You are currently viewing LOCAL NEWS : ವಾಲ್ಮೀಕಿಯವರು ಹಾಕಿಕೊಟ್ಟ ಆದರ್ಶಗಳ ಪಾಲನೆಗೆ ಕುಲಪತಿಗಳಾದ ಪ್ರೊ.ಬಿ.ಕೆ ರವಿ ಕರೆ

LOCAL NEWS : ವಾಲ್ಮೀಕಿಯವರು ಹಾಕಿಕೊಟ್ಟ ಆದರ್ಶಗಳ ಪಾಲನೆಗೆ ಕುಲಪತಿಗಳಾದ ಪ್ರೊ.ಬಿ.ಕೆ ರವಿ ಕರೆ

LOCAL NEWS : ವಾಲ್ಮೀಕಿಯವರು ಹಾಕಿಕೊಟ್ಟ ಆದರ್ಶಗಳ ಪಾಲನೆಗೆ ಕುಲಪತಿಗಳಾದ ಪ್ರೊ.ಬಿ.ಕೆ ರವಿ ಕರೆ

ಕೊಪ್ಪಳ : ಅಮೂಲ್ಯ ಆದರ್ಶಗಳುಳ್ಳ ರಾಮಾಯಣ ಕೃತಿಯನ್ನು ದೇಶಕ್ಜೆ ಕೊಡುಗೆ ನೀಡಿದ ಮಹರ್ಷಿ ವಾಲ್ಮೀಕಿಯವರು ಶ್ರೇಷ್ಠ ಮಹಾತ್ಮರಾಗಿದ್ದು, ಅವರು ಹಾಕಿಕೊಟ್ಟ ಆದರ್ಶ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಸಮಾಜದಲ್ಲಿ ಎಲ್ಲರೂ ಸುಖವಾಗಿ ಹಾಗೂ ನೆಮ್ಮದಿಯಾಗಿ ಇರಲು ಸಾಧ್ಯ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ: ಬಿ.ಕೆ.ರವಿ ರವರು ಅಭಿಪ್ರಾಯಪಟ್ಟರು.

ಕೊಪ್ಪಳ ವಿಶ್ವ ವಿದ್ಯಾಲಯದಲ್ಲಿ‌ ವಾಲ್ಮೀಕಿ ಜಯಂತಿ ಆಚರಣೆ ನಂತರ ಮಾತನಾಡಿದ ಅವರು, ಕಷ್ಟಪಟ್ಟರೆ ಯಾರು ಏನು ಬೇಕಾದರೂ ಆಗಬಹುದು. ಅಸಾಧ್ಯ ಎನ್ನುವುದೆಲ್ಲವೂ ಸಾಧ್ಯ ಮಾಡಬಹುದುದು ಎನ್ನುವುದಕ್ಕೆ ಆದಿಕವಿ ವಾಲ್ಮೀಕಿಯವರು ಆದರ್ಶಪ್ರಾಯರಾಗಿದ್ದಾರೆ. ಹೀಗಾಗಿ ಅವರ ಆದರ್ಶಗಳನ್ನು ‌ಹಾಗೂ ಸರ್ವ ಧರ್ಮ ಗಳಲ್ಲಿನ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅವರು ತಿಳಿಸಿದರು.

ಈ ವೇಳೆ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ: ಕೆ.ವಿ.ಕೆ ಪ್ರಸಾದರವರು ಉಪಸ್ಥಿತರಿದ್ದು, ಸಕಲರಿಗೂ ವಾಲ್ಮೀಕಿ ಜಯಂತಿಯ ಶುಭ ಹಾರೈಸಿದರು. ಇದಕ್ಕೂ ಮೊದಲು ಸಕಲ ಶ್ರದ್ದಾ ಭಕ್ತಗಳಿಂದ ಆದಿಕವಿ ವಾಲ್ಮೀಕಿಯವರ ಭಾವಚಿತ್ರಕ್ಕೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಈ ವೇಳೆ ಎಲ್ಲ ಬೋಧಕ, ಬೋಧಕೇತರ ಸಿಬ್ಬಂಧಿ ಉಪಸ್ಥಿತರಿದ್ದರು.

Leave a Reply

error: Content is protected !!