ಕೊಪ್ಪಳ ಜಿಲ್ಲೆಗೆ ಒಲಿದ ಮೂರು ರಾಜ್ಯೋತ್ಸವ ಪ್ರಶಸ್ತಿ.

You are currently viewing ಕೊಪ್ಪಳ ಜಿಲ್ಲೆಗೆ ಒಲಿದ ಮೂರು ರಾಜ್ಯೋತ್ಸವ ಪ್ರಶಸ್ತಿ.

2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ 68 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು (ಅ.31) ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 68 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು 10 ಸಂಘ ಸಂಸ್ಥೆಗಳಿಗೂ ಸಹ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು, ನವೆಂಬರ್‌ 1 ರಂದು ನಾನಾ ಕ್ಷೇತ್ರಗಳ ಒಟ್ಟು 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇನ್ನು 2023-24ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲೆಯ ವಿವರ ಹೀಗಿದೆ.

ಸಮಾಜಸೇವೆ ಕ್ಷೇತ್ರಯಲ್ಲಿ ಜಿಲ್ಲೆಯ ಕುಣಕೇರಿಯ ಗ್ರಾಮದ ಹುಚ್ಚಮ್ಮ ಬಸಪ್ಪ ಚೌದ್ರಿ,
ತೊಗಲು ಗೊಂಬೆಯಾಟದಲ್ಲಿ ಜಿಲ್ಲೆಯ ಮೊರನಹಳ್ಳಿ ಯ
ಕೇಶಪ್ಪ ದೊಡ್ಡಬಾಳಪ್ಪ ಶಿಳ್ಳಿ ಕ್ಯಾತರ
ಹಾಗೂ ಕಾರಟಗಿ ತಾಲೂಕಿನ ಸಿದ್ದಾಪುರ ಸಮೀಪದ ಹಗಲು ವೇಷದಾರಿಯಾದ ಗುಂಡಪ್ಪ ವಿಭೂತಿ ಆಯ್ಕೆಯಾಗಿದ್ದರೆ.
ಜಿಲ್ಲೆಗೆ ಒಲಿದ ಮೂರು ರಾಜ್ಯೋತ್ಸವ ಪ್ರಶಸ್ತಿಯಿಂದ ಜಿಲ್ಲೆಯ ಸಾಹಿತಿಗಳ ಹಾಗೂ ಸಮಾಜ ಸೇವಕರಲಲ್ಲಿ ಸಂತಸ ಮನೆ ಮಾಡಿದೆ.

Leave a Reply

error: Content is protected !!