LOCAL NEWS : ಶಾಸಕ ರಮೇಶ್ ಬಂಡಿ ಸಿದ್ದೇಗೌಡರ ವಿರುದ್ದ ಎಸ್.ಡಿ.ಪಿ.ಐ. ಪ್ರತಿಭಟನೆ..!!
ಮುದಗಲ್ಲ :- ಅರ್ಜಿ ಸಲ್ಲಿಸಿರುವ ಮುಸ್ಲಿಂರ ಹೆಸರಿಗೆ ಜಮೀನು ಮಂಜೂರು ಮಾಡಿದರೆ ಅಧಿಕಾರಿಯನ್ನು ನೇಣಿಗೇರಿ ಸುತ್ತೇನೆಂಬ ಅಸಾಂವಿಧಾನಿಕ ಮಾತುಗಳನ್ನಾಡಿರುವ ಶಾಸಕ ರಮೇಶ್ ಬಂಡಿ ಸಿದ್ದೇಗೌಡರ ವಿರುದ್ದ ಪ್ರತಿಭಟನೆಯ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಗ್ರಾಮಾಂತರ ಜಿಲ್ಲೆ ಮುದಗಲ್ಲ ವತಿಯಿಂದ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಅಂಬೇಡ್ಕರ್ ವೃತ್ತಿಯಲ್ಲಿ ಮುಂಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರಗಳನ್ನು ಕೂಗಿದರು.
‘ ಮುಸ್ಲಿಂ ಸಮುದಾಯದ ಮತಗಳನ್ನು ಪಡೆದು ಶಾಸಕನಾಗಿದ್ದೇನೆಂಬ ಜ್ಞಾನವಿಲ್ಲದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿ ಸಿದ್ದೇಗೌಡರನ್ನು ಕೂಡಲೆ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ ಡಿಪಿಐ ರಾಯಚೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಾದ ಎಂ ಡಿ ರಫಿ ಖಾಜಿ ಮಾತನಾಡಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 45 ಸಾವಿರ ಮುಸ್ಲಿಂರಿಂದ ಮತಗಳನ್ನು ಪಡೆದು ಶಾಸಕನಾಗಿರುವ ರಮೇಶ್ ಬಂಡಿ ಸಿದ್ದೇಗೌಡನಿಗೆ ನಿಜವಾಗಿಯೂ ಅಲ್ಪಸಂಖ್ಯಾತರ ಮತಗಳು ಬೇಡವಾಗಿದ್ದರೆ ತಾಲ್ಲೂಕು ಕಚೇರಿ ಇಲ್ಲವೇ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಮುಸ್ಲಿಂ ಮತಗಳನ್ನು ತಿರಸ್ಕರಿಸಿ ಎಂದು ಬರೆದು ಕೊಡುವಂತೆ ಸವಾಲು ಹಾಕಿದರು
ಮುಸ್ಲಿಂ ಸಮುದಾಯದ ಮತಗಳನ್ನು ಪಡೆದು ಶಾಸಕನಾಗಿದ್ದೇನೆಂಬ ಜ್ಞಾನವಿಲ್ಲದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿ ಸಿದ್ದೇಗೌಡರನ್ನು ಕೂಡಲೆ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮುಸ್ಲಿಂ ಸಮುದಾಯಕ್ಕೆ ಧಕ್ಕೆಯಾಗುವಂತೆ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಹೇಳಿಕೆ ನೀಡಿದ್ದು, ಮುಸ್ಲಿಂರಲ್ಲಿ ಸ್ವಾಭಿಮಾನವಿದ್ದರೆ ರಾಜ್ಯಾದ್ಯಂತ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿ ತಮ್ಮ ಶಕ್ತಿ ಏನೆಂಬುದನ್ನು ಪಕ್ಷಕ್ಕೆ ತೋರಿಸಬೇಕಿದೆ ಎಂದು ಜಾಗೃತಿಗೊಳಿಸಿದರು.

ಈ ಸಂದರ್ಭದಲ್ಲಿ ಎಂ ಡಿ ರಫಿ ಖಾಜಿ ಜಿಲ್ಲಾಧ್ಯಕ್ಷರು ಎಸ್‌ಡಿಪಿಐ ರಾಯಚೂರು ಗ್ರಾಮಾಂತರ ಜಿಲ್ಲೆ ,ಉಪಾಧ್ಯಕ್ಷರಾದ ಪಾಷಾ ಕಡ್ಡಿಪುಡಿ ಜಿಲ್ಲಾ ಸಮೀತಿ ಸದಸ್ಯರು ಖಾಸಿಂ ಡೊಯಿ, ಅಹ್ಮದ್ ರಜಾ ಖಾಜಿ,ಮುದಗಲ್ ಪುರಸಭಾ ಸಮೀತಿ ಅಧ್ಯಕ್ಷರು ಫಾರುಕ್ ಬೇಗ್,ಉಪಾಧ್ಯಕ್ಷರು, ದಾವುದ್,ಮೂಸಾ ಶೇಖ್, ಮಹಬೂಬ್ ದುಮ್ ದುಮ್, ಜಮಾಲ್ ಸಾಬ್, ಮಹಬೂಬ್ ಬೆಳ್ಳಿಕಟ್, ಜಾವಿದ್, ಸೇರಿ ದಂತೆ ಎಸ್ ಡಿ ಪಿ ಐ ಕಾರ್ಯಕರ್ತರು ಉಪಸ್ಥಿತರಿದ್ದರು.
ಮುದಗಲ್ಲ ವರದಿ:- ಮಂಜುನಾಥ ಕುಂಬಾರ