BIG NEWS : ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಔಷಧ ಮತ್ತು ರಾಸಾಯನಿಕಗಳ ದಾಸ್ತಾನು ನಿರ್ವಹಣೆ ಇ-ಔಷಧ ತಂತ್ರಾಂಶದಲ್ಲಿ ಕಡ್ಡಾಯ..!

You are currently viewing BIG NEWS : ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಔಷಧ ಮತ್ತು ರಾಸಾಯನಿಕಗಳ ದಾಸ್ತಾನು ನಿರ್ವಹಣೆ ಇ-ಔಷಧ ತಂತ್ರಾಂಶದಲ್ಲಿ ಕಡ್ಡಾಯ..!

BIG NEWS : ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಔಷಧ ಮತ್ತು ರಾಸಾಯನಿಕಗಳ ದಾಸ್ತಾನು ನಿರ್ವಹಣೆ ಇ-ಔಷಧ ತಂತ್ರಾಂಶದಲ್ಲಿ ಕಡ್ಡಾಯ..!

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ರಾಜ್ಯದ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಔಷಧ ಮತ್ತು ರಾಸಾಯನಿಕಗಳ ದಾಸ್ತಾನು ನಿರ್ವಹಣೆಯನ್ನು ಕಡ್ಡಾಯವಾಗಿ ಇ-ಔಷಧ ತಂತ್ರಾಂಶದಲ್ಲಿ ನಮೂದಿಸುವ ಬಗ್ಗೆ ರಾಜ್ಯ ಸರ್ಕಾರ  ಮಹತ್ವದ ಆದೇಶವನ್ನು ಹೊರಡಿಸಿದೆ.

ಹೌದು, ಈ ಕುರಿತು ಕಳೆದ ಆಗಷ್ಟ್‌ 4 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂತ್ತೋಲೆ ಹೊರಡಿಸಿದ್ದು, ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನಾರೋಗ್ಯ–ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (ಆ.ಭಾ.-ಪು.ಜ.-ಮು.ಆ.ಕ.) ಯೋಜನೆಯಡಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಮರುಪಾವತಿಯಾಗುವ ಚಿಕಿತ್ಸಾ ಮೊತ್ತವನ್ನು ಉಲ್ಲೇಖ (1, 3, 4, & 5) ರಂತೆ ಚಿಕಿತ್ಸೆ ಮತ್ತು ರೋಗಿಗಳನ್ನು ಕೇಂದ್ರವನ್ನಾಗಿರಿಸಿ ಅಗತ್ಯ ಸೌಲಭ್ಯ, ಉಪಕರಣ, ತುರ್ತು ಔಷಧಿ, ಮುಂತಾದವುಗಳಿಗೆ ಈಗಾಗಲೆ ಆರೋಗ್ಯ ರಕ್ಷಾ ಸಮಿತಿಯ ಪೂರ್ವಾನುಮತಿ ಪಡೆದು ವಾರ್ಷಿಕ ಬೇಡಿಕೆಯ ಪಟ್ಟಿ ತಯಾರಿಸಿ ಕಡ್ಡಾಯವಾಗಿ e-Procurement ಮುಖಾಂತರ KTPP ನಿಯಮಾನುಸಾರ ಆರ್ಥಿಕ ಇಲಾಖೆಯ ಆದೇಶಗಳಿಗೆ ಒಳಪಟ್ಟು ಸಂಗ್ರಹಣೆ ಮಾಡಲು ಈಗಾಗಲೇ ನಿರ್ದೇಶನ ನೀಡಲಾಗಿರುತ್ತದೆ. ಉಲ್ಲೇಖ (2 & 6) ರಲ್ಲಿನ ಆಯುಕ್ತಾಲಯದ ಸುತ್ತೋಲೆಯಂತೆ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ KSMSCL ವತಿಯಿಂದ ನೀಡಲಾಗುವ ಸರಬರಾಜು ಮತ್ತು ಸ್ಥಳೀಯವಾಗಿ ಖರೀದಿಸಿದ ಎಲ್ಲಾ ಔಷಧಗಳ ದಾಸ್ತಾನು ನಿರ್ವಹಣೆಯನ್ನು ಕಡ್ಡಾಯವಾಗಿ ಇ-ಔಷಧ ತಂತ್ರಾಂಶದಲ್ಲಿ ನಮೂದಿಸುವಂತೆ ಆದೇಶಿಸಲಾಗಿರುತ್ತದೆ.

ಉಲ್ಲೇಖ (7) ರಲ್ಲಿನ ಮಾಹಿತಿಯಂತೆ, ಸುವರ್ಣ ಆರೋಗ್ಯ ಸುರಕ್ಷಾ ವಿಶ್ವಸ್ಥ ಮಂಡಳಿ ವತಿಯಿಂದ ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕ್ಷೇತ್ರ ಭೇಟಿ ನಡೆಸಿ ಸಲ್ಲಿಸಿರುವ ತಪಾಸಣೆಯ ವರದಿಯಂತೆ AB-PMJAY-CM’SARK ಯೋಜನೆಯ Claim revenue ಹಣದಿಂದ ಸ್ಥಳೀಯವಾಗಿ ಔಷಧಿಗಳನ್ನು ಖರೀದಿಸುವ ಸಂದರ್ಭಗಳಲ್ಲಿ KTPP ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದು, ಔಷಧಿಗಳ ದಾಸ್ತಾನು ನಿರ್ವಹಣೆಯ ದಾಖಲಾತಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಮತ್ತು e-Aushada ತಂತ್ರಾಂಶದಲ್ಲಿ ಕಾಲಕಾಲಕ್ಕೆ ನಮೂದಿಸದೇ ಇರುವುದನ್ನು ವರದಿ ಮಾಡಿರುತ್ತಾರೆ.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ದಾಖಲಾತಿಯನ್ನು ನಿರ್ವಹಿಸದೆ ಇರುವುದು ಮಾರ್ಗಸೂಚಿಗಳ ಉಂಲ್ಲಂಘನೆಯಾಗಿದ್ದು, ಮೇಲ್ನೋಟಕ್ಕೆ ತಾತ್ಕಾಲಿಕ ಸಾರ್ವಜನಿಕ ಹಣ ದುರುಪಯೋಗ ಮತ್ತು ಆರ್ಥಿಕ ಅಕ್ರಮವೆಂದು (irregularity) ಎಂದು ಪರಿಗಣನೆಯಾಗುತ್ತದೆ.

ಇದನ್ನು ಮುಂದುವರೆದು, ಉಲ್ಲೇಖದಂತೆ ಈಗಾಗಲೇ ನೀಡಿರುವ ನಿರ್ದೇಶನಗಳಿಗೆ ಹೆಚ್ಚುವರಿಯಾಗಿ ಕೆಳಕಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನ ಅನುಸರಣೆಗಾಗಿ ತಪ್ಪದೇ ಪಾಲನೆ ಮಾಡಬೇಕು.

1) AB-PMAY-CM’sArK ಯೋಜನೆಯಡಿ ಮರುಪಾವತಿಯಾದ ಹಣದಿಂದ ಸ್ಥಳೀಯವಾಗಿ ಖರೀದಿಸಲಾಗುತ್ತಿರುವ ಔಷಧಿ ಮತ್ತು ರಾಸಾಯನಿಕಗಳನ್ನು ವಾರ್ಷಿಕ ಬೇಡಿಕೆ ಪಟ್ಟಿ (annual need assessment) ತಯಾರಿಸಿ ಕಡ್ಡಾಯವಾಗಿ ಆರೋಗ್ಯ ರಕ್ಷಾ ಸಮಿತಿಯ ಪೂರ್ವಾನುಮತಿ ಪಡೆದು eProcurement ಮುಖಾಂತರ ಮಾತ್ರ ಖರೀದಿಸಲು ಕ್ರಮ ವಹಿಸುವುದು.

2) ಯಾವುದೇ ಸಂದರ್ಭದಲ್ಲೂ ವಾರ್ಷಿಕ ಬೇಡಿಕೆಯ ಖರೀದಿಗಳನ್ನು ವಿಭಜಿಸಿ, (split quotation) ವಿಭಜಿತ ದರಪಟ್ಟಿಗಳ ಮೂಲಕ ಖರೀದಿ ಮಾಡುವುದನ್ನು ನಿಷೇಧಿಸಲಾಗಿದೆ.

3) ಎಲ್ಲಾ ಆರೋಗ್ಯ ಸಂಸ್ಥೆಗಳು KSMSCL ವತಿಯಿಂದ ನೀಡಲಾಗುವ ಸರಬರಾಜು ಮತ್ತು ಬಳಕೆ ಕುರಿತ ಮಾಹಿತಿಯನ್ನು ಪ್ರತಿದಿನ e-Aushada ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸುವುದು.

4) ಸ್ಥಳೀಯವಾಗಿ ಖರೀದಿಸಿದ ಔಷಧಿ ಮತ್ತು ರಾಸಾಯನಿಕಗಳ ವರದಿ ಮತ್ತು ಬಳಕೆ ಕುರಿತ ಮಾಹಿತಿಯನ್ನು e-Aushada ತಂತ್ರಾಂಶದಲ್ಲಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ.

5) ದಾಸ್ತಾನು ನಿರ್ವಹಣೆಯ ದಾಖಲಾತಿ ನವೀಕರಣದಲ್ಲಿ ವಿಳಂಬ, ತಪ್ಪು ಸಂಗ್ರಹಣೆ ಅಥವಾ KTPP ನಿಯಮ ಮತ್ತು ಮಾರ್ಗಸೂಚಿಗಳ ಪಾಲನೆ ಮಾಡುವಲ್ಲಿ ವಿಫಲವಾದರೆ, ಅಂತಹ ಸಂಗ್ರಹಣೆಯನ್ನು “ನಿಯಮ ಬಾಹಿರ ಸಂಗ್ರಹಣೆ” ಎಂದು ಪರಿಗಣಿಸಿ ಸಂಬಂಧಪಟ್ಟ ಆಡಳಿತ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ AB-PMJAY-CM’SARK ಯೋಜನೆಯಡಿಯಲ್ಲಿ ಮರುಪಾವತಿಯಾದ ಹಣದಿಂದ ಖರೀದಿಸಲಾಗುತ್ತಿರುವ ಔಷಧ, ರಾಸಾಯನಿಕ ಮತ್ತು ಬಳಕೆ ವಸ್ತುಗಳನ್ನು ಆರೋಗ್ಯ ರಕ್ಷಾ ಸಮಿತಿಯ ಪೂರ್ವಾನುಮತಿ ಪಡೆಯುವ ಷರತ್ತಿಗೊಳಪಟ್ಟು ಕಡ್ಡಾಯವಾಗಿ KTPP ನಿಯಮಾನುಸಾರ ಮತ್ತು ಆರ್ಥಿಕ ಇಲಾಖೆಯ ಆದೇಶಗಳನ್ವಯ eProcurement (ಇ-ಟೆಂಡರ್ / GeM portal) ಮುಖಾಂತರ ಮಾತ್ರ ಸಂಗ್ರಹಣೆ ಮಾಡುವುದು ಕಡ್ಡಾಯವಾಗಿರುತ್ತದೆ.

ಈ ದಾಖಲಾತಿಗಳ ಅಸಮರ್ಪಕ ನಿರ್ವಹಣೆ ಮತ್ತು ಯೋಜನೆಯ Claim Revenue ಹಣದ ದುರ್ಬಳಕೆ ಬಗ್ಗೆ ದೂರುಗಳು ಬಂದಲ್ಲಿ ಆಸ್ಪತ್ರೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪುನರುಚ್ಚರಿಸಿ ಸರ್ಕಾರ ಮಹತ್ವದ ಆದೇಶ ಮಾಡಿದೆ.

Leave a Reply

error: Content is protected !!