ಬೆಂಗಳೂರು : ಕಳೆದ 20 ದಿನಗಳ ಒಳಗೆ ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿತ್ತು. ಆದರೆ, ಈಗ ವರುಣನ ಕಾಟ ಕ್ರಮೇಣವಾಗಿ ಕಡಿಮೆಯಾಗಿದ್ದು, ರಾಜ್ಯದ ಕರಾವಳಿ ಭಾಗ ಸೇರಿದಂತೆ ಒಳನಾಡಿನಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ(ಜುಲೈ 31 ರಿಂದ) ಆಗಸ್ಟ್ 6ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.
ಈ ಮಧ್ಯ ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆಯವರೆಗೆ ನೈರುತ್ಯ ಮುಂಗಾರು ರಾಜ್ಯಾದ್ಯಂತ ದುರ್ಬಲ ಪ್ರಮಾಣದಲ್ಲಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ತುಂತುರು ಮಳೆಯಾಗಿದೆ.
*ರಾಜ್ಯದಲ್ಲಿ ಜಿಲ್ಲಾವಾರು ( ಪ್ರಮುಖ ನಗರ) ಹವಾಮಾನ ಹೀಗಿದೆ.*
ಬೆಂಗಳೂರು:- 28-20
ಮಂಗಳೂರು:- 28-24
ಶಿವಮೊಗ್ಗ:- 26-21
ಬೆಳಗಾವಿ:- 24-21
ಮೈಸೂರು:- 29-21
ಮಂಡ್ಯ:- 31-21
ಮಡಿಕೇರಿ:- 21-17
ರಾಮನಗರ:- 31-21
ಹಾಸನ:- 25-19
ಚಾಮರಾಜನಗರ:- 31-21
ಚಿಕ್ಕಬಳ್ಳಾಪುರ:- 28-20
ಕೋಲಾರ:- 31-21
ತುಮಕೂರು:- 29-21
ಉಡುಪಿ:- 28-24
ಕಾರವಾರ:- 27-25
ಚಿಕ್ಕಮಗಳೂರು:- 24-18
ದಾವಣಗೆರೆ:- 28-22
ಹುಬ್ಬಳ್ಳಿ:- 26-21
ಚಿತ್ರದುರ್ಗ:- 27-21
ಹಾವೇರಿ:- 27-22
ಬಳ್ಳಾರಿ:- 31-23
ಗದಗ:- 27-22
ಕೊಪ್ಪಳ:- 29-23
ರಾಯಚೂರು:- 31-24
ಯಾದಗಿರಿ:- 30-24
ವಿಜಯಪುರ:- 34-26
ಬೀದರ್:- 28-22
ಕಲಬುರಗಿ:- 29-23
ಬಾಗಲಕೋಟೆ:- 29-23
ವರದಿ : ಚಂದ್ರು ಆರ್ ಭಾನಾಪೂರ್
(ವಿವಿಧ ಮೂಳಗಳಿಂದ ವಿಷಯ ಸಂಗ್ರಹ)
ಸದ್ಯದಲ್ಲೇ ನಿರೀಕ್ಷಿಸಿ ನಿಮ್ಮ ಮುಂದೆ ಇನ್ನಷ್ಟು ವಿಚಾರಗಳೊಂದಿಗೆ ಬರಲಿದ್ದೇವೆ ನಮ್ಮ ವೆಬ್‌ಸೈಟ್ ಅನ್ನು ಸಬ್‌ಸ್ಕ್ರೈಬ್ ಮಾಡಿ, ಬೆಲ್ ಒತ್ತಿ ನಮ್ಮ ಪ್ರತಿ ಸುದ್ದಿಯೂ ಕೂಡಲೇ ನಿಮ್ಮ ಮೊಬೈಲ್‌ಗೆ ಬರಲಿದೆ. ಅದೇ ರೀತಿ ಈ ಕಳೆಗೆ ಇರುವ ಯೂಟೂಬ್ ಚಾನಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ…