು, ಆದರೆ, ಕಳೆದ 2 ಎರಡು ದಿನಗಳ ಹಿಂದೆ ಭಾರೀ ಮಳೆ ಬಂದ ಹಿನ್ನಲೆಯಲ್ಲಿ ಕೋರ್ಟ್‌ನ ಮುಂಬಾಗದ ರಸ್ತೆಯಲ್ಲಿ “ಮಿನಿ ಕೆರೆ”ಯಂತೆ ನಿರ್ಮಾಣಗೊಂಡಿದ್ದು, ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರಿಗೆ ರಸ್ತೆ ಇಲ್ಲದೇ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.
ಕಳೆದ 2 ದಿನಗಳ ಹಿಂದೆ ತಾಲೂಕಿನಾದ್ಯಂತ ಭಾರೀ ಮಳೆಯಾದ ಪರಿಣಾಮ ಪಟ್ಟಣದಲ್ಲಿ ಬಹಳಷ್ಟು ಆವಾಂತರಗಳು ಆಗಿತ್ತು, ಪಟ್ಟಣದ ಕುಕನೂರು ಸಂಚಾರಿ ನ್ಯಾಯಾಲಯದಲ್ಲಿ ಈಗಾಗಲೇ ಕೋರ್ಟ್‌ನ ಕಾರ್ಯಕಲಾಪಗಳು ಆರಂಭಗೊಂಡಿದ್ದು, ಇದರ ಮುಂಭಾಗದಲ್ಲಿ ಸಾಕಷ್ಟು ಪ್ರಮಾಣದ ಮಳೆ ನೀರು ನಿಂತಿರುವುದರಿಂದ ಕೋರ್ಟ್ ಕೆಲಸಕ್ಕೆ ಬರುವ ಮಾನ್ಯ ನ್ಯಾಯಾಧೀಶರು ಸೇರಿ ಇಲ್ಲಿಗೆ ಬರುವ ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದಂತ್ತು ಸತ್ಯ.
ಹಾಗಾಗಿ ಸ್ಥಳೀಯ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಕೊಟ್ಟು ತ್ವರಿತಗತಿಯಲ್ಲಿ ಈ ದಾರಿಯನ್ನು ಮಾಡಿಕೊಡಬೆಕೇಂದು ಇಲ್ಲಿನ ಸ್ಥಳೀಯರ ಆಗ್ರಹ ಹಾಗೂ ವಕೀಲರ ಮನವಿ ಕೂಡ ಆಗಿದೆ.
“ನ್ಯಾಯಾಲಯದ ಆವರಣ ಹಾಗೂ ಮುಂಭಾಗದಲ್ಲಿ ಮಳೆ ನೀರು ನಿಂತಿರುವುದು ಗಮನದಲ್ಲಿದ್ದು, ಸ್ವಚ್ಛತೆ ಹಾಗೂ ಮಣ್ಣು ಹಾಕಿಸುವ ವ್ಯವಸ್ಥೆ ಮಾಡಲಾಗುವುದು. ಇಂದು ಬೆಳಗ್ಗೆ ಸಾಕಷ್ಟು ಪ್ರಮಾಣ ನೀರನ್ನು ಹೋರಹಾಕಲಾಗಿದೆ. ಆದಷ್ಟು ಬೇಗ ಕೋರ್ಟ್ ರಸ್ತೆಯನ್ನು ದುರಸ್ತಿಮಾತ್ತೇವೆ”

ಪಟ್ಟಣ ಪಂಚಾಯಿತಿ ಕುಕನೂರು.