ಪ್ರಜಾ ವೀಕ್ಷಣೆ ಸುದ್ದಿ:-
LOCAL NEWS : ಅನುದಾನ ಹೆಚ್ಚಿಸಿ, ಹಿಂದಿನ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಿ : ಸುರೇಶ್ ಬಳೂಟಗಿ
ಕುಕನೂರು : ‘ರಾಜ್ಯ ಸರಕಾರ ಇತ್ತೀಚೆಗಷ್ಟೇ ಒಳ ಮೀಸಲಾತಿ ಹಂಚಿಕೆ ಮಾಡಿದ್ದು, ನ್ಯಾಯೋಚಿತವಾಗಿಲ್ಲ. ಹಾಗಾಗಿ ಮೀಸಲಾತಿ ಪರಿಷ್ಕೃರಿಸುವ ಬದಲಿಗೆ ಈ ಹಿಂದಿನ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು’ ಎಂದು ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ ಆಗ್ರಹಿಸಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸರಕಾರ ಹಂಚಿಕೆ ಮಾಡಿದ ಒಳಮೀಸಲಾತಿಯಿಂದ ಈ ನಾಡಿನ ಬಂಜಾರಾ, ಭೋವಿ, ಕೊರಮ, ಕೊರಚ ಮತ್ತಿತರೆ ಸಮಾಜಗಳಿಗೆ ತೀವ್ರ ಅನ್ಯಾಯವಾಗಲಿದೆ’ ಎಂದರು.
*ಸಂಪೂರ್ಣ ಅವೈಜ್ಞಾನಿಕ*
‘ಒಳ ಮೀಸಲಾತಿಯೇ ಅಸಂವಿಧಾನಿಕ. ಬಂಜಾರ, ಭೋವಿ, ಕೊರಚ, ಕೊರಮ ಸಮಾಜಗಳಿಗೆ ಶೇಕಡಾ 4.5 ರಷ್ಟು ಮೀಸಲಾತಿ ಹಂಚಿಕೆ ಮಾಡಿರುವ ಸರ್ಕಾರ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದೀಗ ಸರ್ಕಾರ ಪರಿಶಿಷ್ಟ ಜಾತಿಯ ಜಾತಿಗಣತಿಯನ್ನು ಮಾಡುತ್ತಿದ್ದು, ಈ ಜಾತಿಗಣತಿ ನ್ಯಾಯ ಸಮ್ಮತವಾಗಿ ನಡೆಯುತ್ತಿಲ್ಲ’ ಎಂದು ಹೇಳಿದರು.
