ಮೇ.13 ಕ್ಕೆ ಮುದಗಲ್ಲ ಬಂದ್: ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಕರೆ…

ಮುದಗಲ್ಲ ವರದಿ

13 ಕ್ಕೆ ಮುದಗಲ್ಲ ಬಂದ್: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರೆ…

13,ರಿಂದ 14 ದಿನಗಳಗೋಮ್ಮೆ ನೀರು ಸರಬರಾಜುವಾಗುತ್ತಿದ್ದು, ನೀರಿಗಾಗಿ ಭಾರಿ ಕೊರತೆ ಎದುರಾಗಿದೆ. ಅದ್ರಲ್ಲೂ  ಮುದಗಲ್ಲ ಭಾಗದಲ್ಲಿ ನೀರು ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ:- ಎಸ್.ಎ.ನಯೀಮ್ ಕರ್ನಾಟಕ ರಕ್ಷಣಾ ವೇದಿಕೆಯ ಮುದಗಲ್  ಹೇಳಿದರು.

ಮುದಗಲ್ : ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮೂಲಭೂತ ಸೌಕರ್ಯಗಳಿಗಾಗಿ ಒತ್ತಾಯಿಸಿ ದಿನಾಂಕ : 13 ರಂದು ಮುದಗಲ್ ಬಂದ್ ಮಾಡಲಾಗುವುದು ಕರ್ನಾಟಕ ರಕ್ಷಣಾ ವೇದಿಕೆಯ ಮುದಗಲ್ ಘಟಕದ ಅದ್ಯ್ಯಕ್ಷ ಎಸ್.ಎ.ನಯೀಮ್ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಡಿಯುವ ನೀರಿನ ಗಂಭೀರವಾದ ಸಮಸ್ಯೆ ಇದ್ದು ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆ ಮಿತಿ ಮೀರಿ 13,ರಿಂದ 14 ದಿನಗಳಗೋಮ್ಮೆ ನೀರು ಸರಬರಾಜುವಾಗುತ್ತಿದ್ದು,ದಿನ ನಿತ್ಯವೂ ಜನ ಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಈ ಕುರಿತು ಜನಪ್ರತಿನಿಧಿಗಳಿಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಹಾಗೂ ಮುದಗಲ್ ಪಟ್ಟಣ ತಾಲೂಕು ಕೇಂದ್ರ ಆಗಲಿಕ್ಕೆ ಎಲ್ಲಾ ಅರ್ಹತೆ ಇದ್ದರೂ ರಾಜಕೀಯ ಇಚ್ಚಾ ಶಕ್ತಿ ಕೊರತೆಯಿಂದ ತಾಲೂಕು ವಂಚಿತವಾಗಿದೆ.ರಾತ್ರಿ ವೇಳೆ ಬಸ್ಸುಗಳು ಮುದಗಲ್ ಪಟ್ಟಣದ ಒಳಗಡೆ ಬರದೇ ಬೈಪಾಸ್ ಮೂಲಕ ತೆರಳುತ್ತಿವೆ.ಇದರಿಂದ ಬಸ್ ನಿಲ್ದಾಣ ದಲ್ಲಿರುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಮುದಗಲ್ ಪಟ್ಟಣಕ್ಕೆ ಬಸ್ ಡಿಪೋ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ನೇತೃತ್ವದಲ್ಲಿ ದಲಿತಪರ ಸಂಘಟನೆ ಗಳು,ಎ.ಪಿ.ಎಮ್.ಸಿ. ಹಮಾಲರ ಸಂಘ, ಮತ್ತು ನಾನಾ ಸಂಘಟನೆಗಳು, ಚಿಂತಕರು, ಪ್ರಗತಿಪರ ಮಹಿಳೆಯರು ಸೇರಿದಂತೆ ಇತರರೊಂದಿಗೆ ದಿನಾಂಕ 13 ರಂದು ಮಂಗಳವಾರ ಮುದಗಲ್ ಪಟ್ಟಣವನ್ನು ಬಂದ್ ಮಾಡಲಾಗುವುದು ಎಂದರು ಈ ಬಂದ್ ನಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿ ಗೊಳಿಸ ಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರವೇ ಸಂಘಟನೆ ಕಾರ್ಯದರ್ಶಿ ಎಸ್.ಎನ್.ಖಾದ್ರಿ, ನಗರ ಘಟಕ ಅಧ್ಯಕ್ಷ ಸಾಬು ಹುಸೇನ್,ಅಬ್ದುಲ್ ಮಜೀದ್, ರಹೇಮಾನ್ ದುಲಾ ಜಂಬಾಳಿ ,ಮಹಾಂತೇಶ ಚಟ್ಟೇರ್,ಜಮಾಲಿಸಾಬ,ಬಾಲಪ್ಪ ಉಪ್ಪಾರ,ಬೀಮಣ್ಣ ಉಪ್ಪಾರ ಸೇರಿದಂತೆ ಇತರರು ಇದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!