LOCAL NEWS : ಸಹಕಾರ ಕ್ಷೇತ್ರ ಪವಿತ್ರವಾದದ್ದು ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಿ : ಶರಣೇಗೌಡ ಕೊಂತನೂರು

You are currently viewing LOCAL NEWS : ಸಹಕಾರ ಕ್ಷೇತ್ರ ಪವಿತ್ರವಾದದ್ದು ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಿ : ಶರಣೇಗೌಡ ಕೊಂತನೂರು

LOCAL NEWS : ಸಹಕಾರ ಕ್ಷೇತ್ರ ಪವಿತ್ರವಾದದ್ದು ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸಿ : ಶರಣೇಗೌಡ ಕೊಂತನೂರು

ಗಂಗಾವತಿ : ತಾಲೂಕಿನ ಮರಳಿ ಗ್ರಾಮದಲ್ಲಿ ಶ್ರೀ ಗಂಗಾಪರಮೇಶ್ವರಿ ಸಮುದಾಯ ಸಭಾಭವನದಲ್ಲಿ ಗಂಗಾವತಿ ಕಾರಟಗಿ ಮತ್ತು ಕನಕರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರ ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಕೊಪ್ಪಳ ಜಿಲ್ಲಾ ಸಹಕಾರಿ ಆರ್ ಕೆ ಡಿ ಸಿ ಸಿ ಬ್ಯಾಂಕ್ ರಾಯಚೂರ್ ಮತ್ತು ಸಹಕಾರಿ ಇಲಾಖೆ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಯಿತು .

ತರಬೇತಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಆರ್ ಕೆ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಶರಣಗೌಡ ಕೊಂತನೂರ್ ಪೊಲೀಸ್ ಪಾಟೀಲ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಸಹಕಾರ ಕ್ಷೇತ್ರ ಪವಿತ್ರವಾದದ್ದು ಈ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಸಹಕಾರ ಸಂಘಗಳನ್ನ ಅಭಿವೃದ್ಧಿ ಪಥದತ್ತ ಸಹಕಾರ ಸಂಘವನ್ನು ಪ್ರಬಲಗೊಳಿಸಿರಿ ಎಂದರು.

ನಂತರದಲ್ಲಿ ಜಿಲ್ಲಾ ಸಹಕಾರಿ ಅಧ್ಯಕ್ಷರಾದ ಶೇಖರ ಗೌಡ ಮಾಲಿ ಪಾಟೀಲ್ ರವರು ಅಧ್ಯಕ್ಷತೆ ವಹಿಸಿ ತಮ್ಮ ಅಧ್ಯಕ್ಷ ಭಾಷಣದಲ್ಲಿ ಸಹಕಾರ ಶಿಕ್ಷಣ ತರಬೇತಿ ಪ್ರಚಾರದ ಮೂಲಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಕೊಪ್ಪಳ ಜಿಲ್ಲಾ ಸಹಕಾರಿ ಯೂನಿಯನ ಕೆಲಸ ನಿರ್ವಹಿಸುತ್ತಾ ರಾಜ್ಯದಲ್ಲಿ ಸಾಕಾರ ಸಂಸ್ಥೆಗಳ ಪದಾಧಿಕಾರಿಗಳಿಗೆ ತರಬೇತಿಯನ್ನು ನೀಡುತ್ತಾ , ಉನ್ನತ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ, ಈ ನಿಟ್ಟಿನಲ್ಲಿ ನಾವು ನೀವೆಲ್ಲರೂ ತರಬೇತಿಯ ಪ್ರಯೋಜನನ್ನು ಪಡೆದ ಜೊತೆಗೆ ನಮ್ಮ ನಮ್ಮ ಸಹಕಾರ ಸಂಘಗಳಲ್ಲಿ ವಿಷಯಗಳನ್ನು ಅಳವಡಿಸಿಕೊಂಡು ಸಂಘಗಳನ್ನ ಗ್ರಾಮದ ಗುರು ಹಿರಿಯರಿಂದ ಮತ್ತು ರೈತರರಿಂದ ಸಂಘವನ್ನು ಅಭಿವೃದ್ಧಿಪಡಿಸಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನ ಉಪಾಧ್ಯಕ್ಷರಾದ ಹಾಲಯ್ಯ ಹುಡೇಜಾಲಿ ಜಿಲ್ಲಾ ಸಹಕಾರಿ ಯೂನಿಯನ್ ನ ನಿರ್ದೇಶಕರುಗಳಾದ ಸಿ ಎಚ್ ಸತ್ಯನಾರಾಯಣ ಶರಣಗೌಡ ಸುಂದರ ರೆಡ್ಡಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸಜ್ಜನರ ಪ್ರಕಾಶ ಡಿಸಿಸಿ ಬ್ಯಾಂಕಿನ ಶಾಕಾ ವ್ಯವಸ್ಥಾಪಕರಾದ ಶ್ರೀಧರ್ ಕುಲಕರ್ಣಿ ನಾಗರತ್ನ ಶಂಕರ್ ನಾಯಕ್ ಹಿರಿಯ ಸಹಕಾರಿಗಳಾದ ರಮೇಶ್ ಕುಲಕರ್ಣಿ ಮರಳಿಯ ಎಂ ನಾಗಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರುಗಳು ಜಿಲ್ಲಾ ಸಹಕಾರಿ ಯೂನಿಯನ್ ನ ಸಿ.ಇ. ಓ ಅಕ್ಷಯ್ ಕುಮಾರ್ ವ್ಯವಸ್ಥಾಪಕರಾದ ರಾಜಶೇಖರ್ ಹೊಸಮನಿ ಡಿಸಿಸಿ ಬ್ಯಾಂಕಿನ ಕ್ಷೇತ್ರ ಅಧಿಕಾರಿಗಳಾದ ಚಿನ್ನು ಪಾಟೀಲ್ ಇವರು ಉಪಸಿತರಿತದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ನಾಗರತ್ನ ಶಾಖಾ ವ್ಯವಸ್ಥಾಪಕರು ಆರ್ ಕೆ ಡಿ ಸಿ ಸಿ ಬ್ಯಾಂಕ್ ಕಾರಟಗಿ ಇವರು ಪ್ರಾರ್ಥನ ಗೀತೆಯನ್ನು ಹಾಡಿದರು, ಅಕ್ಷಯ್ ಕುಮಾರ್ ಪ್ರಸ್ತಾವಿಕ ನುಡಿಯನ್ನು ಪ್ರಾಥಮಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತ ಕೋರಿದರು. ರಾಜಶೇಖರ ಹೊಸಮನಿ ನಿರೂಪಣೆ ಮಾಡಿದರು ವಂದನೆ ಅರ್ಪಣೆ ಕಾರ್ಯಕ್ರಮವನ್ನು ಶಿವರಾಜ್ ಮೈಲಾಪುರ ವಂದಿಸಿದರು. ಗಂಗಾವತಿ ಕರಾಟಾಗಿ ಮತ್ತು ಕನಕಗಿರಿ ತಾಲೂಕಿನ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗಿಯಾಗಿದ್ದರು.

Leave a Reply

error: Content is protected !!