ಲೋಕಸಭಾ ಚುನಾವಣೆ: ಸೂರತ್‌ನ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ

ಚುನಾವಣೆಯಲ್ಲಿ ಓರ್ವ ಆಭ್ಯರ್ಥಿ ಗೆಲುವು ಸಾಧಿಸಬೇಕೆಂದಿದ್ದರೆ ಅವರು ಮೊದಲು ನಾಮಪತ್ರ ಸಲ್ಲಿಸಿ, ನಂತರ ನಾಮಪತ್ರ ಪರಿಶೀಲನೆ ನಡೆಯಬೇಕು. ಇದಾದ ಬಳಿಕ ಚುನಾವಣೆ, ಮತ ಎಣಿಕೆ ನಡೆದು ನಂತರ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಆದರೆ ಸೂರತ್​ನಲ್ಲಿ ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಗುಜರಾತ್‌ನ 26 ಸ್ಥಾನಗಳ ಪೈಕಿ ಒಂದನ್ನು ಬಿಜೆಪಿ ಚುನಾವಣೆಗೂ ಮೊದಲೇ ವಶಪಡಿಸಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ನಿನ್ನೆ ಸೂರತ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ಫಾರಂ ಕೂಡ ರದ್ದಾಗಿದೆ. ಅದರ ನಂತರ ಎಲ್ಲಾ ಸ್ವತಂತ್ರ ಅಭ್ಯರ್ಥಿಗಳು ಇಂದು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗಾಗಿ ಮುಖೇಶ್​ ದಲಾಲ್ ಅವಿರೋಧವಾಗಿ ಸಂಸದನಾಗಿ ಆಯ್ಕೆಯಾಗಿದ್ದಾರೆ.

Leave a Reply

error: Content is protected !!