ಪ್ರಜಾವೀಕ್ಷಣೆಯ ಫಲಶೃತಿ ಸುದ್ದಿ :
BIG IMPACT STORY : ಅಲರ್ಟ್ ಆಗಿ ತಾವೇ ಫಿಲ್ಡಿಗಿಳಿದ ಮುಖ್ಯಾಧಿಕಾರಿ..! :ಜಗಮಗಿಸುತ್ತಿರುವ ಪಟ್ಟಣದ ಮುಖ್ಯ ರಸ್ತೆ..!!

ಕುಕನೂರು : ಪಟ್ಟಣದಲ್ಲಿ (ರಾಷ್ಟ್ರೀಯ ಹೆದ್ದಾರಿ 367ರ) ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ದೀಪಗಳ ಅಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದಂತೆ ಅಲರ್ಟ್ ಆದ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್ ಮುಂದೆ ನಿಂತು ವಿದ್ಯುತ್ ಬೀದಿ ದೀಪಗಳ ದುರಸ್ತಿ ಕೆಲಸ ಮಾಡಿಸಿದ್ದಾರೆ.
ಕಳೆದ 5 ದಿನಗಳಿಂದ ಪಟ್ಟಣದ ದ್ಯಾಂಪೂರ್ ಕ್ರಾಸ್‌ನಿಂದ ಎಸ್‌ಎಫ್‌ಎಸ್ ಸ್ಕೂಲ್‌ನವರೆಗೆ ಸುಮಾರು 20 ಅಲಂಕಾರಿಕ ವಿದ್ಯುತ್ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ‘ಕುಕನೂರು ಪಟ್ಟಣದಲ್ಲಿ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ದೀಪಗಳ ಅಸಮರ್ಪಕ ನಿರ್ವಹಣೆ : ಹೆಚ್ಚಾದ ಸಾರ್ವಜನಿಕರ ಆಕ್ರೋಶ..!!’ ಎಂಬ ಶೀರ್ಷಿಕೆಯಡಿಯಲ್ಲಿ “ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ”ದಲ್ಲಿ ಪ್ರಕಟ ಮಾಡಿದ್ದೇವೆ ಈ ಸುದ್ದಿ ಪ್ರಕಟವಾದ ಬನ್ನಲ್ಲೇ ಎಚ್ಚೆತ್ತ ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್ ಅವರು ತಾವೇ ಸ್ವತಃ ಮುಂದೆ ನಿಂತು ಅಲಂಕಾರಿಕ ವಿದ್ಯುತ್ ಬೀದಿ ದೀಪಗಳ ದುರಸ್ತಿ ಕಾರ್ಯಮಾಡಿಸಿದ್ದಾರೆ.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್ ಅವರ ಕಾರ್ಯವೈಖರಿಯನ್ನು ಜನಸಾಮಾನ್ಯರು ಮೆಚ್ಚುಗೆ ವ್ಯಕ್ತ ಪಡೆಸಿದ್ದಾರೆ. ಕತ್ತಲೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾನವಾಗಿತ್ತು, ಇದೀಗ ಪಟ್ಟಣ ಪಂಚಾಯತ್ ಅಧಿಕಾರಿಗಳು ಈ ಸಮಸ್ಯೆಗೆ ಸ್ಪಂಧಿಸಿ ಆದಷ್ಟು ಬೇಗನೆ ಬಗೆಹರಿಸಿದ್ದು, ಅಧಿಕಾರಿಯ ಒಳ್ಳೆಯ ನಡೆಯನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.



