ಯಲಬುರ್ಗಾ : ದುಡಿಯುವ ಕೈಗಳಿಗೆ ನರೇಗಾ ಯೋಜನೆಯಡಿ ನಿರಂತರವಾಗಿ ಕೆಲಸ ಕೊಡಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಕುಶಲ ಕೂಲಿಕಾರರು, ರೈತರು ಹಾಗೂ ನಿರುದ್ಯೋಗ ಯವಕರು ಕೆಲಸಕ್ಕೆ ಹಾಜರಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಪಿಡಿಓ ಬಸವರಾಜ ಕಿಳ್ಳಿಕ್ಯಾತರ ಹೇಳಿದರು.
ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮ ಪಂಚಾಯತಿಯ ಚಿಕ್ಕಬನಿಗೋಳ ಗ್ರಾಮದಲ್ಲಿ ನರೇಗಾ ಯೋಜನೆ ಹಾಗೂ ಜಲಸಂಜೀವಿನಿ ಯೋಜನೆಯಡಿ ಕೈಗೊಂಡ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನರೇಗಾ ಯೋಜನೆಯು ಕಳೆದ ೧೭ ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಪ್ರದೇಶದ ಅಕುಶಲ ಕಾರ್ಮಿಕರಿಗೆ, ರೈತರಿಗೆ ನಿರುದ್ಯೋಗ ಯುವಕರಿಗೆ ಕೆಲಸ ನೀಡುತ್ತಾ ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಯಶಸ್ವಿಗಾಗಿ ಸಾಗುತ್ತಿದೆ. ಈ ಬಾರಿ ಜಲ ಮೂಲಗಳ ಸಂರಕ್ಷಣೆಗಾಗಿ ಕೆರೆ, ನಾಲಾ, ಕೃಷಿ ಹೊಂಡ, ಬದು, ಚಕ್ ಡ್ಯಾಮ್ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಭೂಮಿಗೆ ಬೀಳುವ ಮಳೆನೀರನ್ನು ಮೊದಲ ಹಂತದಿAದಲೇ ತಡೆದು ಭೂಮಿಗೆ ಇಂಗಿಸಲುವAತ ಮಹತ್ತರವಾದ ಕೆಲಸವನ್ನು ತಮ್ಮ ಗ್ರಾಮದಲ್ಲಿ ಮಾಡಲಾಗುತ್ತಿದೆ. ಇದರಿಂದ ಅಂತರಜಲ ಹೆಚ್ಚಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೋಳ್ಳುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಯಲಬುರ್ಗಾ ತಾಲೂಕು ಪಂಚಾಯತಿ ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ಮಾತನಾಡಿ, ಜಲಸಂಜೀವಿನಿ ಯೋಜನೆಯಡಿ ಈ ಬಾರಿ ಮೂರು ವರ್ಷದ ಕ್ರಿಯಾಯೋಜನೆ ಸಿದ್ದಪಡಿಸಿ ಜಲಮೂಲಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಓಡುವ ಮಳೆ ನೀರನ್ನು ನಿಲ್ಲುವಂತೆ ಮಾಡಬೇಕು. ನಿಂತ ನೀರನ್ನು ಇಂಗುವAತೆ ಮಾಡಬೇಕು. ಇದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ತಮ್ಮ ಗ್ರಾಮದಲ್ಲೆ ನರೆಗಾದಡಿ ಅಕುಶಲ ಕಾರ್ಮಿಕರಿಗೆ ಕೆಲಸ ಕೊಟ್ಟು ಪ್ರತಿದಿನಕ್ಕೆ ೩೧೬ ರೂಪಾಯಿ ಕೂಲ ಹಣವನ್ನು ಕೊಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ನೀಲಪ್ಪ ಜಗ್ಗಲ್, ಬಿಎಫ್ ಟಿ ದೇವಪ್ಪ ಬತ್ತಿ, ಕಾಯಕ ಬಂಧುಗಳು ಹಾಗೂ ೪೨೦ ಅಕುಶಲ ಕೂಲಿಕಾರ್ಮಿಕರು ಹಾಜರಿದ್ದರು.