Breaking news: ಕುಕನೂರು ಪಟ್ಟಣದ ಗುದ್ನೇಶ್ವರ ಮಠ ದಲ್ಲಿ ಮತದಾನ ಬಹಿಷ್ಕಾರ.

You are currently viewing Breaking news: ಕುಕನೂರು ಪಟ್ಟಣದ ಗುದ್ನೇಶ್ವರ ಮಠ ದಲ್ಲಿ ಮತದಾನ ಬಹಿಷ್ಕಾರ.

ಕುಕನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19ನೇ ವಾರ್ಡ್ ನ ಗುದ್ನೆಪ್ಪನಮಠದಲ್ಲಿ ಮತದಾನವನ್ನು ಬಹಿಷ್ಕರಿಸಿದ  ಮತದಾರರು. ಪಟ್ಟಣದ ಬೂತ್ ಸಂಖ್ಯೆ 211 ರಲ್ಲಿ ಒಟ್ಟು 1065 ಮತದಾನವಿದ್ದದು, ಮತದಾನ ಪ್ರಾರಂಭವಾಗಿ 2 ಗಂಟೆಯಾದರೂ ಸಹಿತ ಇದುವರೆಗೂ ಒಂದೇ ಒಂದು ಮತದಾನ ವಾದ ವರದಿಯಾಗಿಲ್ಲ.

ಗ್ರಾಮದಲ್ಲಿರುವ ಗುದ್ನೇಶ್ವರ ದೇವಾಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು ಅದನ್ನು ಕೈ ಬಿಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿ ಮತದಾನ ಬಹಿಷ್ಕರಿಸಿದ್ದಾರೆ.

ಈ ಹಿಂದೆ ತಮ್ಮ ಬೇಡಿಕೆ ಈಡೇರಿದಿದ್ದರೆ  ಮತದಾನ  ಬಹಿಷ್ಕಾರ ಮಾಡಲಾಗುವುದು ಎಂದು  ತಹಶೀಲ್ದಾರ್ ಹಾಗೂ ಸಂಭಂದಿಸಿದ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಅಧಿಕಾರಿಗಳು ಸಹಿತ ಗ್ರಾಮಸ್ಥರು ಮಾತದಾನ ಮಾಡುವಂತೆ ಮನವಿ ಮಾಡಿದರು ಸಹಿತ ಯಾವುದೇ ಪ್ರಯೋಜನವಾಗಲಿಲ್ಲ

Leave a Reply

error: Content is protected !!