ಯಲಬುರ್ಗಾ ವಿಧಾನಸಭಾ ಕ್ಷೇತ್ರ-63 ವ್ಯಾಪ್ತಿಯ ಕುಕನೂರು ಪಟ್ಟಣದಲ್ಲಿ ಮೇ-10 ರಂದು ಜರುಗುವ ಚುನಾವಣೆಯಲ್ಲಿ
ಶಾಂತಿ ಸುವ್ಯವಸ್ಥೆಗಾಗಿ ಪಥಸಂಚಲನ
ಕುಕನೂರು : ಇಂದು ಪಟ್ಟಣದಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪಡೆ ಮತ್ತು ಪೊಲೀಸ್ ಪಡೆಗಳಿಂದ ಮೇ 10ನೇ ತಾರೀಕಿನಂದು ಜರುಗುವ ಸಾರ್ವತ್ರಿಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇಂಡೋ ಟಿಬೆಟ್ ಮಿಲಿಟರಿ ಪಡೆ ಮತ್ತು ಕುಕನೂರು, ಯಲಬುರ್ಗಾ ಹಾಗೂ ಬೇವೂರ ಪೋಲೀಸ್ ಪಡೆಗಳಿಂದ ಪಟ್ಟಣದ ಪ್ರಮುಖ ರಾಜಭೀದಿಗಳು ಹಾಗೂ ವೃತ್ತಗಳಲ್ಲಿ ಪಥ ಸಂಚಲನವನ್ನು ಆಯೋಜಿಸಲಾಗಿತ್ತು.
ದೇಶದ ಗಡಿ ರೇಖೆ ನಿಯಂತ್ರಣದಲ್ಲಿ ಕಾವಲು ಕಾಯುವ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್(ITBPF) ಪಡೆಯ ವಿವಿಧ ಹುದ್ದೆಯ ಸಿಬ್ಬಂದಿಗಳು ಶಸ್ತ್ರ ಸಹಿತವಾಗಿ ಪಟ್ಟಣದಲ್ಲಿ ಪಥ ಸಂಚಲನವನ್ನು ನೆರವೇರಿಸಿದರು.
ಪಟ್ಟಣದ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಯಲಬುರ್ಗಾ ವಿಧಾನಸಭಾ-63 ಕ್ಷೇತ್ರದ ಚುನಾವಣಾಧಿಕಾರಿ ಕಾವ್ಯ ರಾಣಿ ಕೆ.ವಿ ಅವರು ಹಸಿರು ನಿಶಾನೆ* ತೋರಿಸುವುದರೊಂದಿಗೆ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಪಥ ಸಂಚಲನ ಕಾರ್ಯಕ್ರಮವು ವಾಲ್ಮೀಕಿ ವೃತ್ತ, ಕೋಳಿಪೇಟೆ, ಮಹಾಮಾಯೇ ತೇರಿನ ಗಡ್ಡಿ, ಹಳೆ ಬಜಾರ, ಶಿರೂರು ವೀರಭದ್ರಪ್ಪ ವೃತ್ತ, ಯಲಬುರ್ಗಾ ರಸ್ತೆ ಮುಖಾಂತರ ಪೊಲೀಸ್ ಠಾಣೆಗೆ ಸಂಚರಿಸಿದ ಪದ ಸಂಚಲನವು ಸಮಾರೋಪಗೊಂಡಿತು.
ಈ ವೇಳೆ ಸಾರ್ವಜನಿಕರು ಪಥ ಸಂಚಲನದ ಹಾದಿಯಲ್ಲಿ ಹೂಗಳನ್ನು ಹಾಕಿ ದೇಶ ಕಾಯುವ ಯೋಧರಿಗೆ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಕುಕನೂರು ತಾಲೂಕ ತಹಸಿಲ್ದಾರರಾದ ನೀಲಪ್ರಭಾ ಬಬಲದ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಪ್ರಕಾಶ್ ಬಾಗಳಿ, ಯಲಬುರ್ಗಾ ವೃತ್ತ ಪೊಲೀಸ್ ನಿರೀಕ್ಷಕ ವೀರಾರೆಡ್ಡಿ,ಯಲಬುರ್ಗಾ ಪೊಲೀಸ್ ಠಾಣಾ ನಿರೀಕ್ಷಕ ಹುಲಿಗೇಶ, ಕುಕನೂರು ಪೊಲೀಸ್ ಠಾಣಾ ನಿರೀಕ್ಷಕರ ಡಾಕೇಶ್.ಯು, ಬೇವೂರ್ ಪೊಲೀಸ್ ಠಾಣಾ ನಿರೀಕ್ಷಕರಾದ ಶೀಲಾ ಮೂಗಪ್ಪನವರ್, ಹಾಗೂ ಪೊಲೀಸ್ ಮತ್ತು ಭದ್ರತಾ ಪಡೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಹಾಗೂ ಐ.ಇ.ಸಿಸಂಯೋಜಕರು ಪಾಲ್ಗೋಂಡಿದ್ದರು.