LOCAL NEWS : ಧರ್ಮಸ್ಥಳದ ಪರ ನಾವಿದ್ದೇವೆ : ಬಿಜೆಪಿ ಮುಖಂಡ ಬಸವರಾಜ್ ಕ್ಯಾವಟರ್..!

You are currently viewing LOCAL NEWS : ಧರ್ಮಸ್ಥಳದ ಪರ ನಾವಿದ್ದೇವೆ : ಬಿಜೆಪಿ ಮುಖಂಡ ಬಸವರಾಜ್ ಕ್ಯಾವಟರ್..!

ಪ್ರಜಾ ವೀಕ್ಷಣೆ ಸುದ್ದಿ :

LOCAL NEWS : ಧರ್ಮಸ್ಥಳದ ಪರ ನಾವಿದ್ದೇವೆ : ಬಿಜೆಪಿ ಮುಖಂಡ ಬಸವರಾಜ್ ಕ್ಯಾವಟರ್..!

ಕೊಪ್ಪಳ : ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಸಮಾಜಕ್ಕೆ ಕೊಡುಗೆಯಾಗಿ ಏನೆಲ್ಲ..? ಕೊಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಮೇಲೆ ವಿನಾಕಾರಣ ಆಪಾದನೆ ಮಾಡಿದರೇ ನಾವು ಇನ್ನೂ ಮುಂದೆ ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವೈದ್ಯ ಬಸವರಾಜ ಕ್ಯಾವಟರ್ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಗತಿಪರರ ಸೋಗಿನಲ್ಲಿರುವವರು ವಿವಾದ ಸೃಷ್ಟಿ ಮಾಡಿ, ಶ್ರೀ ಧರ್ಮಸ್ಥಳ ಸಂಸ್ಥೆಯ ಹೆಸರನ್ನು ಹಾಳು ಮಾಡಲು ಮುಂದಾಗಿರುವುದು ನಾಚಿಕೇಡಿತನದ ಸಂಗತಿಯಾಗಿದೆ. ಆದರೆ, ಕೇವಲ ನಮ್ಮ ರಾಜ್ಯವಲ್ಲ ಇಡೀ ದೇಶಕ್ಕೆ ಧರ್ಮಸ್ಥಳ ಸಂಸ್ಥೆ ಈ ಸಮಾಜಕ್ಕೆ ನೀಡಿರುವ ಕೊಡುಗೆಗಳು ಕುರಿತು ಮಾಹಿತಿಯಿದೆ. ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಹೆಣಗಳನ್ನು ಹೂಳಲಾಗಿದೆ ಎಂಬ ಹೇಳಿಕೆ ನೀಡಿ 15 ದಿನ ಮೇಲಾದರೂ ಈವರೆಗೂ ಒಂದೇ ಒಂದು ಹೆಣ ಎಸ್‌ಐಟಿ ತಂಡಕ್ಕೆ ಸಿಕ್ಕಿಲ್ಲ.

ಇನ್ನೂ 13ದಿನ ಅಲ್ಲ, ಎಷ್ಟೆ ವರ್ಷ ಅಗೆದರೂ ಯಾವುದೇ ಹೆಣ ನಿಮಗೆ ಸಿಗೊದಿಲ್ಲ. ರಾಜ್ಯ ಸರಕಾರವು ಈ ವಿಚಾರದಲ್ಲಿ ಸಮರ್ಪಕವಾಗಿ ಪರಿಶೀಲಿಸದೇ ಎಸ್‌ಐಟಿ ರಚನೆಯಂತ ಆತುರದ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಕೆಲ ಹಿತಾಸಕ್ತ ವ್ಯಕ್ತಿಗಳು ಶ್ರೀ ಧರ್ಮಸ್ಥಳದ ಕ್ಷೇತ್ರದ ಬಗ್ಗೆ ಮಾತನಾಡಿದಾಗಲೇ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು.

ಯಾವುದೇ ತಪ್ಪು ಮಾಡದ ಶ್ರೀ ಧರ್ಮಸ್ಥಳ ಸಂಸ್ಥೆಯ ಮೇಲೆ ವಿನಾಕಾರಣ ಇಂತಹ ಅಪವಾದ ಹೊರಿಸುವುದು ತಕ್ಕದಲ್ಲ. ಸರಕಾರದ ಮಾಡಬೇಕಾದ ಕೆಲಸವನ್ನು ಮುಂದೆ ನಿಂತು ಧರ್ಮಸ್ಥಳ ಸಂಸ್ಥೆ ಮಾಡಿದಾಗ ಒಂದು ಮಾತು ಹೇಳದ ರಾಜ್ಯದಲ್ಲಿರುವ ಕೀಚಕರು, ಇದೀಗ ಧರ್ಮಸ್ಥಳದ ಹೆಸರನ್ನು ಅವಹೇಳನ ಮಾಡುತ್ತಿದ್ದಾರೆ. ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ. ಶ್ರೀ ಧರ್ಮಸ್ಥಳ ಸಂಸ್ಥೆಯೊಂದಿಗೆ ನಾವು ಹಾಗೂ ನಮ್ಮ ಪಕ್ಷ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!