ಕುಕನೂರು: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಸಚಿವ ಹಾಲಪ್ಪ ಆಚಾರ್ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಪಕ್ಷದ ಸಂಘಟನಾತ್ಮಕ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಹಿರೇವಂಕಲಕುಂಟಾ, ಚಿಕ್ಕಾಮ್ಯಾಗೇರಿ ಹಾಗೂ ಹಿರೇಅರಹಳ್ಳಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ಕಾರ್ಯಕರ್ತರು ಸಚಿವ ಹಾಲಪ್ಪ ಆಚಾರ್ ನೇತೃತ್ವದಲ್ಲಿ ಪಕ್ಷ ಸೇರಿದರು. ಪಕ್ಷದ ಶಾಲು ಹಾಕುವ ಮೂಲಕ ಸಚಿವರು ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈರಣ್ಣ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು,ನಂತರ ವಕೀಲರಾದ ಶಂಕ್ರಪ್ಪ ಸುರಪುರ ಮಾತನಾಡಿ ಹಾಲಪ್ಪ ಆಚಾರ್ ಅಂತಹ ಸರಳ ಸಜ್ಜನಿಕೆ ವ್ಯಕ್ತಿ ಕ್ಷೇತ್ರದಲ್ಲಿ ಮೊತ್ತೊಬ್ಬರಿಲ್ಲ ಹೀಗಾಗಿ 2023ರ ಚುನಾವಣೆಯಲ್ಲಿ ಹಾಲಪ್ಪ ಆಚಾರನ್ನು ಬೆಂಬಲಿಸೋಣ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನೆಡೆಸಿ ಕಾಂಗ್ರೆಸ್ ದೇಶ ವಿರೋದಿಯಾಗಿದೆ. ಈ ಹಿಂದೆ ದೇಶ ಗಡಿ ಕಾಯುವ ಸೈನಿಕರಿಗೆ ಗುಂಡು ಹಾರಿಸುವ ಶಕ್ತಿಯನ್ನು ನೀಡದೆ ವಿದೇಶಿಗರು ದಾಳಿ ಮಾಡಿದಾಗ ಸೈನಿಕರು ಪ್ರತಿದಾಳಿ ಮಾಡಲು ಇವರ ಅನುಮತಿಗಾಗಿ ಕಾಯಬೇಕಿತ್ತು. ಆದರೆ ಮೋದಿ ಸರ್ಕಾರ ಬಂದ ಮೇಲೆ ಸೈನಿಕರಿಗೆ ಪೂರ್ಣ ಅಧಿಕಾರ ನೀಡಿದ್ದು, ವಿದೇಶಿಗರ ದಾಳಿ ಕಡಿಮೆಯಾಗಿ ದೇಶ ಇಂದು ದೇಶ ಸದೃಢವಾಗಿದೆ. ಹಿಂದೆ ನಾನು ಕೊಪ್ಪಳ ಏತ ನೀರಾವರಿ ಗೆ ಭೂಮಿ ಪೂಜೆ ಮಾಡಿದಾಗ ಇದು ಅಡಿಗಲ್ಲು ಅಲ್ಲ ಅಡ್ಡಗಲ್ಲು ಎಂದು ಮಾಜಿ ಸಚಿವ ರಾಯರೆಡ್ಡಿ ಹೇಳಿದ್ದರು, ಆದರೆ ಅದನ್ನು ಮಾಡಿ ತೋರಿಸಿದ್ದೇನೆ.
ಬೊಮ್ಮಾಯಿ ಸರ್ಕಾರ ರೈತನಿಧಿ,ಮಹಿಳೆಯರಿಗೆ ವಿಶೇಷ ಸ್ಥಾನ ಮಾನ ಹಾಗೂ ಹೆಚ್ಚು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿ ಪಕ್ಷ ಇದು ಸಾಮಾನ್ಯ ಕಾರ್ಯಕರ್ತರ ಪಕ್ಷ ಇಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳಿವೆ ಎಂದರು.
ಈ ಸಂದರ್ಭದಲ್ಲಿ ಯಲಬುರ್ಗಾ ಮಂಡಲ ಭಾಜಪ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ,ಸಿ.ಎಚ್. ಪೊಲೀಸ್ ಪಾಟೀಲ, ಕಳಕಪ್ಪ ಕಂಬಳಿ, ರತನ್ ದೇಸಾಯಿ, ಈರಪ್ಪ ಬಿಸನಳ್ಳಿ, ಬಸನಗೌಡ ತೊಂಡಿಹಾಳ, ಅಯ್ಯಪ್ಪ, ಯಡ್ಡೋಣ, ಶಂಭು ಜೋಳದ, ಶಿವಕುಮಾರ ನಾಗಲಾಪುರ ಮಠ, ಕರಬಸಯ್ಯ ಬಿನ್ನಾಳ, ಗಾಳೆಪ್ಪ,ಪಕೀರಪ್ಪ, ಮರಿಯಪ್ಪ,ಮಂಜುನಾಥ ನಾದಗೌಡರ,ಸಿದ್ದು ಉಳ್ಳಾಗಡ್ಡಿ ಹಾಗೂ ಇತರರಿದ್ದರು.
ಬಿಜೆಪಿ ಸೇರ್ಪಡೆಗೊಂಡ 500ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು
