ಮುದಗಲ್ಲಯಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ…

ಮುದಗಲ್ಲ ವರದಿ..

ಮುದಗಲ್ಲಯಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ…

ಮಕ್ಕಳು, ವೃದ್ಧರು, ಮಹಿಳೆಯರು ಓಡಾಡುವುದೇ ಕಷ್ಟ..

ಮುದಗಲ್ಲ ಎಲ್ಲಾ ವಾರ್ಡ್‌‌ಗಳಲ್ಲಿಯೂ ಒಂದೊಂದು ಗುಂಪು ಹೆಚ್ಚಾಗಿದ್ದು, ಜನ ಓಡಾಡುವಾಗ ಮತ್ತು ವಾಹನ ಚಲಾಯಿಸುವ ವೇಳೆ ಹಿಂಬಾಲಿಸಿಕೊಂಡು ಬೊಗಳುತ್ತವೆ.

ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ, ವಯೋವೃದ್ಧರು ವಾಯು ವಿಹಾರಕ್ಕೆ ತೆರಳುವ ವೇಳೆ ನಾಯಿಗಳು ದಾಳಿ ನಡೆಸುತ್ತವೆ. .

ಮುದಗಲ್ಲ ಪುರಸಭೆ ಸಂತೆ ಬಸ್ ನಿಲ್ದಾಣ, ರಸ್ತೆ, ಮತ್ತು ಮಾಂಸಹಾರ ಹೋಟೆಲ್‌ ಸಮೀಪ ನಾಯಿಗಳ ದಂಡು ಬೀಡು ಬಿಟ್ಟಿರುತ್ತದೆ. ಈ ಪ್ರದೇಶಗಳಲ್ಲಿ ಜನ ಓಡಾಡಲು ಭಯಪಡುತ್ತಾರೆ.

ಹಗಲಿನಲ್ಲಿ ಸಾಧುವಂತೆ ವರ್ತಿಸುವ ಶ್ವಾನಗಳು ಸಂಜೆಯಾಗುತ್ತಿದ್ದಂತೆ ಮೃಗದಂತೆ ಕೆರಳಿ ನಿಲ್ಲುತ್ತವೆ. ಈ ಸಮಯದಲ್ಲಿ ಮಕ್ಕಳು ಮತ್ತು ಮಹಿಳೆಯರು ಹೊರಬರಲು ಹೆದರುತ್ತಾರೆ. ಸೈಕಲ್‌ ಮತ್ತು ಬೈಕ್‌ ಸಂಚರಿಸುವ ವೇಳೆ ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುತ್ತವೆ. ಈ ಘಟನೆಯಲ್ಲಿ ಹಲವು ಮಂದಿ ಬಿದ್ದು ಗಾಯಗೊಂಡಿದ್ದಾರೆ.

ಗುಂಪುಗಳ ನಡುವೆ ಕಾದಾಟ ನಡೆಯುತ್ತಲೆ ಇರುತ್ತದೆ. ಈ ವೇಳೆ ಚಲಿಸುವ ವಾಹನಗಳಿಗೆ ಅಡ್ಡ ಬಂದು ವಾಹನ ಸವಾರರು ಬೀಳುವುದು ಸಾಮಾನ್ಯವಾಗಿದೆ.

ರಾತ್ರಿ ವೇಳೆ ನಾಯಿಗಳ ಕೂಗಾಟ, ಚೀರಾಟದಿಂದ ನೆಮ್ಮದಿಯ ನಿದ್ದೆ ಮಾಡಿ ಹಲವು ತಿಂಗಳು ಕಳೆದಿದೆ. ನಾಯಿಗಳ ಉಪಟಲಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಾಯಿಗಳ ಹಾವಳಿಯಿಂದ ಬೀದಿಯಲ್ಲಿ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಮನೆಗೆ ಅವಶ್ಯಕ ವಸ್ತು ತರಲು ಅಂಗಡಿಗೆ ಹೋಗಲು ಭಯಪಡುವಂತಾಗಿದೆ.
ಪುರಸಭೆ ಯ ಮುಖ್ಯ ರಸ್ತೆಯಲ್ಲಿ ಹೋಗುವ ವೇಳೆ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ

ದುರಗಪ್ಪ ಗುಂಡಸಾಗರ.

ನಾಯಿಗಳ ಹಾವಳಿಯಿಂದ ಬೀದಿಯಲ್ಲಿ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಮನೆಗೆ ಅವಶ್ಯಕ ವಸ್ತು ತರಲು ಅಂಗಡಿಗೆ ಹೋಗಲು ಭಯಪಡುವಂತಾಗಿದೆ.

ರಾಮಣ್ಣ ಬಂಕದಮನೆ..

ಶಾಲಾ ಬಸ್‌ಗೆ ಹೋಗುವ ವೇಳೆ ಬೀದಿ ನಾಯಿಗಳ ಕಾಟ ಹೆಚ್ಚಾಗಿರುವುದರಿಂದ ಪೋಷಕರು ಜೊತೆಗೆ ಬರಬೇಕು. ಹಲವು ಬಾರಿ ನಾಯಿ ದಾಳಿಯಿಂದ ಪಾರಾಗಿದ್ದೇನೆ.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!