ಮುದಗಲ್ಲ :- ಕುಸಿದು ಬೀಳುವ ಹಂತಕ್ಕೆ ಬಸ್ ನಿಲ್ದಾಣದ ಮೇಲ್ಛಾವಣಿ : ಕರವೇ ಅಧ್ಯಕ್ಷ ಎಸ್.ಎ.ನಹಿಂ, ಆಕ್ರೋಶ !

ಮುದಗಲ್ಲ :- ದಿನಂಪ್ರತಿ ನೂರಾರು ಜನರು ಸಂಚರಿಸುವ ಮುದಗಲ್ಲ ಸರ್ಕಾರಿ ಬಸ್ ನಿಲ್ದಾಣದ ಮೇಲ್ಛಾವಣಿ ಕುಸಿದು ಬೀಳುವ ಅತಂಕವಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಹಾಗೂ ಈ ಕುರಿತಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ದೂರು ಸಲ್ಲಿಸಿದರೂ ಗಮನ ನೀಡುತ್ತಿಲ್ಲವೆಂದು ಜನರು ಹಿಡಿ ಶಾಪಹಾಕುತ್ತಿದ್ದಾರೆ

ಮುದಗಲ್ಲ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲ್ದಾಣದ ಮೇಲ್ಚಾವಣಿ ಈಗಲೋ ಆಗಲೋ ಕುಸಿದು ಬೀಳುವಂತಿದೆ. ಈಗಾಗಲೇ ಮೇಲ್ಚಾವಣಿಯ ಒಳಗಿನ ಕೊಳೆತ ಕಾಂಕ್ರಿಟ್ ಬಾರ್‌ಗಳ ದರ್ಶನ ಎಲ್ಲರಿಗೂ ಆಗುತ್ತದೆ. ಪ್ರಯಾಣಿಕರು ಜೀವ ಕೈಯಲ್ಲಿಯೇ ಹಿಡಿದು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.

ಎಲ್ಲೆಂದರಲ್ಲಿ ಹರಡಿದ ಕಸ, ಗೋಡೆಗಳ ತುಂಬ ಗುಟ್ಖಾ ಕಲೆ, ಮೂತ್ರಗೃಹವಾದ ಆವರಣ, ಮರೀಚಿಕೆಯಾದ ಸ್ವಚ್ಛತೆ, ಛೀಮಾರಿ ಹಾಕುತ್ತಲೇ ಮೂಗುಮುಚ್ಚಿಕೊಂಡು ಓಡಾಡುವ ಪ್ರಯಾಣಿಕರು. ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ನಿಲ್ದಾಣದ ಯಾವ ಕಡೆಗೆ ನೋಡಿದರೂ ಗುಟ್ಖಾ ಉಗುಳಿದ ಕಲೆಗಳು ಎದ್ದು ಕಾಣುತ್ತವೆ. ಪ್ರಯಾಣಿಕರು ನಿಲ್ಲಲು, ಕುಳಿತುಕೊಳ್ಳಲು ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಕಂಟ್ರೊಲರ್ ನೋಡುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಆಗಮಿಸುವ ನಿಲ್ದಾಣದಲ್ಲಿ ಸೌಲಭ್ಯಕ್ಕಿಂತ ಅವ್ಯವಸ್ಥೆಯೇ ಗೋಚರವಾಗುತ್ತದೆ. ಒಂದು ಭಾಗದಲ್ಲಿ ಬಸ್ ನಿಲ್ದಾಣಕ್ಕೆ ಸಂಪೂರ್ಣ ಕಾಂಪೌಂಡ್ ನಿರ್ಮಿಸಿರುವುದರಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಕಸ ಹಾಕುವುದು ಸಾಮಾನ್ಯವಾಗಿದೆ. ಮಲ, ಮೂತ್ರ ವಿಸರ್ಜನೆಗೆ ಶೌಚಗೃಹ ಇದ್ದರೂ, ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಮಹಿಳೆ ಯರನ್ನು ಮುಜುಗರಕ್ಕೆ ಸಿಲುಕಿಸಿದೆ
ಯಾವ ಬಸ್‌ಗಳೂ ನಿಗದಿತ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಬಸ್‌ಗಾಗಿ ಪ್ರಯಾಣಿಕರು ನಿಲ್ದಾಣದ ಓಡಾಡಬೇಕಾಗುತ್ತದೆ. ಮಹಿಳೆಯರು ತಮ್ಮ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ನಿಲ್ದಾಣದ ತುಂಬಾ ಓಡಾಡುವ ದೃಶ್ಯ ಶೋಚನೀಯವಾಗಿದೆ. ಏನಾದರೂ ಅವಘಡ ನಡೆದರೆ ಅದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಗೆ ಯಾರ ಬಳಿಯಲ್ಲಿಯೂ ಉತ್ತರವಿಲ್ಲ.

ಈ ಹಿಂದಿನ ವಿಭಾಗೀಯ ಸಾರಿಗೆ ನಿಯಂತ್ರಕರು ನೋಡುತ್ತೇನೆ, ಮಾಡುತ್ತೇನೆ, ಹೇಳುತ್ತೇನೆ ಎನ್ನುತ್ತಲೆ ಇದ್ದರೆ
ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಆದರೆ, ಫಲಿತಾಂಶ ಮಾತ್ರ ಶೂನ್ಯ. ಹೀಗಾದರೆ ಒಂದಿಲ್ಲೊಂದು ದಿನ ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ಸಾರಿಗೆ ಇಲಾಖೆಯೇ ಕಾರಣವಾಗುತ್ತದೆ. ಮೂಲ ಸೌಲಭ್ಯಗಳು ಮರೀಚಿಕೆಯಾಗಿದ್ದು, ಇದರಿಂದ ನಿತ್ಯ ಪ್ರಯಾಣಿಕರು ವೇದನೆ ಅನುಭವಿಸು ವಂತಾಗಿದೆ.ನಿಲ್ದಾಣದ ಶೌಚಗೃಹಗಳಲ್ಲಿ ಸ್ವಚ್ಛತೆ ಇಲ್ಲ. ನಿಲ್ದಾಣದ ಅಂಗಳವಂತೂ ಕಸದ ಗೂಡಾಗಿದೆ. ಸರಿಯಾದ ವೇಳಾಪತ್ರಿಕೆ ಇಲ್ಲ, ಹೀಗೆ ಪಟ್ಟಿ ಮಾಡುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತ ಹೋಗುತ್ತದೆ. ಎಂದರು

ನಿಲ್ದಾಣದ ಅಕ್ಕಪಕ್ಕದಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿದ್ದಾರೆ. ಹಂದಿ, ನಾಯಿ, ಬಿಡಾಡಿ ದನಗಳ ಜೊತೆ ಕುಳಿತುಕೊಳ್ಳಬೇಕು. ತುಸು ಯಾಮಾರಿದರೆ ಕೈಯಲ್ಲಿರುವ ಚೀಲವನ್ನು ಕಿತ್ತುಕೊಂಡು ಪರಾರಿಯಾಗುವುದು ಸಾಮಾನ್ಯ.
ನಿಲ್ದಾಣದಲ್ಲಿ ಪ್ಲಾಸ್ಟಿಕ್ ಕಾಗದ, ಗುಟುಕಾ ಜಗಿದು ಗೋಡೆಗೆ ಉಗುಳಿರುವುದು ಕಂಡು ತುಂಬಾ ಬೇಸರವಾಗುತ್ತದೆ. ಕಸದ ರಾಶಿಕಂಡು ಭೀತಿಯಾಗುತ್ತದೆ. ನಿಲ್ದಾಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಹೋಂ ಗಾರ್ಡ್ ನೇಮಿಸಬೇಕು ಎನ್ನುತ್ತಾರೆ ಮಹಿಳಾ ಪ್ರಯಾಣಿಕರು.
ಹಿಂದೆ ಹಲವು ಬಾರಿ ಹೈಟೆಕ್ ಬಸ್ ನಿಲ್ದಾಣ ಮಾಡಿ ಎಂದು ಹಿರಿಯ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರಿಗೂ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮುದಗಲ್ಲ ಘಟಕದಧ್ಯಕ್ಷರಾದ ಎಸ್.ಎ.ನಹಿಂ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರಾಜ್ ಮಟ್ಟೂರ, ಜಮಾಲಿ ಸಾಬ್
ಇತರರು ಉಪಸ್ಥಿತರಿದ್ದರು
ವರದಿ :-ಮಂಜುನಾಥ ಕುಂಬಾರ