BIG NEWS : ಕಾಂಗ್ರೆಸ್ಸಿಗರಿಂದ ಗಂಗಾವತಿ ಕ್ಷೇತ್ರ ಹೆಸರು ಹಾಳು ಮಾಡುವ ಯತ್ನ : ಶಾಸಕ ಜನಾರ್ದನ ರೆಡ್ಡಿ

You are currently viewing BIG NEWS : ಕಾಂಗ್ರೆಸ್ಸಿಗರಿಂದ ಗಂಗಾವತಿ ಕ್ಷೇತ್ರ ಹೆಸರು ಹಾಳು ಮಾಡುವ ಯತ್ನ : ಶಾಸಕ ಜನಾರ್ದನ ರೆಡ್ಡಿ

BIG NEWS : ಕಾಂಗ್ರೆಸ್ಸಿಗರಿಂದ ಗಂಗಾವತಿ ಕ್ಷೇತ್ರ ಹೆಸರು ಹಾಳು ಮಾಡುವ ಯತ್ನ : ಶಾಸಕ ಜನಾರ್ದನ ರೆಡ್ಡಿ

ಕೊಪ್ಪಳ : ಕೊಪ್ಪಳದ ಜಿಲ್ಲಾ ಸಚಿವರು, ಶಾಸಕ ಹಾಗೂ ಸಂಸದರು ಸೇರಿದಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜರುಗುತ್ತಿರುವ ಅಕ್ರಮ ಡ್ರಗ್ಸ್ ಪ್ರಕರಣಗಳನ್ನು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಜರುಗಿರುವುದಾಗಿ ಸೃಷ್ಟಿ ಮಾಡುತ್ತಿದ್ದು ಇದರಿಂದ ಆನೆಗುಂದಿ ಭಾಗದ ಪ್ರಸಿದ್ಧ ಹಾಗೂ ಐತಿಹಾಸಿಕ ಸ್ಥಳಗಳ ವರ್ಚಸ್ಸಿಗೆ ಕುಂದು ಬರುತ್ತಿದೆ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ವಿಧಾನಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡುತ್ತಾ ಇತ್ತೀಚೆಗೆ ಕೊಪ್ಪಳ ತಾಲೂಕಿನ ಬಸಾಪುರದ ರೆಸಾರ್ಟ್ಗಳಲ್ಲಿ ನಡೆದ ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಣಿಕೆ ಪ್ರಕರಣವನ್ನು ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರು, ಗಂಗಾವತಿ ವಿಧಾನಸಭಾ ಕ್ಷೇತ್ರದ ಕಡೆಗೆ ವರ್ಗಾಯಿಸಿಕೊಂಡು ತಾಲೂಕಿನ ಐತಿಹಾಸಿಕ ಸ್ಥಳಗಳಿಗೆ ಕಳಂಕ ತರಲು ಯತ್ನಿಸಿ ಗಂಗಾವತಿ ವಿಧಾನಸಭಾ ಕ್ಷೇತ್ರದ ವರ್ಚಸ್ಸನ್ನು ಹೊಂದಿಸುವ ಪ್ರಯತ್ನ ಮಾಡಿದ್ದೀರಿ ಎಂದು ಜನಾರ್ದನ ರೆಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ ಕೊಪ್ಪಳ ತಾಲೂಕಿನ ಬಸಾಪುರ ರೆಸಾರ್ಟ್ ಗಳಲ್ಲಿ ನಡೆದ ಪ್ರಕರಣ ಗಳನ್ನು ಗಂಗಾವತಿಗೆ ನಿಯಮ ಬಾಹಿರವಾಗಿ ವರ್ಗಾಯಿಸಿ ಪೊಲೀಸರು ದೂರು ದಾಖಲಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು ಇದು ಸಮಂಜಸವಾದ ಕಾರ್ಯವಲ್ಲ ಎಂದು ಹೇಳಿದರು.


ಕೇವಲ ಸ್ಥಳೀಯ ಮಾತ್ರವಲ್ಲ, ರಾಷ್ಟ್ರೀಯ ಮಾಧ್ಯಮಗಳನ್ನು ಇಲ್ಲಿಗೆ ಕರೆಯಿಸಿ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ, ಆನೆಗೊಂದಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ಜಿಲ್ಲೆಯ ಕಾಂಗ್ರೆಸ್ ಸಚಿವ, ಹಾಗೂ ಸಂಸದರು ಪವಿತ್ರವಾದ ಐತಿಹಾಸಿಕ ಸ್ಥಳದ ಜೊತೆಗೆ ಗಂಗಾವತಿ ವಿಧಾನಸಭಾ ಕ್ಷೇತ್ರವನ್ನು ಸಹ ಹಾಳು ಮಾಡಲು ಹೊರಟಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಎರಡು ಇಲಾಖೆಯಿಂದ ಗಂಗಾವತಿಗೆ ಎಷ್ಟು ಕೆಟ್ಟ ಹೆಸರು ಬರುತ್ತಿದೆ ಎಂದರೆ, ಅಕ್ರಮ ಚಟುವಟಿಕೆ, ಗಾಂಜಾ, ಮಾದಕ ಪದಾರ್ಥ ಮಾರಾಟದ ಪ್ರಕರಣ ಹಬ್ ಎಂದು ರಾಜ್ಯದಲ್ಲಿ ಚರ್ಚೆಗೆ ಬಂದರೆ ಮೊದಲು ಗಂಗಾವತಿಯತ್ತ ನೋಡುವಂತಾಗಿದೆ. ಇಂತಹ ಕಳಂಕಕ್ಕೆ ಸಚಿವ ಶಿವರಾಜ ತಂಗಡಿ ಅವರೇ ನೇರ ನ ಹೋಣೆಗಾರರು ಎಂದು ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರದ ಗ್ರಾಮಗಳಲ್ಲಿ ಕಾನೂನು ಬಾಹಿರವಾಗಿ ಇಸ್ಪಿಟ್ ಜೂಜಾಟ ಜೋರಾಗಿ ನಡೆಯುತ್ತಿದ್ದು. ಒಂದು ಸರಕು ಸಾಗಣೆ ವಾಹನದ ಒಳಗೆ ಜೂಜುಕೋರರನ್ನು ಕೂರಿಸಿಕೊಂಡು ಸಂಚರಿಸುತ್ತಲೇ ಜೂಜಾಟ ಆಡಿಸುವ ಹೊಸ ವಿಧಾನ ಜಾರಿಗೆ ಬಂದಿದೆ ಎಂದು ಜನ ನನ್ನ ಗಮನಕ್ಕೆ ತಂದಿದ್ದಾರೆ. ಇವುಗಳಿಗೆಲ್ಲ ಶೀಘ್ರದಲ್ಲಿ ಸ್ತಗಿತಗೊಳಿಸದಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Leave a Reply

error: Content is protected !!