LOCAL NEWS :ಪ್ರಜಾಪ್ರಭುತ್ವದ ಅರಿವು ಮೂಡಿಸಿದ, ಶಾಲಾ ಸಂಸತ್ ಚುನಾವಣೆ..!
ಕುಕನೂರ : ಕುಕನೂರ ತಾಲ್ಲೂಕಿನ ವಿದ್ಯಾನಂದ ಗುರುಕುಲ ಪ್ರೌಢಶಾಲೆಯಲ್ಲಿ ಶುಕ್ರವಾರ 2025- 26 ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ ಚುನಾವಣೆ ಮಾದರಿ ಪ್ರಕ್ರಿಯೆ ನಡೆಯಿತು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಚುನಾವಣಾ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ನಿಜವಾದ ಸಾರ್ವತ್ರಿಕ ಚುನಾವಣೆಯಂತೆ ಶಾಲಾ ಸಂಸತ್ ಚುನಾವಣೆ ಅದೇ ಮಾದರಿಯಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳು ಮತದಾನ ಮಾಡಲು ಮೊಬೈಲ್ ವೋಟಿಂಗ್ ಎಲೆಕ್ಟ್ರಾನಿಕ್ ಮಷೀನ್ ಇವಿಎಂ ಆಪ್ ನ್ನು ಸಿದ್ದಪಡಿಸಿಲಾಯಿತು. ಮೊಬೈಲ್ ಆಪ್ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ವಿದ್ಯಾರ್ಥಿಗಳು ಮತದಾನ ಮಾಡಿದರು. ಶಾಲಾ ಸಂಸತ್ ಚುನಾವಣೆಗೆ 10 ಜನ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ವಿದ್ಯಾರ್ಥಿಗಳು ಸರತಿ ಸಾಲಿನ ನಿಂತು ಮತದಾನ ಮಾಡಿದರು.
ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಯಾಗಿ ವಿದ್ಯಾರ್ಥಿನಿಯರಾದ ಅನಿತಾ ಹರ್ಲಾಪುರ್, ಭಾಗ್ಯ ಗುಮಗೇರಿ, ಕಾವ್ಯ ಪೂಜಾರಿ, ಅಮರಿನ್ ಬೇಗಂ ಸಹಾಯಕ ಮತಗಟ್ಟೆ ಅಧಿಕಾರಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲ ಸೋಮಶೇಖರ್ ಲಮಾಣಿ ಅವರು ಮಾತಾನಾಡಿ, ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೂಡ ಸಂವಿಧಾನಾತ್ಮಕವಾಗಿ ಚುನಾವಣೆಯ ಕುರಿತು ತಿಳುವಳಿಕೆ ಹೊಂದುವುದು ಅತ್ಯಗತ್ಯವಾಗಿದೆ,ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶಾಲಾ ಸಂಸತ್ ರಚನೆಯ ಪ್ರಕ್ರಿಯೆಗಳನ್ನು ತಿಳಿಸುವುದರಿಂದ ಭವಿಷ್ಯದ ಪ್ರಜೆಗಳಾಗಿ ಹೊರ ಹೊಮ್ಮಿ ಉತ್ತಮ ಪ್ರಜೆಗಳು ಆಗುವಲ್ಲಿ ಇದು ಸಹಕಾರಿ ಎಂದು ತಿಳಿಸಿದರು.
ಮತದಾನ ಸಾಕ್ಷರತಾ ಕ್ಲಬ್ ನ (ಇ ಎಲ್ ಸಿ ) ಸಂಚಾಲಕಿ ಅರುಂಧತಿ ಬಟನೂರ ಅವರು ವಿದ್ಯಾರ್ಥಿ ಗಳಿಗೆ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ಕುರಿತು ತಿಳಿಸಿಕೊಟ್ಟರು.
ಈ ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.
ಪ್ರಧಾನಿ(ಗಜಾನನ ಭಗತ್), ಉಪ ಪ್ರಧಾನಿ (ಆಂಜನೇಯ ಮಿಸಿ), ಸಾಂಸ್ಕೃತಿಕ ಮಂತ್ರಿ (ದಿಗಂತ್ ಬಳ್ಳಾರಿ), ಕ್ರೀಡಾ ಮಂತ್ರಿ( ಹನುಮೇಶ್ ಮೇಸ್ತ್ರಿ), ಆಹಾರ ಮಂತ್ರಿ (ಮಲ್ಲಿಕಾರ್ಜುನ ಮಿಸಿ), ಮಹಿಳಾ ಪ್ರತಿನಿಧಿ (ಸಹನಾ ದೊಡ್ಡಮನಿ), ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ (ನವೀನ್ ಕಟಗಾಲಿ), ಪ್ರವಾಸ ಮಂತ್ರಿ (ಗೀತಾ ಮಾದರ), ಸ್ವಚ್ಛತಾ ಮಂತ್ರಿ (ಈರಣ್ಣ ಆಡೂರ್), ತೋಟಗಾರಿಕೆ ಮಂತ್ರಿ (ಸಾಗರ್ ನೋಟಗಾರ) ಅವರನ್ನು ಆಯ್ಕೆಯಾದರು.
ಈ ಸಂಸತ್ ಚುನಾವಣೆಯಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿಗಳಾದ ಗೀತಾ ಪದಕಿ , ರಾಜು ಪೂಜಾರ, ಶ್ರೀಲತಾ ಕೆ, ಆರ್. ಎಂ. ದೇವರೆಡ್ಡಿ, ಉಮಾ ದೇಸಾಯಿ, ಶಿವಕುಮಾರ್ ಹೆಳವರ್ ಜ್ಯೋತಿ ಮುಂಡರಗಿ, ರಶ್ಮಿ ಹಿರೇಮಠ, ಪೂಜಾ ಜಹಾಗೀರದಾರ್, ಸಂಜು ದೇಸಾಯಿ, ಲಕ್ಷ್ಯವತಿ, ಗಿರಿಧರ್ ನಿಲೋಗಲ್, ಉದಯ ನಿಂಗಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.