ಮುದಗಲ್ಲ ವರದಿ..
ಪಿ.ಎಸ್.ಐ ವೆಂಕಟೇಶ ಮಾಡಗೇರಿ ನೇತೃತ್ವದಲ್ಲಿ ಪೊಲೀಸರೊಂದಿಗೆ ಐತಿಹಾಸಿಕ ಮುದಗಲ್ಲ ನಲ್ಲಿ ರೂಟ್ ಮಾಚ್೯..
ಮುದಗಲ್ಲ :- ಸೆ.14 ರಂದು ಗಣೇಶನ ಪ್ರತಿಷ್ಠಾಪನೆಯ ಅಂಗವಾಗಿ ಪಿ.ಎಸ್.ಐ ವೆಂಕಟೇಶ ಮಾಡಗೇರಿ ಅವರ ನೇತೃತ್ವದಲ್ಲಿ ಕ್ರೈಮ್ ಪಿಎಸ್ ಐ ವೆಂಕಟಪ್ಪ ನಾಯಕ್ ಅವರ ಸಮ್ಮುಖದಲ್ಲಿ ಸೆ.13 ರವಿವಾರ ಸಾಯಂಕಾಲ ಮುದಗಲ್ಲ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸಿದರು.
ಇಡೀ ರಾಜ್ಯದಲ್ಲೇ ಶಾಂತಿ-ಸೌಹಾರ್ದತೆಗೆ ಹೆಸುರು ವಾಸಿಯಾದ ಪ್ರಮುಖ ಪಟ್ಟಣ ಮುದಗಲ್ಲನಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ
ಶಾಂತಿ-ಸುವ್ಯವಸ್ಥೆ ಕಾಪಾಡಲು ರೂಟ್ ಮಾರ್ಚ್ ನಡೆಸಿ, ಸಾರ್ವಜನಿಕರಿಗೆ ಸಂದೇಶದ ಜೊತೆಗೆ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಗಣೇಶ ಪ್ರತಿಷ್ಠಾಪನೆ ಮಾಡುವ ಪದಾಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಪೊಲೀಸ ರಿಗೆ ಸಹಕರಿಸಲು ಮನವಿ ಮಾಡಿ, ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದರು
ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿ ಗಳಾದ ಅಮರೇಶ್, ಅನಿಲ್ ಕುಮಾರ , ಹನುಮಂತ , ರಾಮಪ್ಪ, ಜಗದೀಶ್ ,ರುದ್ರಗೌಡ.ಮಂಜುನಾಥ್,ಹಾಗೂ ಮಹಿಳಾ ಸಿಬ್ಬಂದಿಗಳು ಗೃಹರಕ್ಷಕ ದಳ ಸಿಬ್ಬಂದಿ ಉಪಸ್ಥಿತರಿದ್ದರು
ವರದಿ :-ಮಂಜುನಾಥ ಕುಂಬಾರ