ಕನಕಗಿರಿ, ಆನೆಗೊಂದಿ ಉತ್ಸವದಂತೆ ಐತಿಹಾಸಿಕ ಸ್ಥಳ ಇಟಗಿ ಉತ್ಸವ ಆಚರಣೆಗೆ ಹೆಚ್ಚಿದ ಕೂಗು.

ಕನಕಗಿರಿ, ಆನೆಗೊಂದಿ ಉತ್ಸವದಂತೆ ಐತಿಹಾಸಿಕ ಸ್ಥಳ ಇಟಗಿ ಉತ್ಸವ ಆಚರಣೆಗೆ ಹೆಚ್ಚಿದ ಕೂಗು.


ಕೊಪ್ಪಳ : ಕೊಪ್ಪಳ ಜಿಲ್ಲೆಯ ಇತಿಹಾಸ ಪ್ರಸಿದ್ದ, ದೇವಾಲಯಗಳ ಚಕ್ರವರ್ತಿ ಎಂದು ಹೆಸರು ಪಡೆದಿರುವ ಇಟಗಿ ಮಹೇಶ್ವರ ದೇವಾಲಯ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ.

ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿಯ ಇಟಗಿ ಮಹೇಶ್ವರ ದೇವಸ್ಥಾನ ಭಾರತೀಯ ಇತಿಹಾಸ ಚರಿತ್ರೆಯಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ.


ಆದರೆ ಇಟಗಿಯ ಈ ವೈಭವವನ್ನು ಸಾರಲು ಸರ್ಕಾರವು ಪ್ರತೀ ವರ್ಷ ಇಟಗಿ ಉತ್ಸವವನ್ನು ತನ್ನದೇ ಉಸ್ತುವಾರಿಯಲ್ಲಿ ಆಚರಣೆಗೆ ಮುಂದಾಗಬೇಕು ಎಂಬ ಕೂಗು ಈಗ ಜಿಲ್ಲೆಯದ್ಯಾoತ ಕೇಳಿ ಬರುತ್ತಿದೆ.

ಈ ಕುರಿತಂತೆ ಇಟಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭುರಾಜ್ ಹಳ್ಳಿ ಮಾತನಾಡಿ, ಸರ್ಕಾರ, ಜನಪ್ರತಿನಿದಿನಗಳು ಸರ್ಕಾರದ ವತಿಯಿಂದ ಇಟಗಿ ಉತ್ಸವ ಆಚರಣೆ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿ ಶಿವರಾಜ್ ತಂಗಡಗಿ ಅವರು ಕನಕಗಿರಿ ಉತ್ಸವ ಅದ್ದೂರಿ ಆಚರಣೆ ಮಾಡಿದ್ದಾರೆ, ಜೊತೆಗೆ ಪಕ್ಕದ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವ ವೂ ಕೂಡಾ ಮಾಡುತ್ತಿದ್ದಾರೆ. ಆದರೆ ಇತಿಹಾಸ ಪ್ರಸಿದ್ಧ ಇಟಗಿ ಉತ್ಸವ ಮಾಡಲು ಅಧಿಕಾರಿಗಳು, ಜನಪ್ರತಿನಿದಿಗಳು ಆಸಕ್ತಿ ತೋರಬೇಕು ಎಂದು ಪ್ರಭುರಾಜ್ ಹಳ್ಳಿ, ಮತ್ತು ಸಾರ್ವಜನಿಕರು ಅಗ್ರಹಿಸಿದ್ದಾರೆ.

Leave a Reply

error: Content is protected !!