ಕುಕನೂರ : ನನಗೆ ರಾಜಕೀಯ ಅವಶ್ಯಕತೆ ಇರಲಿಲ್ಲ, ಆದರೆ ಕ್ಷೇತ್ರವನ್ನು ನೀರಾವರಿ ಮಾಡುವ ಹುಚ್ಚಿನೊಂದಿಗೆ ರಾಜಕೀಯಕ್ಕೆ ಬಂದಿದ್ದೇನೆ ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಹಾಲಪ್ಪ ಆಚಾರ್ ಹೇಳಿದರು.
ಕುಕನೂರು ಪಟ್ಟಣದ ವೀರಭದ್ರಪ್ಪ ಶಿರೂರು ವೃತ್ತದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಬಹಿರಂಗ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತ ದೇಶ ಇಂದು ವಿಶ್ವ ಗುರುವಿನ ಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ ನಮ್ಮ ಪ್ರಧಾನಿ ನರೇಂದ್ರಮೋದಿಯವರ ಕಾರ್ಯಗಳು. ಕೇಂದ್ರ ಸರ್ಕಾರದ ೯ವರ್ಷದ ಆಡಳಿತ ಅವಧಿಯಲ್ಲಿ ಒಂದು ರೂಪಾಯಿಯ ಭ್ರಷ್ಟಾಚಾರ ಅರೋಪಗಳಿಲ್ಲ.ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಉತ್ತಮ ಆಡಳಿತವನ್ನು ನೀಡಿದ ಸರ್ಕಾರ ನಮ್ಮದು.
ಈ ಹಿಂದೆ ಕ್ಷೇತ್ರದಲ್ಲಿ ೨೦ ವರ್ಷ ಆಡಳಿತ ನೆಡೆಸಿದ ರಾಯರಡ್ಡಿಗೆ ನೀರಾವರಿ ಮಾಡುವ ಆಸಕ್ತಿ ತೋರಲಿಲ್ಲ. ಅವರು ಆಸಕ್ತಿ ತೋರಿ ನೀರಾವರಿಗೆ ಕೆಲಸ ಮಾಡಿದ್ದಾರೆ ನಮ್ಮ ಕ್ಷೇತ್ರ ಇವತ್ತು ಸಂಪೂರ್ಣ ನೀರಾವರಿಯಾಗಿರುತ್ತಿತ್ತು, ಆದರೆ ಅವರು ಮಾಡಲಿಲ್ಲ.ನಾನು ಅಧಿಕಾರ ವಹಿಸಿಕೊಂಡ ಎರಡು ವರ್ಷದಲ್ಲಿ ನಿರಾವರಿಗಾಗಿ ೧೦೦೦ ಕೋಟಿಯಲ್ಲಿ ಬೇವೂರಿನಲ್ಲಿ ಅಡಿಗಲ್ಲು ಪೂಜೆ ಮಾಡಿಸಿದೆ. ಅದರಂತೆ ಕ್ಷೇತ್ರಕ್ಕೆ ಕೃಷ್ಣೆಯ ನೀರನ್ನು ತಂದು ಹಾಕಿದ್ದೇನೆ. ನನಗೆ ರಾಜಕೀಯ ಅವಶ್ಯಕತೆ ಇರಲಿಲ್ಲ ಆದರೆ ಕ್ಷೇತ್ರವನ್ನು ಸಂಪೂರ್ಣವಾಗಿ ನೀರಾವರಿ ಮಾಡಬೇಕು ಎಂಬ ಉದ್ದೇಶದೊಂದಿಗೆ ರಾಜಕೀಯಕ್ಕೆ ಬಂದೆ. ನಿಮ್ಮ ನಾನು ಶಾಸಕನಾಗಿ ಮೂರು ಖಾತೆಗಳ ಸಚಿವನಾಗಿ
ಪ್ರಾಮಾಣಿಕವಾಗಿ ನನ್ನ ಕೆಲಸವನ್ನು ಮಾಡಿದ್ದೇನೆ. ಆದ್ದರಿಂದ ಈ ಬಾರಿ ಮತ್ತೊಮ್ಮೆ ಈ ಬಾರಿಯ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ಹಾಕುವ ಮೂಲಕ ನನಗೆ ಆಶೀರ್ವಾದ ನೀಡಬೇಕು ಎಂದರು.
ವೇದಿಕೆ ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದ ಮಹಾಮಾಯ ದೇವಾಯಲದಿಂದ ತೆರದ ವಾಹನದಲ್ಲಿ ಬೃಹತ್ ಮೆರವಣಿಗೆ ಮೂಲಕ ಕಾರ್ಯಕರ್ತರ ಬರಮಾಡಿಕೊಂಡರು. ಈ ವೇಳೆ ವೀರಭದ್ರಪ್ಪ ಶಿರೂರು ವೃತ್ತದಲ್ಲಿ ಅಭಿಮಾನಿಗಳು ಅರ್ಧ ಗಂಟೆಗೂ ಅಧಿಕ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸಲಿಂಗಪ್ಪ ಭೂತೆ, ಈರಣ್ಣ ಹುಬ್ಬಳ್ಳಿ, ಸಿ.ಎಚ್.ಪೊಲೀಸ್ ಪಾಟೀಲ, ದ್ಯಾಮಣ್ಣ ಜಮಖಂಡಿ, ಈರಣ್ಣ ಅಣ್ಣಿಗೇರಿ, ಕಲಕಪ್ಪ ಕಂಬಳಿ, ಶಿವಕುಮಾರ ನಾಗಲಾಪುರಮಠ,ಬಸನಗೌಡ ತೊಂಡಿಹಾಳ,ಈಶಪ್ಪ ಅರೇರ, ರಾಮಣ್ಣ ಮುಂದಿನಮನಿ ಹಾಗೂ ಇತರರಿದ್ದರು.