LOCAL NEWS : ಮುದಗಲ್ಲ ಪುರಸಭೆ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ..!!

You are currently viewing LOCAL NEWS : ಮುದಗಲ್ಲ ಪುರಸಭೆ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ..!!

LOCAL NEWS : ಮುದಗಲ್ಲ ಪುರಸಭೆ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ..!!

ಸ್ಥಳೀಯ ಪುರಸಭೆ ವತಿಯಿಂದ ನಾಡಪ್ರಭು ಕೆಂಪೇ ಗೌಡ 516ನೇ ಜಯಂತಿಆಚರಣೆ ಮಾಡಿದರು

ನಾಡಪ್ರಭು ಕೆಂಪೇ ಗೌಡ ಅವರ ಭಾವಚಿತ್ರ ಕ್ಕೆ ಸಿಬ್ಬಂದಿ ಚನ್ನಮ್ಮ ಅವರು ಪೂಜೆ ಸಲ್ಲಿಸಿದರು

 ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಪ್ರಮೀಣ್ ಭೋಗರ್ ಅವರು ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಂಪೇ ಗೌಡರವರು 14ನೇ ಶತಮಾನದಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.

ಅವರ ದೂರ ದೃಷ್ಠಿಯ ಕಲ್ಪಣೆಗಳು ಮಹತ್ವವಾಗಿದ್ದು 21ನೇ ಶತಮಾನದಲ್ಲಿಯೂ ನೆನಪಿಸಿಕೊಳ್ಳಲಾಗುತ್ತಿದೆ. ಸುಂದರ ನಗರ ನಿರ್ಮಾಣ, ವ್ಯಾವಹಾರಿಕ ಕೇಂದ್ರಗಳ ನಿರ್ಮಾಣ, ವಿವಿಧ ಕಸುಬುಗಳಿಗೆ ಪೂರಕವಾಗಿ ಮಾರುಕಟ್ಟೆ ನಿರ್ಮಾಣ, ಕೃಷಿಕರಿಗೆ ಆವಶ್ಯಕವಾದ ಸೌಲಭ್ಯಗಳು, ಕೆರೆ ಉದ್ಯಾನವನ, ದೇವಸ್ಥಾನಗಳ ನಿರ್ಮಾಣ ಸುಮದರವಾಗಿ ನಿರ್ಮಿಸಿಕೊಟ್ಟು ಬೆಂಗಳೂರನ್ನು ವಿಶ್ವಕ್ಕೇ ಮಾದರಿ ನಗರವಾಗಿ ನಿರ್ಮಿಸಿಕೊಟ್ಟಿದ್ದರು. ಎಂದು ಹೇಳಿದರು

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಪ್ರಮೀಣ್ ಬೋಗರ್  ,ಪುರಸಭೆ ಸದಸ್ಯರಾದ ಬಾಬು ಉಪ್ಪಾರ, ಮುಖಂಡ ರಾದ ನಾಗರಾಜ್ ತಳವಾರ, ಹುಸೇನ್ ಅಲಿ, ಮ್ಯಾನೇಜರ್ ಸುರೇಶ , ಹಾಗೂ ಸಿಬ್ಬಂದಿ ಗಳಾದ ನಿಸಾರ್ ಅಹಮದ್, ಜಿಲಾನಿ ಪಾಶ , ಸಂಪತ್ತು ಕುಮಾರ್, ಇತರರು ಉಪಸ್ಥಿತರಿದ್ದರು.

ಮುದಗಲ್ಲ ವರದಿ :- ಮಂಜುನಾಥ ಕುಂಬಾರ

Leave a Reply

error: Content is protected !!