ಮುದಗಲ್ಲ ವರದಿ..
ಮುದಗಲ್ಲ ಸಿದ್ದಾರ್ಥ ನಗರದ ಆರಾಧ್ಯ ದೈವ ಕಂಠಿ ದುರಗಮ್ಮ ದೇವಿಯಜಾತ್ರಾ ಮಹೋತ್ಸವ ,ಕಲಶ ಮೆರವಣಿಗೆ…
ಮುದಗಲ್: ಪಟ್ಟಣದ ಸಿದ್ದಾರ್ಥ ನಗರದ ಆರಾಧ್ಯ ದೈವ
ಕಂಠಿ ದುರಗಮ್ಮ ದೇವಿ ಜಾತ್ರಾ ಮಹೋತ್ಸವವು ಸೋಮವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.
ದೇವಿ ಮೂರ್ತಿಗೆ ವಿವಿಧ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.ದೇವಿಗೆ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಿಯ ಕಲಶ ಮೆರವಣಿಗೆ ನಡೆಯಿತು.ಮಹಿಳೆಯರು ಮೆರವಣಿಗೆಯಲ್ಲಿ ಕುಂಭದೊಂದಿಗೆ ಮೆರುಗು ತಂದರು ಡೊಳ್ಳುಕುಣಿತ, ಭಜನಾ ನೃತ್ಯ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ಪುರಸಭೆ ಸದಸ್ಯ ಗುಂಡಣ್ಣ ಗಂಗಾವತಿ, ಮಹಾಂತೇಶ ಅಕ್ಷತಿ, ಹೇಮಂತ್ ನಾಗಲಾಪೂರ,
ಸುರೇಶ್ ,ಪೂಣ೯ ನಂದ , ರವಿ, ಮಂಜುನಾಥ, ಲಿಂಗಪ್ಪ, ಬಸವರಾಜ, ಗಣೇಶ್ , ರಾಮಣ್ಣ ,ಇತರರು ಉಪಸ್ಥಿತರಿದ್ದರು..
ವರದಿ:-ಮಂಜುನಾಥ ಕುಂಬಾರ