BIG NEWS: ಕುಕನೂರು ಪ.ಪಂಗೆ ಮೀಸಲಾತಿ ಪ್ರಕಟ : ಆಕಾಂಕ್ಷಿಗಳಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ.!

You are currently viewing BIG NEWS: ಕುಕನೂರು ಪ.ಪಂಗೆ ಮೀಸಲಾತಿ ಪ್ರಕಟ : ಆಕಾಂಕ್ಷಿಗಳಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ.!

PV ನ್ಯೂಸ್ ಡೆಸ್ಕ್ -ಕುಕನೂರು : ಸುಮಾರು ಎರಡು ವರ್ಷಗಳ ವನವಾಸದ ನಂತರ ಚುನಾಯಿತ ಪಟ್ಟಣ ಪಂಚಾಯತ್ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಣೆ ಮಾಡುವ ಮೂಲಕ ಅದಿಕಾರದ ಅವಕಾಶ ಮಾಡಿಕೊಡುತ್ತಿದೆ.

ರಾಜ್ಯದ 117 ಪಟ್ಟಣ ಪಂಚಾಯತ್ ಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಇಂದು ಮೀಸಲಾತಿ ಪ್ರಕಟಿಸಿದ್ದು ಅದರಂತೆ ಕುಕನೂರು ಪಟ್ಟಣ ಪಂಚಾಯತ್ ಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿ ಡಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಒಲಿದಿದೆ.

ಸುಮಾರು ಎರಡು ವರ್ಷದ ನಂತರ ಪಟ್ಟಣ ಪಂಚಾಯತ್ ಜನಪ್ರತಿನಿದಿಗಳ ಆಡಳಿತಕ್ಕೆ ಅವಕಾಶ ಕೂಡಿ ಬಂದಿದೆ.

ಇದುವರೆಗೂ ತಾಲೂಕು ದಂಡಾಧಿಕಾರಿ ಮೇಲಧಿಕಾರದಲ್ಲಿ ಆಡಳಿತ ನಡೆಯುತ್ತಿತ್ತು. ಇನ್ನುಮುಂದೆ ಜನಪ್ರತಿನಿದಿಗಳ ಆಡಳಿತಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಇದರಿಂದಾಗಿ ಅಧ್ಯಕ್ಷ, ಉಪಾಧ್ಯಕ್ಷ ಆಕಾಂಕ್ಷಿಗಳಲ್ಲಿ ರಾಜಕೀಯ ಗರಿಗೆದರಿದೆ.

ಪ್ರಜವೀಕ್ಷಣೆ ಸುದ್ದಿ ಜಾಲ:-

Leave a Reply

error: Content is protected !!