ಕುಕನೂರು ಪಟ್ಟಣ ಪಂಚಾಯತ್ : ಕಾಂಗ್ರೆಸ್ ನಲ್ಲಿ ಶುರುವಾದ ಪೈಪೋಟಿ, ಅಧ್ಯಕ್ಷರು ಯಾರಾಗುತ್ತಾರೆ ಗೊತ್ತಾ !!??
ಕುಕನೂರು : ರಾಜ್ಯ ಸರ್ಕಾರ ಮುನ್ಸಿಪಲ್, ಪಟ್ಟಣ ಪಂಚಾಯತ್ ಗಳ ಸ್ಥಾನಗಳಿಗೆ ಮೀಸಲಾತಿ ಪ್ರಕಟ ಮಾಡುತ್ತಿದಂತೆಯೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು ಆಕಾಂಕ್ಷಿಗಳಲ್ಲಿ ಇನ್ನಿಲ್ಲದ ರಾಜಕೀಯ ಕಸರತ್ತು , ಜಿದ್ದು ಪ್ರಾರಂಭವಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯತ್ ಈಗಾಗಲೇ ಕಾಂಗ್ರೆಸ್ ಪಕ್ಷದ ಕೈವಶವಾಗಿದ್ದು 19 ಸದಸ್ಯ ಬಲದ ಕುಕನೂರು ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ 10 ಸದಸ್ಯರುಗಳು ಆಯ್ಕೆಯಾಗಿದ್ದರೆ, ಬಿಜೆಪಿ ಪಕ್ಷದಿಂದ 9 ಸದಸ್ಯರು ಚುನಾಯಿತರಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಎರಡು ದಿನದ ಹಿಂದೆ ಮೀಸಲಾತಿ ಘೋಷಣೆಯಾಗಿದ್ದು ಘೋಷಣೆಯಾಗಿದ್ದು ಚುನಾಯಿತ ಸದಸ್ಯರಲ್ಲಿ ಅಧಿಕಾರದ ಆಶಾಭಾವ ಮೂಡಿದೆ.
ಚುನಾವಣೆ ನಡೆದು ಈಗಾಗಲೇ ಸುಮಾರು ಎರಡು ವರ್ಷ ದಾಟಿದ್ದು ಇದುವರೆಗೂ ಜನಪ್ರತಿನಿದಿನಗಳಿಗೆ ಅಧಿಕಾರದ ಭಾಗ್ಯ ಸಿಕ್ಕಿರಲಿಲ್ಲ, ಆದರೆ ಈಗ ಸುಪ್ರೀಮ್ ಕೋರ್ಟ್ ನ ನಿರ್ದೇಶನದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಗೊಂಡಿದೆ. ಸದಸ್ಯರಲ್ಲಿ ಒಂದು ರೀತಿಯ ಸಂತಸ ಮೂಡಿದೆ.
ಕುಕನೂರು ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಸದ್ಯ ಇದರಲ್ಲಿ ಚುನಾಯಿತ ಕಾಂಗ್ರೆಸ್ ಸದಸ್ಯರಲ್ಲಿ ಇಬ್ಬರೇ ಮಹಿಳಾ ಪ್ರತಿನಿಧಿಗಳಿದ್ದು ಇಬ್ಬರ ಮದ್ಯೆ ಪ್ರಭಲ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ. 8 ನೇ ವಾರ್ಡ್ ನ ಲಲೀತವ್ವ ಯಡಿಯಾಪುರ ಮತ್ತು 18 ನೇ ವಾರ್ಡ್ ನ ನೇತ್ರಾವತಿ ಎಂಬುವವರ ನಡುವೆ ಅಧ್ಯಕ್ಷ ಪಟ್ಟಕ್ಕೆ ತೀವ್ರ ಪೈಪೋಟಿ ಇದೆ. ಇದರಲ್ಲಿ ಹೆಚ್ಚಿನ ಸದಸ್ಯರ ಒಲವು 8 ನೇ ವಾರ್ಡ್ ನ ಸದಸ್ಯರಾದ ಲಲೀತವ್ವ ಯಡಿಯಾಪುರ ಅವರ ಪರ ಇದೆ ಎನ್ನಲಾಗಿದ್ದು ಬಹುತೇಕ ಅಧ್ಯಕ್ಷ ಪಟ್ಟಕ್ಕೆ ಲಲೀತಮ್ಮ ನವರಿಗೆ ಒಳಿಯಲಿದೆ ಎಂದು ಹೇಳಲಾಗುತ್ತಿದೆ.
ಶಾಸಕರು, ಹಿರಿಯರ ತೀರ್ಮಾನವೇ ಅಂತಿಮ : ಸಂಗಮೇಶ್ ಗುತ್ತಿ.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ತಾಲೂಕು ಕಾಂಗ್ರೆಸ್ ವಕ್ತಾರ ಸಂಗಮೇಶ್ ಗುತ್ತಿ, ಶಾಸಕರಾದ ಬಸವರಾಜ್ ರಾಯರಡ್ಡಿ ಸಾಹೇಬರು, ಮತ್ತು ಹಿರಿಯರ ತೀರ್ಮಾನಕ್ಕೆ ಎಲ್ಲಾ ಪಟ್ಟಣ ಪಂಚಾಯತ್ ಸದಸ್ಯರು ಬದ್ಧರಾಗಿದ್ದು ಶಾಸಕರು, ಹಿರಿಯರ ತೀರ್ಮಾನವೇ ಅಂತಿಮ, ಅವರ ಅಣತಿ, ಮಾರ್ಗದರ್ಶನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಪ್ರಜಾವೀಕ್ಷಣೆ ಸುದ್ದಿ ಜಾಲಕ್ಕೆ ತಿಳಿಸಿದರು.
– ಪ್ರಜಾವೀಕ್ಷಣೆ ಸುದ್ದಿ ಜಾಲ.