ಕುಕನೂರು : “ಡಾ. ಬಿ ಆರ್ ಅಂಬೇಡ್ಕರ್ ಅವರ ಮಾರ್ಗದರ್ಶನ ಹಾಗೂ ಸಂವಿಧಾನದ ಆಶಯವನ್ನು ಉಳಿಸುವ ಕೆಲಸ ಇಂತಹ ಕಾರ್ಯಕ್ರಮಗಳಿಂದ ಆಗಲಿದೆ” ಎಂದು ತಾಲೂಕಾ ದಂಡಾಧಿಕಾರಿ ಹಾಗೂ ತಶೀಲ್ದಾರ್ ಹೆಚ್ ಪ್ರಾಣೇಶ್ ಅಭಿಪ್ರಾಯ ಪಟ್ಟರು.
ಇಂಡಿಯಾ ಮೈತ್ರಿಕೂಟ ಪಕ್ಷಗಳಿಂದ 14 ಪತ್ರಕರ್ತರ ಬ್ಯಾನ್
ಇಂದು ಪಟ್ಟಣದ ವಿದ್ಯಾನಂದ ಗುರುಕುಲ ಪ್ರೌಢ ಶಾಲೆಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ “ಸಂವಿಧಾನ ಪೀಠಿಕೆ ವಾಚನ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಚಾಲನೆ ನೀಡಿದ ಅವರು, “ಭಾರತದ ಸಂವಿಧಾನವು ಇಡೀ ವಿಶ್ವದಲ್ಲೇ ಬಹಳ ವಿಶಿಷ್ಟವಾದದ್ದು, ಪ್ರಜಾಪ್ರಭುತ್ವದ ಮೂಲ ಮಾರ್ಗದರ್ಶಿಯಾಗಿದೆ. ಈ ದಿನದಂದು ಸಂವಿಧಾನದ ಪೀಠಿಕೆ ವಾಚನ ಮಾಡುವುದು ಬಹಳ ಸೂಕ್ತವಾಗಿದೆ. ಈ ಕಾರ್ಯಕ್ರಮದ ಮೂಲಕ ಸಂವಿಧಾನದ ಮಹತ್ವ ಜನತೆಗೆ ತಿಳಿಯುವಂತೆ ಆಗಲಿದೆ” ಎಂದರು.
LOCAL NEWS : ಥ್ರೋ ಬಾಲ್‌ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆ..!!
ಈ ಕಾರ್ಯಕ್ರಮದಲ್ಲಿ ಗುರುಕುಲ ಶಿಕ್ಷಣ ಸಂಸ್ಥೆಯ ಕಾರ್ಯಧರ್ಶಿ ಜಾಗೀರದಾರ್ , ಬಿಆರ್ ಸಿ ಅಧಿಕಾರಿಗಳು, ಸುರೇಶ ಮದಿನೂರು ACO, ಮಹೇಶ್ ಅಸೂಟಿ ಬಿ ಎನ್ ಪಿ, ಸೋಮಶೇಖರ್ ನಿಲೋಗಲ್, ಸಿದ್ದಯ್ಯ ಹಿರೇಮಠ್, ಸಮಾಜ ಕಲ್ಯಾಣ ಅಧಿಕಾರಿಗಳು, ಕುಕನೂರು ಮುಖ್ಯ ಶಿಕ್ಷಕರು, ಸಹಶಿಕ್ಷಕರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು