BIG NEWS : ‘ಮಹಿಳಾ ಮೀಸಲು ಕ್ಷೇತ್ರಕ್ಕೆ ಶಾಸಕ ರಾಘವೇಂದ್ರನ ಹೆಣ್ಮಕ್ಕಳೇ ಅಭ್ಯರ್ಥಿ’ : ರಾಯರೆಡ್ಡಿ..ಅಚ್ಚರಿ ಹೇಳಿಕೆ?

You are currently viewing BIG NEWS : ‘ಮಹಿಳಾ ಮೀಸಲು ಕ್ಷೇತ್ರಕ್ಕೆ ಶಾಸಕ ರಾಘವೇಂದ್ರನ ಹೆಣ್ಮಕ್ಕಳೇ ಅಭ್ಯರ್ಥಿ’ : ರಾಯರೆಡ್ಡಿ..ಅಚ್ಚರಿ ಹೇಳಿಕೆ?

ಪ್ರಜಾವೀಕ್ಷಣೆ ಸುದ್ದಿಜಾಲ :-

BIG NEWS : ‘ಮಹಿಳಾ ಮೀಸಲು ಕ್ಷೇತ್ರಕ್ಕೆ ಶಾಸಕ ರಾಘವೇಂದ್ರನ ಹೆಣ್ಮಕ್ಕಳೇ ಅಭ್ಯರ್ಥಿ’ : ರಾಯರೆಡ್ಡಿ..ಅಚ್ಚರಿ ಹೇಳಿಕೆ?

 

ಕೊಪ್ಪಳ : ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿಯವರು ಇತ್ತೀಚಿಗೆ ಬಾರಿ ಸುದ್ದಿಯಾಗುತ್ತಿದ್ದು, ಇದೇ ಮತ್ತೊಂದು ವಿಚಿತ್ರ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.

ಕೊಪ್ಪಳ ಜಿಲ್ಲೆಯ ರಾಜಕಾರಣದಲ್ಲಿ ಅತ್ಯಂತ ಹಿರಿಯ ರಾಜಕಾರಣಿಯಾದ ಬಸವರಾಜ ರಾಯರೆಡ್ಡಿ ಅವರು, ಒಂದು ಬಾರಿ ಸಂಸತ್ ಸದಸ್ಯರಾಗಿ, ಹಲವು ಬಾರಿ ಶಾಸಕರಾಗಿ ಸಚಿವರಾಗಿ, ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇವರು ಇತ್ತೀಚಿಗೆ ತಮ್ಮ ಹೇಳಿಕೆಯಿಂದಲೇ ಭಾರಿ ಸದ್ದು ಮಾಡುತ್ತಿದ್ದಾರೆ. ಉದಾಹರಣೆಗೆ, “ನಾನು ಹಿಂದೂ ಅಲ್ಲ” ” ಭ್ರಷ್ಟಾಚಾರದಲ್ಲಿ ಕರ್ನಾಟಕ ರಾಜ್ಯ ನಂಬರ್ ಒನ್”, ಹಲವು ಬಾರಿ ಶಾಸಕರಾಗಿ ಆಯ್ಕೆಯಾದ ತಮ್ಮ ಕ್ಷೇತ್ರದ ಬಗ್ಗೆ ಕೈಗಾರಿಕೆ ತರುವ ವಿಚಾರದಲ್ಲಿ ಕೇವಲವಾಗಿ ಮಾತನಾಡಿದ್ದು,

“ಯಲಬುರ್ಗಾದಲ್ಲಿ ಸರಿಯಾಗಿ ಇಡ್ಲಿ ಸಾಂಬಾರ್ ಸಿಗೋದಿಲ್ಲ”, ಇಲ್ಲಿ ಯಾಕೆ ಕೈಗಾರಿಕೆ ವಿಚಾರ” ಎಂಬ ಮಾತುಗಳು ಮಾಧ್ಯಮಗಳ ಎದುರೇ ನೀಡಿ, ಆಮೇಲೆ ಸರಿಪಡಿಸಿಕೊಂಡಿದ್ದಿದೆ.

ಇದೀಗ ಇಂದು ಇದೇ ರೀತಿ ಹೇಳಿಕೆ ಒಂದನ್ನು ನೀಡಿ, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಮುಂದಿನ ಬಾರಿ ಜಿಲ್ಲೆಯಲ್ಲಿ ಮಹಿಳಾ ಮೀಸಲು ಕ್ಷೇತ್ರದ ವಿಚಾರ ವಾಗಿ ಮಾತನಾಡುವಾಗ ಈ ರೀತಿ ಹೇಳಿದ್ದು, “ಮುಂದಿನ ಚುನಾವಣೆಯಲ್ಲಿ ಯಲಬುರ್ಗಾ ವಿಧಾನಸಭೆ ಕ್ಷೇತ್ರ ಮಹಿಳಾ ಮೀಸಲು ಕ್ಷೇತ್ರವಾದರೆ, ಒಂದೊಳ್ಳೆ ಮಹಿಳಾ ಅಭ್ಯರ್ಥಿಯನ್ನು ಹುಡುಕುತ್ತೇವೆ. ಒಂದು ವೇಳೆ ಸಿಗದಿದ್ದ ಪಕ್ಷದಲ್ಲಿ ಶಾಸಕ ರಾಘಣ್ಣನ ಹೆಣ್ಮಕ್ಕಳನ್ನೆ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಸಿದ್ಧರಿದ್ದೇವೆ, ಯಾಕಂದ್ರೆ ರಾಘಣ್ಣ ನಮಗೆ ತುಂಬಾ ಚೆನ್ನಾಗಿ ಗೊತ್ತಿರುವ ಮನುಷ್ಯ, ಅವನಿಗೆ ಹೆಣ್ಮಕ್ಕಳ ಮೇಲೆ ಬಹಳ ಪ್ರೀತಿ” ಹೀಗೆಂದು ಒಂದು ಕ್ಷಣ ನಗೆ ಪಾಟಲಿಗೆ ಈಡಾದರೂ. ಈ ರೀತಿ ಹೇಳಿದ್ದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಹಾಗಾದರೆ ಶಾಸಕ ಬಸವರಾಜ ರಾಯರೆಡ್ಡಿ ಅವರು ಹೇಳಿದ ಹೇಳಿಕೆಯ ಮರ್ಮವೇನು? ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರಿಗೆ ಬಹಳಷ್ಟು ಹೆಣ್ಮಕ್ಕಳಿದ್ದಾರೆ ಎಂಬುದರ ಅರ್ಥವೇನು?, ರಾಯರೆಡ್ಡಿ ಅವರ ಹೇಳಿಕೆ ಇದೀಗ ಸ್ವತಃ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲಮಯ ವಾತಾವರಣ ಉಂಟು ಮಾಡಿದೆ ಎಂದು ಸಾರ್ವಜನಿಕರಲ್ಲಿ ಚೆರ್ಚೆಯಾಗುತ್ತಿದೆ.

Leave a Reply

error: Content is protected !!