You are currently viewing ಮುದಗಲ್ಲ: ಪಟ್ಟಣದ ಪ್ರವೇಶ ದ್ವಾರದಲ್ಲಿರುವ ಸ್ವಾಗತ ನಾಮ ಫಲಕದ ದುರಸ್ತಿ ,ಪುರಸಭೆ ಎಂದು ಬದಲಾವಣೆ ಮಾಡಲು ಕರವೇ ಅಧ್ಯಕ್ಷ ಎಸ್ ಎ.ನಹಿಂ ಆಗ್ರಹ..

ಮುದಗಲ್ಲ: ಪಟ್ಟಣದ ಪ್ರವೇಶ ದ್ವಾರದಲ್ಲಿರುವ ಸ್ವಾಗತ ನಾಮ ಫಲಕದ ದುರಸ್ತಿ ,ಪುರಸಭೆ ಎಂದು ಬದಲಾವಣೆ ಮಾಡಲು ಕರವೇ ಅಧ್ಯಕ್ಷ ಎಸ್ ಎ.ನಹಿಂ ಆಗ್ರಹ..

ಮುದಗಲ್ ಪಟ್ಟಣದ ಪ್ರವೇಶ ದ್ವಾರದಲ್ಲಿರುವ ಸ್ವಾಗತ ನಾಮ ಫಲಕದ ದುರಸ್ತಿ ,ಪುರಸಭೆ ಎಂದು ಬದಲಾವಣೆ ಮಾಡಲು ಕರವೇ ಅಧ್ಯಕ್ಷ ಎಸ್ ಎ.ನಹಿಂ ಆಗ್ರಹ..

ಮುದಗಲ್ ಪಟ್ಟಣದ ಪ್ರವೇಶ ದ್ವಾರದಲ್ಲಿರುವ ಸ್ವಾಗತ ನಾಮಫಲಕದ ದುರಸ್ತಿ ಹಾಗೂ ಬದಲಾವಣೆಗೆ ಸಂಬಂಧಿ ಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನಾ ಪದಾಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಪುರಸಭೆ ಕಾರ್ಯಾಲಯಾಗಿ ಹತ್ತು ವರ್ಷ ಆದರೂ ಇನ್ನೂ ನಾಮಫಲಕ ದಲ್ಲಿ ಪಟ್ಟಣ ಪಂಚಾಯಿತಿ ಇದ್ದು ಬದಲಾವಣೆ ಮಾಡುವ ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿತನ ವಹಿಸಿದ್ದಾರೆ.

ಮಾಸಿದ ನಾಮಫಲಕ ಪಟ್ಟಣಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯ ಸ್ವಾಗತ ನಾಮಫಲಕವು ಹಲವು ದಿನಗಳಿಂದ ಹಾಳಾಗಿದ್ದು, ಅಕ್ಷರಗಳು ಸ್ಪಷ್ಟವಾಗಿ ಕಾಣಿಸದಿರುವುದು ಕರವೇ ಪದಾಧಿಕಾರಿಗಳು ಗಮನಿಸಿತ್ತು.

​ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ: ಹಲವು ಬಾರಿ ಕರವೇ ಪದಾಧಿಕಾರಿಗಳು ಮನವಿ ಸಲ್ಲಿಸಿದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕೆ ಆಕ್ರೋಶಗೊಂಡ ಕರವೇ ಪದಾಧಿಕಾರಿಗಳು, ನೇರವಾಗಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕೊಟ್ಟಿರುವ ಗಡುವಿನೊಳಗೆ ಸ್ವಾಗತ ನಾಮಫಲಕವನ್ನು ಪುರಸಭೆಯಿಂದ ಬದಲಾಯಿಸಿ ಹೊಸದಾಗಿ ಅಳವಡಿಸದಿದ್ದರೆ, ಪುರಸಭೆ ಕಚೇರಿ ಎದುರು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನಾ ಅಧ್ಯಕ್ಷರು ಎಸ್ ಎ ನಯೀಮ್ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕ ಅಧ್ಯಕ್ಷ ನಾಗರಾಜ್ ನಾಯಕ, ಜಮಾಲಿ ಸಾಬ್, ಇರ್ಫಾನ್ ಸೇರಿದಂತೆ ಮುಂತಾದವರು ಇದ್ದರು.

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!