ತಾಲೂಕಿನ ಕವಲೂರ ಗ್ರಾಮದಲ್ಲಿ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.

You are currently viewing ತಾಲೂಕಿನ ಕವಲೂರ ಗ್ರಾಮದಲ್ಲಿ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.

ಕೊಪ್ಪಳ : ತಾಲೂಕಿನ ಕವಲೂರ ಗ್ರಾಮದಲ್ಲಿ ಮಂಗಳವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು

ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ ರಾಜಶೇಖರ್ ಹಿಟ್ನಾಳ, ಮಂಜುಳಾ ಕರಡಿ, ವಾಲ್ಮೀಕಿ ಪ್ರಸನ್ನ ನಂದ ಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಜಶೇಖರ್  ಮಾತನಾಡಿ  ರಾಮಾಯಣದ ಮೂಲಕ  ದಾಂಪತ್ಯ ಜೀವನ ಹೇಗಿರಬೇಕು, ಅಣ್ಣ ತಮ್ಮಂದಿರ ಸಂಬಂಧ ಹೇಗಿರಬೇಕು ಎಂಬುದನ್ನು ತಿಳಿಸಿದವರು   ಮಹರ್ಷಿ  ವಾಲ್ಮೀಕಿ ಋಷಿಗಳು, ನಾಯಕರನ್ನು ಸೃಷ್ಟಿಸುವ ಏಕೈಕ ಸಮಾಜ ನಾಯಕ ಸಮಾಜ, ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಬೇಕು. ಸಮಾಜದಲ್ಲಿ ಶಿಕ್ಷಣ ಕೊಟ್ಟಾಗ ಮಾತ್ರ ಮಕ್ಕಳಿಂದ ಅಭಿವೃದ್ಧಿ ಹೊಂದಲು ಸಾಧ್ಯ ಹಾಗೂ ಅವರು ಸಹ ಮುಂದೆ ಉತ್ತಮ ನಾಗರಿಕ ಅಥವಾ ನಾಯಕರಾಗಿತ್ತಾರೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪ್ರಸನ್ನನಂದ ಮಹಾಸ್ವಾಮಿಗಳು, ಮೂಲ ಕಸುಬಿನ ಕಾಯಕದ ಮೇಲೆ ನಮ್ಮ ಜಾತಿ ರಚಿಸಲ್ಪಟ್ಟಿದೆ. ರತ್ನಾಕರ ಮೂಲತಃ ಬೇಟೆಗಾರ ಮನ ಪರಿವರ್ತನೆಗಾಗಿ ಜಪ ತಪ ಮಾಡಿ ವಾಲ್ಮೀಕಿಯಾದ,ನಾರದ ಋಷಿಯು ಪ್ರೇರಣೆಯಿಂದ ಹಿಂಸ ಮಾರ್ಗ ತೊರೆದು ಅಹಿಂಸಾತ್ಮಕ ತತ್ವಗಳನ್ನು ಅಳವಡಿಸಿಕೊಂಡು ಬದಲಾಗಿ ರಾಮತಾರಕ ಮಂತ್ರದಿಂದ ಆತ್ಮಕಲ್ಯಾಣಕ್ಕಾಗಿ ಲೋಕ ಕಲ್ಯಾಣಕ್ಕಾಗಿ ರತ್ನಾಕರ ವಾಲ್ಮೀಕಿ ಮಹರ್ಷಿಯಾಗುತ್ತಾನೆ.          ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ಆಸ್ತಿ ಅಧಿಕಾರಕ್ಕಾಗಿ ಬಡಿದಾಡುತ್ತಾನೆ, ಅಣ್ಣ ತಮ್ಮಂದಿರ ತ್ಯಾಗವನ್ನು  ಮಹರ್ಷಿ ವಾಲ್ಮೀಕಿ ರಾಮಾಯಣ ಎಂದು  ಸಾರಿದ್ದಾರೆ .

ದಶರಥನ ಮೂರು ಜನ ಹೆಂಡತಿಯರಾದ ಕೌಶಲ್ಯ, ಸುಮಿತ್ರಾ, ಕೈಕೆಯ ಮಕ್ಕಳಾದ ರಾಮ,ಲಕ್ಷಮಣ,ಭರತ ಶತ್ರುಘ್ನ ರ ಆಸ್ತಿ ಅಧಿಕಾರಕ್ಕಾಗಿ ವನವಾಸ , ಅಜ್ಞಾತವಾಸದ ತ್ಯಾಗದ ಕಥೆಯೇ ರಾಮಾಯಣ ವಾಗಿದೆ.

ರಾಮ ಏಕಪತ್ನಿ ವೃತಸ್ತ, ತನ್ನ ಹೆಂಡತಿ ಸೀತಾ ಮಾತೆ ಬಿಟ್ಟು ಬೇರೆಯವರಿಗೆ ಮದುವೆಯಾಗಿಲ್ಲ ಪರಸ್ಥಿಯರಿಗೆ ಕಣ್ಣಿತ್ತಿ ನೋಡದ ಮರ್ಯಾದೆ ಪುರಷ.ಆಸ್ತಿ ಮತ್ತು ಅಂತಸ್ತಿಗಾಗಿ ಅಣ್ಣ ತಮ್ಮಂದಿರ ನಡುವಿನ ತ್ಯಾಗ ರಾಮಯಣವಾದರೇ,ಎರಡು ಕುಟುಂಬಗಳ ಅಣ್ಣತಮ್ಮಂದಿರು ಕೌರವ ಪಾಂಡವರ ಆಸ್ತಿಗಾಗಿ ಆದ ಜಗಳ( ಯುದ್ಧವನ್ನು) ಮಹಾಭಾರತ ಎನ್ನುತ್ತಾರೆ.

ನಮ್ಮ ದೇಹವನ್ನು ಸ್ವರ್ಗದಕಡೆ ಹೊಗಬೇಕು ಜೀವನ ಮೌಲ್ಯಗಳನ್ನು ತಿಳಿದುಕೊಳ್ಳಬೇಕಾದರೆ ರಾಮಾಯಣ ಓದಬೇಕು.
ನಾವು ಜ್ಯಾತಿ ಮಾಡುತ್ತೇವೆ ಆದರೆ ಜ್ಯಾತಿ ಜ್ಯೋತಿಯನ್ನು ಮಹಾನ್ ವ್ಯಕ್ತಿಗಳಿಗೆ ಅಂಟಿಸಿ ಬಾರದು.ವಾಲ್ಮೀಕಿ ಮಹರ್ಷಿ ಕೇವಲ ವಾಲ್ಮೀಕಿ ಜನಾಂಗದವರಿಗೆ ಸೀಮಿತವಾಗಬಾರದು ಅವರು ಸರ್ವಜನಾಂಗಕ್ಕೂ ಬೇಕಾದವರು ಹೀಗಾಗಿ ಸರ್ಕಾರ  ಮಹಾನ್ ವ್ಯಕ್ತಿಗಳಿಗೆ ಜಯಂತಿ ಎಂದು ವಾಲ್ಮೀಕಿಯನ್ನು ರೂಪಿಸಿದೆ ಎಂದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ರಾಮಣ್ಣ ಕಲ್ಲನವರು,  ಮಂಜುಳಾ ಕರಡಿ, ಭರಮಪ್ಪ ಹಟ್ಟಿ, ಭೀಮಣ್ಣ,ಗುರ್ರಣ್ಣ , ಶಿವಮೂರ್ತಿ ಗುತ್ತುರು , ಸಂಜೀವ್ ನಾಯಕ,ವಸಂತ ನಾಯಕ, ಆಯೋಜಕರು ಆದ ನಾಗರಾಜ್ ಕಗ್ಗಲ್, ಕನಕಪ್ಪ ತಳವಾರ, ಮುತ್ತಪ್ಪ ಸೇರಿದಂತೆ ಇತರರು ಇದ್ದರು.

Leave a Reply

error: Content is protected !!