ಮುದಗಲ್ಲ ವರದಿ..
“ಪ್ರಜಾ ವೀಕ್ಷಣೆ” ಡಿಜಿಟಲ್ ಸುದ್ದಿ ವಾಹಿನಿ ವರದಿಗೆ ಫಲಶೃತಿ:- ರಾಜ್ಯ ಹೆದ್ದಾರಿ ನುಂಗಿದ ಗುಂಡಿಗಳಿಗೆ ಜಲ್ಲಿಕಲ್ಲು ಸಿಮೆಂಟ್ ಮಣ್ಣು ಹಾಕಿ ಮುಚ್ಚುತ್ತಿರುವುದು.
ಮುದಗಲ್ಲನಲ್ಲಿ ಹದಗೆಟ್ಟ ರಸ್ತೆ: ರಾಜ್ಯ ಹೆದ್ದಾರಿ ನುಂಗಿದ ಗುಂಡಿಗಳು ವರದಿಯ ಹಿನ್ನಲೆಯಲ್ಲಿ ತಾತ್ಕಾಲಿಕ ಸಮಸ್ಯೆಗೆ ಪುರಸಭೆ ವತಿಯಿಂದ ಪರಿಹಾರ ಸಿಕ್ಕಿದೆ.
ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ ವಾಹಿನಿ ವರದಿಯಿಂದಾಗಿ ಪುರಸಭೆ ಮುಖ್ಯಾಧಿಕಾರಿ ಸೂಚನೆ ಮೇರೆಗೆ ಯ ಕಂದಾಯ ವಿಭಾಗದ ಅಧಿಕಾರಿಯಾದ ಅಂತೋಣಿ ರಾಜ ಅವರು ಹಾಗೂ ಪೌರ ಕಾರ್ಮಿಕರು ಜೋತೆಗೆ ರಾಜ್ಯ ಹೆದ್ದಾರಿ ಗುಂಡಿಗಳುನ್ನು ಜಲ್ಲಿಕಲ್ಲು ಸಿಮೆಂಟ್ ಮಣ್ಣು ಹಾಕಿ ಮುಚ್ಚಿಹಾಕಲು ಕೆಲಸ ನಡೆಯಿತು ಸಮಸ್ಯೆ ಬಗೆಹರಿಸಲು ಕಾರಣೀಕರ್ತರಾದ ಸಮಸ್ಯೆ ಅರಿತ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಗೆ ಪ್ರವೀಣ್ ಕುಮಾರ್ ವರದಿ ಮಾಡಿದ ವರದಿಗಾರಾದ ಮಂಜುನಾಥ ಕುಂಬಾರ ಅವರಿಗೆ ಕೃಷ್ಣ ಛಲವಾದಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಸೇಲ್ ಮುದಗಲ್ ಸಮಿತಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ಹುಲೇಶ, ಶರಣಪ್ಪ ,ಸಂಗಪ್ಪ, ಬಸವರಾಜ, ಹಟ್ಟಿ ರಮೇಶ ,ಆದಿ ಬಸವ ,ದುರಗಪ್ಪ,ಇತರರು ಉಪಸ್ಥಿತರಿದ್ದರು.
