LOCAL NEWS : ಕುಕನೂರು : ಕುದುರಿಮೋತಿ ಗ್ರಾಮದಲ್ಲಿ ರವೇರಿದ 21 ನವ ಜೋಡಿಗಳ ಸಾಮೂಹಿಕ ವಿವಾಹ..!

You are currently viewing LOCAL NEWS : ಕುಕನೂರು : ಕುದುರಿಮೋತಿ ಗ್ರಾಮದಲ್ಲಿ ರವೇರಿದ 21 ನವ ಜೋಡಿಗಳ ಸಾಮೂಹಿಕ ವಿವಾಹ..!

LOCAL NEWS : ಕುಕನೂರು : ಕುದುರಿಮೋತಿ ಗ್ರಾಮದಲ್ಲಿ ರವೇರಿದ 21 ನವ ಜೋಡಿಗಳ ಸಾಮೂಹಿಕ ವಿವಾಹ..!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕುನೂರು : ತಾಲೂಕಿನ ಕುದುರಿಮೋತಿ ಗ್ರಾಮದ ಮೈಸೂರು ಸಂಸ್ಥಾನ ಮಠ ಜಾತ್ರಾ ಮಹೋತ್ಸವ ಅಂಗವಾಗಿ 21 ನವ ಜೋಡಿಗಳ ಸಾಮೂಹಿಕ ವಿವಾಹಗಳು ಜರುಗಿದವು.

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ವಿಜಯ್ ಮಹಾಂತ ಸ್ವಾಮೀಜಿ ಮಾತನಾಡಿ, ದಾಂಪತ್ಯ ಜೀವನದಲ್ಲಿ ಪರಸ್ಪರ ಗೌರವ ನಂಬಿಕೆ ಕಾಳಜಿ ಹಾಗೂ ಸಹಕಾರವೇ ಸುಖಕರ ಜೀವನಕ್ಕೆ ಆಧಾರ’ ಎಂದು ತಿಳಿಸಿದರು.

ನವ ದಂಪತಿಗಳು ಸಮಾಜಕ್ಕೆ ಮಾದರಿಯಾಗುವಂತೆ ಬದುಕಬೇಕು ಎಂದು ಕರೆ ನೀಡಿದರು.

ಸಾಮೂಹಿಕ ವಿವಾಹದ ನೇತೃತ್ವ ವಹಿಸಿದ ‘ಹಜರತ್ ನಿಜಾಮುದ್ದೀನ್ ದರ್ಗಾ ಗಜೇಂದ್ರಗಡ ಅಶ್ರಫ್’ ಮಾತನಾಡಿ, ‘ಸಾಮೂಹಿಕ ವಿವಾಹಗಳಲ್ಲಿ ಮದುವೆಯಾದವರು ಭಾಗ್ಯವಂತರು ಇಂತಹ ವಿವಾಹದಲ್ಲಿ ಮದುವೆಯಾದರೆ ಬಡವರು ಮಧ್ಯಮ ವರ್ಗದವರಿಗೆ ಅನಗತ್ಯ ವೆಚ್ಚ ಕಡಿಮೆ ಯಾಗುವುದು ಹಾಗೂ ಸಮಾಜದಲ್ಲಿ ಸರಳತೆ ಸಮಾನತೆಯ ಮೂಡುತ್ತದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈರಪ್ಪ ಕುಡುಗುಂಟಿ ಮಾತನಾಡುತ್ತಾ ವೀರಶೈವ ಮಠಗಳು ಈ ನಾಡಿನ ಆಸ್ತಿ ಅವಗಳನ್ನು ಉಳಿಸಿ ಬೆಳಿಸಿ ಕೊಂಡು ಮುನ್ನಡೆ ಬೇಕು ರಾಜಕಾರಣಿಗಳು ತಮ್ಮ ಗೆಲುವಿನ ಪ್ರಚಾರಕ್ಕಾಗಿ ಮಠಾಧೀಶರನ್ನು ಬಳಸಿಕೊಂಡು ತಾವು ಗೆದ್ದ ನಂತರ ತಿರುಗಿ ನೋಡದ ಇರುವಂತಹ ಕೆಲ ರಾಜಕಾರಣಿಗಳಿಂದ ದೂರವಿರಬೇಕೆಂದು ಹೇಳಿದರು. ಮೈಸೂರು ಸಂಸ್ಥಾನ ಮಠವು ಬಹಳಷ್ಟು ಶಾಖಾ ಮಠಗಳನ್ನು ಹೊಂದಿದ್ದು ಅತಿ ಹೆಚ್ಚು ಭಕ್ತರು ಮತ್ತು ಭಾವೈಕ್ಯತೆಯನ್ನು ಹೊಂದಿದ ವೀರಶೈವ ಮಠ ವಾಗಿರುತ್ತದೆ ಎಂದರು.

ಮುಖಂಡರಾದ ಕಳಕಪ್ಪ ಕಂಬಳಿ ಮಾತನಾಡಿ ‘ಸಂಸಾರದಲ್ಲಿ ಎಂತಹ ಸಮಸ್ಯೆಗಳು ಬಂದರೂ ಗಂಡ ಹೆಂಡತಿ ಪರಸ್ಪರ ಅರ್ಥ ಮಾಡಿಕೊಂಡು ಜೀವನವನ್ನು ಮುನ್ನಡೆಸಬೇಕು’ ಎಂದು ಹೇಳಿದರು.

ಕುಕುನೂರು ಪಟ್ಟಣದ ಮಹಾದೇವ ಮಹಾಸ್ವಾಮಿಗಳು, ಶ್ರೀಧರ್ ಮರಡಿಮಠದ, ಬಸವಲಿಂಗ ಶಿವಾಚಾರ್ಯರು, ವೆಂಕಟಪುರ ಹಿರೇಮಠದ ಗುರು ಸಿದ್ದೇಶ್ವರ, ಶಿವಾಚಾರ್ಯರು ಚಿಕ್ಕಮ್ಯಾಗೇರಿ ಗುರು ಶಾಂತವೀರ ಶಿವಾಚಾರ್ಯರು, ಬಸವರಾಜ ರಾಜುರ, ಅಯ್ಯನಗೌಡ, ಮಂಜುನಾಥಪ್ಪನವರ್, ಹನುಮಂತಗೌಡ ದಳಪತಿ, ಈರಣ್ಣ ರಾವಣಕಿ, ಪಂಪಾಪತಿ ವಣಗೇರಿ ,ಸುರೇಶ್ ಚೌಡ್ಕಿ, ಶ್ರೀನಾಥ್ ರೆಡ್ಡಿ ಧನಲಕ್ಷ್ಮಿ ಪೌಲ್ಟ್ರೀ ಫಾರಂ, ಅಶೋಕ್ ತೋಟದ, ಶಿವಶಂಕರಾವ್ ದೇಸಾಯಿ, ಈರಪ್ಪ ಕುಡಗುಂಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

ವರದಿ : ಅಲ್ಲಾಬೇಗಂ ಎಂ. ಅಮರಾವತಿ, ಕುಕನೂರು. 

Leave a Reply

error: Content is protected !!